About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಬೈಕ್ ರೈಡಿಂಗ್ ಮಾಡಿದ್ದು ಅಪ್ರಾಪ್ತರು, ಆದರೆ ಪ್ರಕರಣ ದಾಖಲಾಗಿದ್ದು ಪೋಷಕರ ವಿರುದ್ದ…!

252 ಪ್ರಕರಣ ದಾಖಲಿಸಿ 1,26,000 ರು. ದಂಡ ವಿಧಿಸಿರುವ ಸಂಚಾರಿ ಪೊಲೀಸರು

ತುಮಕೂರು: ನಗರದಲ್ಲಿ ಅಕ್ಟೋಬರ್‌ನಿಂದ ನವಂಬರ್ 13 ರವರೆಗೆ ಬೈಕ್‌ ಚಾಲನೆ ಮಾಡಿದ ಅಪ್ರಾಪ್ತರ ಪೋಷಕರ ವಿರುದ್ದ 252 ಪ್ರಕರಣಗಳನ್ನು ದಾಖಲು ಮಾಡಿ 1,26,000 ರು. ದಂಡ ವಿಧಿಸಿದ್ದಾರೆ.

ಅಪ್ರಾಪ್ತರು ಚಾಲನೆ ಮಾಡುತ್ತಿದ್ದ ಬೈಕ್‌ ವಶಪಡಿಸಿಕೊಂಡಿರುವ ಪೊಲೀಸರು

ಇತ್ತೀಚೆಗೆ ಅಪ್ರಾಪ್ತ ವಯಸ್ಸಿನವರು ದ್ವಿಚಕ್ರ ವಾಹನಗಳನ್ನು ಅಪಾಯಕಾರಿಯಾಗಿ ಚಾಲನೆ ಮಾಡುತ್ತಿರುವ ಬಗ್ಗೆ ವಿಶೇಷ ಅಭಿಯಾನ ನಡೆಸಿದ್ದರು.

ಇನ್ನು ಮುಂದೆ ಪೋಷಕರುಗಳು ವಾಹನ ಚಾಲನಾ ಇಲ್ಲದೆ ಇರುವ ಅಪ್ರಾಪ್ತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಲು ನೀಡಬಾರದಾಗಿ ತಿಳುವಳಿಕೆ ನೀಡಿ, ಮರುಕಳಿಸಿದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದೆಂದು ತಿಳಿಸಲಾಗಿದೆ.

ಸಂಚಾರ ನಿಯಮಗಳನ್ನು ಪಾಲಿಸುವ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಯಾವಾಗಲೂ ಪೊಲೀಸ್ ಇಲಾಖೆ ಬೆನ್ನೆಲುಬಾಗಿರುತ್ತದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನು ಪೊಲೀಸರು ನೀಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close