About Us Advertise with us Be a Reporter E-Paper

ಯಾತ್ರಾ panel2

ಪ್ರವಾಸೋದ್ಯಮ ಸಚಿವರಿಗೆ ದಶಸೂಚನೆಗಳು

ವ್ಯೂವ್ ಪಾಯಿಂಟ್: ಶ್ವೇತಾ ಕೆ.ಪಿ.

Without Strategy, Execution is Aimless. Without Execution, Strategy is Useless. -Marris Chang, CEO of TSMC

ಈ ಸಾಲುಗಳು ನಮ್ಮ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಯ ವಸ್ತುಸ್ಥಿತಿಗೆ ಹಿಡಿದ ಕನ್ನಡಿಯಂತಿವೆ. ದೇಶದ ಪ್ರವಾಸೋದ್ಯಮದಲ್ಲಿ ಮೈಲುಗಲ್ಲು ಸೃಷ್ಟಿಸಿರುವ ಕೇರಳ, ಗೋವಾ ರಾಜ್ಯಗಳಿಗಿಂತ ಸುಂದರ ತಾಣಗಳು, ಹಸಿರನ್ನೇ ಪಶ್ಚಿಮಘಟ್ಟಗಳು, ಕರಾವಳಿ, ಮಲೆನಾಡು, ಜಲವನ್ನೇ ಜೀವಾಳವನ್ನಾಗಿಸಿಕೊಂಡಿರುವ ನದಿ, ಕೆರೆ-ತೊರೆಗಳು, ಕಡಲ ತೀರಗಳು, ನಮ್ಮ ಸಂಸ್ಕೃತಿ ಬಿಂಬಿಸುವ ಐತಿಹಾಸಿಕ ಸ್ಥಳ ಗಳು, ನೂರಾರು ದೇವಾಲಯ ಗಳು ಕರ್ನಾಟಕದಲ್ಲಿವೆ. ಆದರೆ ಅವುಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಿ, ಪ್ರವಾಸಿಗರನ್ನು ಆಕರ್ಷಿಸುವಲ್ಲಿ ರಾಜ್ಯ ಸರಕಾರ ಎಡು ವುತ್ತಿದೆ.

ಪ್ರತಿ ಐದು ವರ್ಷಕ್ಕೊಮ್ಮೆ ಸಚಿವರೊಬ್ಬರು ಪ್ರವಾಸೋದ್ಯಮದ ಅಧಿಪತಿ ಳಾಗಿ ಚುಕ್ಕಾಣಿ ಹಿಡಿದು, ‘ರಾಜ್ಯ ಪ್ರವಾಸೋದ್ಯಮದಲ್ಲಿ ಹೊಸ ಕ್ರಾಂತಿ ಸೃಷ್ಟಿಸು ತ್ತೇವೆ, ಖಜಾನೆಯನ್ನು ತುಂಬಿ ತುಳುಕಿಸುತ್ತೇವೆ’ ಎಂದು ಭರವಸೆಗಳ ಬಜೆಟ್‌ನಲ್ಲಿ ಪ್ರವಾಸೋ ದ್ಯಮದ ಅಭಿವೃದ್ಧಿಗೆಂದು ಸಾವಿರಾರು ಕೋಟಿ ರು. ಮೀಸಲಿಡುತ್ತಾರೆ. ಪ್ರವಾಸೋದ್ಯಮದ ಹೊಸ ನೀತಿ ಗಳನ್ನು ರೂಪಿಸುತ್ತಾರೆ. ಆದರೆ, ‘ಹೊರಗಿನ ಗೋಡೆ ಗಳಿಗೆ (ಪ್ರವಾಸಿ ತಾಣಗಳು) ಬಣ್ಣ ಬಳಿದು, ಮೇಲ್ನೋ ಟಕ್ಕೆ ಝಗಮಗಿಸಿ, ಕೆಲಸ ಮಾಡಿದ್ದೇವೆಂದು ಡಂಗೂರ ಸಾರುತ್ತಾರೆ. ಆದರೆ, ಮನೆಯ ಒಳಹೊಕ್ಕು ನೋಡಿದರೆ ಅದೇ ಮುರುಕಲು ಚಾವಣಿ, ಅಂಗಳದಲ್ಲಿ ರಾಶಿ ಕಸ, ಗುಂಡಿಗಳ ಮಧ್ಯೆ ಇರುವ ನೆಲ’. ಇದೇ ಸದ್ಯದ ನಮ್ಮ ರಾಜ್ಯ ಪ್ರವಾಸೋದ್ಯಮದ ವಾಸ್ತವಿಕ ಚಿತ್ರಣ. ಸಂಪೂರ್ಣವಾಗಿ ಬದಲಿಸುವ ಮಹತ್ತರ ಜವಾಬ್ದಾರಿ ಈಗಿನ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಮೇಲಿದೆ. ಒಬ್ಬ ಸಾಮಾನ್ಯ ಪ್ರವಾಸಿಗಳಾಗಿ, ಪ್ರವಾಸಿಗರ ಪರವಾಗಿ ರಾಜ್ಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಒಂದಷ್ಟು ಸಲಹೆಗ ಳು ಇಲ್ಲಿವೆ…

ಅನೂಹ್ಯ ಪ್ರವಾಸಿ ತಾಣ ಗುರುತಿಸಿ
ಬೆಂಗಳೂರಲ್ಲಿ ವಿಧಾನಸೌಧ, ಲಾಲ್‌ಬಾಗ್, ಇಸ್ಕಾನ್.. ಮೈಸೂರಲ್ಲಿ ಅರಮನೆ, ಮೃಗಾಲಯ..ಹೀಗೆ ಒಂದಷ್ಟು ತಾಣಗಳನ್ನು ಗುರುತಿಸಿ, ಅಷ್ಟಕ್ಕೆ ವಿರಾಮ ವನ್ನಿಟ್ಟಿದ್ದಾರೆ. ಆದರೆ, ಪ್ರವಾಸೋದ್ಯಮ ಅಭಿವೃದ್ಧಿ ಯಾಗಬೇಕೆಂದರೆ ಎಲೆಮರೆಕಾಯಿಗಳಂತಿರುವ ಪ್ರವಾಸಿ ತಾಣಗಳನ್ನು ಗುರುತಿಸುವ ಕೆಲಸವಾಗಬೇಕು. ಬೆಂಗಳೂರಿನಲ್ಲಿ ನೋಡಬಹುದಾದ ವೆಂದರೆ ಇಸ್ಕಾನ್ ಒಂದೇ ಎಂದು ಭಾವಿಸಲಾಗಿದೆ. ಆದರೆ, ರಾಗಿಗುಡ್ಡ ಆಂಜನೇಯ ಸ್ವಾಮಿ, ಬನಶಂಕರಿ ಅಮ್ಮ ಸೇರಿ ಅನೇಕ ದೇವಾಲಯಗಳಿವೆ. ಚಿಕ್ಕಮಗ ಳೂರು, ಮಡಿಕೇರಿಯಲ್ಲಿ ಅಲ್ಲಿನ ರೆಸಾರ್ಟ್, ಹೋಂ ಸ್ಟೇಗಳನ್ನು ನಡೆಸುವವರೇ ಒಂದಷ್ಟು ‘ವ್ಯೂವ್ ಪಾಯಿಂಟ್’ ಗಳನ್ನು ಗುರುತಿಸಿ, ಪ್ರವಾಸಿಗರಿಗೆ ನಯನ ಮನೋಹರ ದೃಶ್ಯಗಳನ್ನು ವೀಕ್ಷಿಸಲು ಅನುವು ಮಾಡುತ್ತಿದ್ದಾರೆ. ಇಂಥ ಕೆಲಸಗಳು ಸರಕಾರದಿಂದಲೇ ನಡೆಯಬೇಕು. ಇದಕ್ಕಾಗಿಯೇ ಪ್ರವಾಸೋದ್ಯಮ ಇಲಾಖೆ ವತಿಯಿಂದಲೇ ಒಂದಷ್ಟು ನೌಕಕರನ್ನು ನಿಯೋಜಿಸಿ, ರಾಜ್ಯದಲ್ಲಿರುವ ಅನೂಹ್ಯ ತಾಣಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸುವ ಕೆಲಸವಾಗಬೇಕು.

ಮೂಲಸೌಕರ್ಯ ಅನಿವಾರ್ಯ
ನಾವು ಎಲ್ಲಿಗಾದರೂ ಪ್ರವಾಸ ಕೈಗೊಳ್ಳುವ ಮೊದಲು ಅಲ್ಲಿಗೆ ರಸ್ತೆ ಸರಿ ಇದೆಯೇ? ಉಳಿದುಕೊಳ್ಳಲು ವ್ಯವಸ್ಥೆ ಇದೆಯೇ? ಅಲ್ಲಿ ಊಟ-ತಿಂಡಿ, ನೀರಿನ ವ್ಯವಸ್ಥೆ ಹೇಗಿದೆ? ಎಲ್ಲದಕ್ಕಿಂತ ಮುನ್ನ ಶೌಚಾಲಯಗಳ ವ್ಯವಸ್ಥೆ ಹೇಗಿದೆ? ಎಂಬುದರ ಸಂಪೂರ್ಣ ಮಾಹಿತಿಗಳನ್ನು ತಿಳಿದೇ ಅಲ್ಲಿಗೆ ಧಾವಿಸುತ್ತೇವೆ. ಮೂಲಸೌಕರ್ಯಗಳೇ ಇಲ್ಲವೆಂದರೆ, ಕಷ್ಟಪಟ್ಟು ದುಡಿದ ಹಣ ವ್ಯಯಿಸಿ, ಪ್ರಯಾಸದ ಪ್ರವಾಸಕ್ಕೆ ಯಾರೊಬ್ಬರು ಇಚ್ಛಿಸರು. ಹಾಗಾ ಗಿಯೇ ರಾಜ್ಯದ ಎಷ್ಟೋ ಅನನ್ಯ ಪ್ರವಾಸಿ ತಾಣಗಳು ಪ್ರವಾಸಿಗರ ಕೊರತೆಯಿಂದ ಹೀಗಾದರೆ ಪ್ರವಾಸೋದ್ಯಮ ನೆಲಕಚ್ಚದಿರದೇ? ಅಭಿ ವೃದ್ಧಿಗಾಗಿ ಮೀಸಲಿಟ್ಟಿರುವ ಹಣದಿಂದ ಗುಂಡಿಗಳ ನಡುವೆ ಮುಚ್ಚಿ ಹೋಗಿರುವ, ದಾರಿ ಕಾಣದಂತಿರುವ ರಸ್ತೆಗಳಿಗೊಂದು ದಾರಿ ತೋರಿ, ಎಲ್ಲಾ ಪ್ರವಾಸಿ ತಾಣ ಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಪ್ಲಾಸ್ಟಿಕ್ ನೀರಿನ ಬಾಟಲಿ ಬಳಕೆಯನ್ನು ನಿಯಂತ್ರಿಸಿ, ಪ್ರವಾಸಿ ತಾಣಗಳ ಸಮೀಪವೇ ಸರಕಾರ ದಿಂದಲೇ ಕಡಿಮೆ ದುಡ್ಡಿಗೆ ವಸತಿ ವ್ಯವಸ್ಥೆ ಕಲ್ಪಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹರಿದು ಬರುವುದರಲ್ಲಿ ಸಂಶಯವೇ ಇಲ್ಲ. ಪ್ರತಿ ಪ್ರವಾಸಿ ತಾಣದಲ್ಲೂ ಶೌಚಾಲಯ ಗಳನ್ನು ನಿರ್ಮಿಸುವ ಕೆಲಸ ತುರ್ತಾಗಿ ನಡೆಯಲಿ.

ಪ್ರವಾಸಿ ಸಾರಿಗೆ
ಎಲ್ಲರ ಬಳಿಯು ಕಾರು, ಬೈಕುಗಳಿರುವುದಿಲ್ಲ. ಎಲ್ಲಿಗಾ ದರೂ ಹೋಗಬೇಕೆಂದರೆ ಬಹುತೇಕ ಮಂದಿ ಬಸ್, ರೈಲುಗಳನ್ನೇ ಹೆಚ್ಚಾಗಿ ಅವಲಂಬಿಸಬೇಕು. ಮೈಸೂರಿ ನಿಂದ ಉತ್ತರ ಕನ್ನಡಕ್ಕೆ ಬಸ್ಸಿನಲ್ಲಿ ಹೋಗಿಬಿಡುತ್ತೇವೆ. ಆದರೆ, ಅಲ್ಲಿರುವ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕೆಂದರೆ, ಯಾವ ಮಾರ್ಗದಲ್ಲಿ ಯಾವ ಬಸ್ ಹಿಡಿ ಯಬೇಕು ಎಂಬ ಗೊಂದಲಕ್ಕೀಡಾಗುವುದು ಸಹಜ. ಇದರ ನಿವಾರಣೆಗೆ ಪ್ರತಿ ಜಿಲ್ಲೆಯಲ್ಲಿ ಸಮೀಪದಲ್ಲಿರುವ ಪ್ರವಾಸಿ ತಾಣಗಳನ್ನು ಗುರುತಿಸಿ, ಅಲ್ಲಿಗೆಲ್ಲಾ ಪ್ರವಾಸಿಗರನ್ನು ಕರೆದೊಯ್ಯಲು ಪ್ರವಾಸಿ ಸಾರಿಗೆ ಸಂಪರ್ಕ ಕಲ್ಪಿಸುವುದರ ಜತೆಗೆ ಮತ್ತೆ ತಾವಿದ್ದ ಜಾಗಕ್ಕೆ ಕರೆತರುವ ವ್ಯವಸ್ಥೆಯನ್ನೂ ಮಾಡಬೇಕು. ಇದಕ್ಕೆ ಸಮರ್ಪಕ ಬೆಲೆ ನಿಗದಿಸಿದರಾಯಿತು. ಅಲ್ಲದೇ ಪ್ರತಿ ಜಿಲ್ಲೆಯಿಂದ ನೇರ ಬಸ್ಸಿನ ಸಂಪರ್ಕ ಕಲ್ಪಿಸಿದರೆ ಪ್ರವಾಸಿಗರ ಸಂಖ್ಯೆ ಯನ್ನು ಇಮ್ಮಡಿಸುತ್ತದೆ.

ಪ್ರಚಾರ
ಎಷ್ಟೋ ಸಿನೆಮಾಗಳು ಪ್ರಚಾರದ ಕೊರತೆಯಿಂದಲೇ ಬಾಕ್‌ಸ್ ಆಫೀಸಿನಲ್ಲಿ ನೆಲಕಚ್ಚಿರುವ ಉದಾಹರಣೆ ಗಳಿವೆ. ಅದೇ ಸ್ಥಿತಿ ನಮ್ಮ ರಾಜ್ಯ ಪ್ರವಾಸೋದ್ಯಮಕ್ಕೆ ಬರಬಾರ ದೆಂದರೆ ರಾಜಸ್ತಾನ್ ಪ್ರವಾಸೋದ್ಯಮಕ್ಕೆ ಬಚನ್ ರಾಯಭಾರಿಯನ್ನಾಗಿಸಿ ಪ್ರಚಾರ ಕೊಡಿಸಿ ದಂತೆ, ನಮ್ಮ ರಾಜ್ಯದ ಪ್ರವಾಸೋದ್ಯಮಕ್ಕೆ ಸ್ಟಾರ್‌ ನಟರನ್ನು ರಾಯಭಾರಿಯನ್ನಾಗಿ ಹೆಚ್ಚಿನ ಪ್ರಚಾರ ನೀಡಿದರೆ, ಹೊರರಾಜ್ಯಗಳಿಂದ, ದೇಶಗಳಿಂದ ಪ್ರವಾಸಿ ಗರನ್ನು ಸೆಳೆಯಬಹುದು.

ಭದ್ರತೆ, ಪರಿಣತ ಗೈಡ್‌ಗಳ ನಿಯೋಜನೆ
ಸಾಮಾನ್ಯವಾಗಿ ಯುವಕ-ಯುವತಿಯರು ಗುಂಪು ಕಟ್ಟಿಕೊಂಡು ಅಥವಾ ಒಂದಿಬ್ಬರು ಸೇರಿ ಟ್ರಿಪ್‌ಗೆ ಹೋಗು ತ್ತಾರೆ. ಅದರಲ್ಲೂ ಹುಡುಗಿಯರೇ ಹೋದಾಗ ಸುರಕ್ಷತೆ ಬಹುಮುಖ್ಯ. ಯುವಕರು ಜಲಪಾತಗಳು, ಬೀಚ್‌ಗಳಿಗೆ ಹೋದಾಗ ಹುಮ್ಮಸ್ಸಿನಲ್ಲಿ ನೀರಿಗಿಳಿದು, ಮುಳುಗಿ ಸಾವಿನ ಹಾದಿ ಹಿಡಿಯುವವರೇ ಹೆಚ್ಚು. ಆಳ ಹಾಗೂ ಸಂಬಂಧಿಸಿದಂತೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು. ಜತೆಗೆ ಪ್ರತಿ ಪ್ರವಾಸಿ ತಾಣಕ್ಕೂ ಸರಕಾರ ದಿಂದಲೇ ಪರಿಣತ ಗೈಡ್‌ಗಳನ್ನು ನಿಯೋಜಿಸಬೇಕು. ಇವರು ಪ್ರವಾಸಿಗರಿಗೆ ಸ್ಥಳದ ಬಗ್ಗೆ ಮಾಹಿತಿ ನೀಡುವು ದರ ಜತೆಗೆ ಭದ್ರತೆ ಒದಗಿಸುವಷ್ಟು ಸಮರ್ಥರಾಗಿರಬೇಕು.

ಸಾಹಸ ಚಟುವಟಿಕೆಗಳಿಗೆ ಪ್ರೋತ್ಸಾಹ
ಅರೇ, ಅಲ್ಲೇನಿದೆ ಬೆಟ್ಟ-ಗುಡ್ಡ. ಅದನ್ನು ವೆಬ್‌ಸೈಟ್‌ನಲ್ಲಿ ನೋಡಿದರಾಯಿತು ಅಂದುಕೊಳ್ಳುವವರ ಸಂಖ್ಯೆ ಹೆಚ್ಚು. ಇದಕ್ಕೆ ಪರಿಹಾರವೆಂದರೆ ಪ್ರತಿ ತಾಣದಲ್ಲೂ ಅಲ್ಲಿನ ವಾತಾವರಣಕ್ಕೆ ಸೂಕ್ತವಾಗುವ ಬೋಟಿಂಗ್, ಫಿಶಿಂಗ್, ಸಫಾರಿ, ಸ್ಕೂಬಾ ಡೈವಿಂಗ್‌ನಂಥ ಸಾಹಸ ಚಟುವಟಿಕೆಗಳನ್ನು ಆಯೋಜಿಸುವತ್ತ ಹರಿಸಬೇಕು. ಇದ ರಿಂದ ಪ್ರವಾಸಿಗರಿಗೆ ಮನರಂಜನೆ ಯೂ ಸಿಗುತ್ತದೆ. ಸರಕಾರದ ಖಜಾನೆಯೂ ತುಂಬುತ್ತದೆ.

ವಿಭಾಗಗಳಾಗಿ ವಿಂಗಡಣೆ
ವನ್ಯಜೀವಿ ಪ್ರವಾಸೋದ್ಯಮ, ಅರಣ್ಯಗಳು, ಜಲಪಾತ ಗಳು, ದೇವಾಲಯಗಳು, ಕಡಲತೀರಗಳು, ಪಶ್ಚಿಮ ಘಟ್ಟಗಳು, ಕಲೆ ಮತ್ತು ಸಂಸ್ಕೃತಿ, ಆಹಾರ ಪ್ರವಾಸೋ ದ್ಯಮ ಹೀಗೆ ವಿಭಾಗಗಳಾಗಿ ವಿಂಗಡಿಸಿ, ಒಂದೊಂದು ವಿಭಾಗದ ಅಭಿವೃದ್ಧಿಗೆ ಇಂತಿಷ್ಟು ಹಣ, ಸಿಬ್ಬಂದಿಯನ್ನು ನಿಯೋಜಿಸಿದರೆ ಸುಲಭವಾಗಿ ಕ್ರಿಯಾ ಯೋಜನೆ ಗಳನ್ನು ರೂಪಿಸಿ, ಕಾರ್ಯರೂಪಗೊಳಿಸಲು ನೆರವಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯೂ ಹೆಚ್ಚುತ್ತದೆ.

ಮಾಹಿತಿ ಹೊತ್ತಗೆ
ಜಿಲ್ಲೆಯಿಂದಲೂ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳ ಸಂಪೂರ್ಣ ಮಾಹಿತಿಯನ್ನೊಳ ಗೊಂಡ ಒಂದು ಹೊತ್ತಗೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ಹೊರತರುವುದು ಒಳಿತು. ಅದ ರೊಂದಿಗೆ ಇಲಾಖೆಯ ವೆಬ್‌ಸೈಟ್‌ನಲ್ಲೂ ಸುಲಭವಾಗಿ ಎಲ್ಲಾ ಬಗೆಯ ಮಾಹಿತಿ ಲಭಿಸುವಂತೆ ಅನುವು ಮಾಡಬೇಕಿದೆ.

ಹೊಸ ಯೋಜನೆಗಳು
ಕೇರಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಿನ್ನೀರಿನ ಬಳಕೆ ಮಾಡಿಕೊಂಡಂತೆ ರಾಜ್ಯದಲ್ಲಿರುವ ನದಿ ಗಳನ್ನು ಬಳಸಿಕೊಂಡು ಹಿನ್ನೀರಿನ ಪ್ರವಾಸೋದ್ಯಮಕ್ಕೆ ಅನುವು ಮಾಡಬೇಕು. ಅಲ್ಲದೇ, ಆಗಾಗ್ಗೆ ಆಹಾರ ಮೇಳ, ಉತ್ಸವಗಳನ್ನು ಆಯೋಜಿಸುವುದರ ಮೂಲಕ ಪ್ರವಾಸಿಗರನ್ನು ಇಲಾಖೆ ಯಿಂದಲೇ ಪ್ಯಾಕೇಜ್ ಟೂರ್‌ಗಳನ್ನು ಆಯೋಜಿಸಬೇಕು.

ಶಿಸ್ತುಬದ್ಧತೆಗೆ ಆದ್ಯತೆ
ಇದು ಪ್ರವಾಸಿಗರ ಕರ್ತವ್ಯವಾದರೂ ಅದರ ನಿರ್ವಹಣೆ ಸರಕಾರದ್ದೇ. ಜಲಪಾತಗಳು, ಬೀಚ್‌ಗಳು ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಶಿಸ್ತುಬದ್ಧವಾಗಿ ನಡೆದುಕೊಳ್ಳುವುದಿಲ್ಲ. ಅಲ್ಲಲ್ಲೇ ತ್ಯಾಜ್ಯ ವನ್ನೆಲ್ಲಾ ಬಿಸಾಡುತ್ತಾರೆ. ವಿದೇಶಿ ಪ್ರವಾಸಿಗ ರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಇದಕ್ಕೆಲ್ಲಾ ಕಡಿವಾಣ ಹಾಕುವಂಥ ಕೆಲಸಗಳು ಅತಿ ತುರ್ತಾಗಿ ಆಗಬೇಕಾಗಿದೆ. ಸರಕಾರ ಇಂಥ ಕಾರ್ಯಗಳಿಗೆ ಗಮನ ಹರಿಸ ಬೇಕಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close