Sri Ganesh Tel

ಬೋಧ್ ಗಯಾ ಸ್ಫೋಟ: ಬಾಲಾಪರಾಧ ರಿಮಾಂಡ್‌ಹೋಂಗೆ ‘ಬಾಲ ಭಯೋತ್ಪಾದಕ’

Posted In : ದೇಶ

ಪಟನಾ: 2013ರಲ್ಲಿ ಪಟನಾದ ಗಾಂಧಿ ಮೈದಾನ ಹಾಗು ಬೋಧ್ ಗಯಾದ ಮಹಾಬೋಧಿ ದೇವಸ್ಥಾನದಲ್ಲಿ ನಡೆದ ಬಾಂಬ್ ದಾಳಿಯ ಪ್ರಮುಖ ರುವಾರಿ ತೌಫಿಕ್ ಅನ್ಸಾರಿಯನ್ನು ಬಾಲಾಪರಾಧಿ ನ್ಯಾಯ ಮಂಡಳಿಯ ಕಸ್ಟಡಿಗೆ ಒಪ್ಪಿಸಲಾಗಿದೆ.

ಜಾರ್ಖಂಡ್‌ನ ರಾಂಚಿಯ ನಿವಾಸದಿಂದ ಭಯೋತ್ಪಾದಕ ತೌಫಿಕ್‌ನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬಂಧಿಸಿದೆ.

ಬಾಂಬ್ ದಾಳಿ ನಡೆಸಿದ ಸಂದರ್ಭ ಭಯೋತ್ಪಾದಕ 15 ವರ್ಷ ವಯಸ್ಸಿನವನಾಗಿದ್ದ ಎಂಬ ಕಾರಣಕ್ಕೆ ಆತನನ್ನು ಬಾಲಾಪರಾಧಿಯೆಂದು ಪರಿಗಣಿಸಲಾಗಿದೆ.

ಎರಡೂ ಪ್ರಕರಣದಲ್ಲಿ ತೌಫಿಕ್‌ನನ್ನು ಮೂರು ವರ್ಷಗಳ ಕಾಲ ವಿಶೇಷ ಗೃಹದಲ್ಲಿ ಬಂಧಿಸಿರುವಂತೆ ಬಾಲಾಪರಾಧ ಮಂಡಳಿಯ ಅಧಿಕಾರಿ ದಿವ್ಯಾಾ ಮಿತ್ರಾ ಕೋರಿದ್ದಾರೆ ಎಂದು ಎನ್‌ಐಎನ ಸಾರ್ವಜನಿಕ ಪ್ರಾಸಿಕ್ಯೂಟರ್ ಲಲನ್ ಪ್ರಸಾದ್ ಸಿನ್ಹಾ ಹೇಳಿದ್ದಾರೆ.

ಬೋದ್ ಗಯಾ ದೇವಸ್ಥಾನದ ಆವರಣ ಹಾಗೂ ಗಾಂಧಿ ಮೈದಾನದ ಹಲವೆಡೆ ತೌಫಿಕ್ ಹಾಗೂ ಆತನ ಸಹಚರರು ಬಾಂಬ್‌ಗಳನ್ನು ಇಟ್ಟಿದ್ದು ಈ ‘ಬಾಲಾಪರಾಧ’ಕ್ಕೆ ತೌಫಿಕ್‌ನನ್ನು ಪ್ರತಿಯೊಂದು ಆಪರಾಧಕ್ಕೂ ಮೂರು ವರ್ಷದಂತೆ ಒಟ್ಟಾರೆ ಆರು ವರ್ಷ ಬಂಧನದಲ್ಲಿಡಲು ತೀರ್ಮಾನಿಸಲಾಗಿದೆ. ಪಟನಾದ ರಿಮಾಂಡ್ ಹೋಂನಲ್ಲಿ ತೌಫಿಕ್ ಈಗಾಗಲೇ ಮೂರು ವರ್ಷ ಕಳೆದಿದ್ದ.

2013ರ ಜುಲೈ 7ರಂದು ಬೋಧ್ ಗಯಾದ ದೇವಸ್ಥಾಾನದ ಆವರಣದಲ್ಲಿ ಇಡಲಾಗಿದ್ದ 13 ಬಾಂಬ್‌ಗಳ ಪೈಕಿ 10 ಸ್ಫೋಟಗೊಂಡಿದ್ದವು. ಅದೃಷ್ಟವಶಾತ್ ಘಟನೆಯಲ್ಲಿ ಯಾರೂ ಮೃತಪಟ್ಟಿರಲಿಲ್ಲ. ಆದರೆ ಅಕ್ಟೋಬರ್ 27,2013ರಂದು ಪಟನಾದ ಗಾಂಧಿ ಮೈದಾನದಲ್ಲಿ ನಡೆಯುತ್ತಿದ್ದ ಹೋಂಕಾರ್ ರ್ಯಾಲಿ ಸಂದರ್ಭ ನಡೆದ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದರು.

ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಹೋಂಕಾರ್ ರ್ಯಾಾಲಿಯನ್ನು ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮಾತನಾಡುತ್ತಿದ್ದರು.

ತೌಫಿಕ್ ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಮಿಯ ಸಕ್ರಿಯ ಸದಸ್ಯನಾಗಿದ್ದ. ತೌಫಿಕ್‌ನನ್ನು ಶಂಕಿತ ಸಿಮಿ ಭಯೋತ್ಪಾದಕ ಎಂದು ರಾಯ್ಪುರ ಪೊಲೀಸರು ಗಂಭೀರ ಆಪಾದನೆ ಹೊರಿಸಿದ್ದಾರೆ.

ತೌಫಿಕ್ ಮೇಲೆ ಕ್ರಿಮಿನಲ್ ಸಂಚು, ಕೊಲೆ, ದೇಶದ ವಿರುದ್ಧ ಯುದ್ಧ ಘೋಷಣೆ ಸೇರಿದಂತೆ ಹಲವಾರು ಗಂಭಿರ ಕಾಯ್ದೆಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *

nineteen − nineteen =

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top