ಬ್ಲಾಕ್ ಅಂಡ್ ವೈಟ್ ಹಣ ವಿನಿಮಯ ಸಿಸಿಬಿ ಪೇದೆ ಸೇರಿದಂತೆ ಐವರ ಬಂಧನ

Posted In : ಬೆಂಗಳೂರು, ರಾಜ್ಯ

ಬೆಂಗಳೂರು:ಕಮಿಷನ್ ಆಸೆಗೆ ಹಳೇ ನೋಟುಗಳನ್ನ ಹೊಸ ನೋಟುಗಳಾಗಿ ವಿನಿಮಯ ಮಾಡಲು ಹೋದವರನ್ನೆ ಅಪಹರಣ ಮಾಡಿ ಹಲ್ಲೆ ನಡೆಸಿ ಲಕ್ಷಾಂತರ ರು. ಕದ್ದೊಯ್ದಿದ್ದಿದ ಆರೋಪಿಗಳನ್ನು ಮಾಗಡಿ ರಸ್ತೆ ಪೊಲೀಸರು ಬಂದಿಸಿದ್ದಾರೆ.

ಸಿಸಿಬಿಯ ಸಂಘಟಿತ ಅಪರಾಧ ವಿಭಾಗದ ಪೇದೆ ಶೇಷ ಎಂಬಾತ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬೈರೇಶ್, ಪವನ್,ವಿಜಯ್ ಮತ್ತು ಮಣಿವಣ್ಣನ್ ಮತ್ತಿತರ ಬಂಧಿತರು.ಇವರಲ್ಲಿ ಕರ್ನಾಟಕ ರಕ್ಷಣ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಸಂಘಟಕರಾದ ಭೈರೇಶ್ ಮತ್ತು ವಿಜಯ್ ಕೂಡ ಭಾಗಿಯಾಗಿದ್ದರು. ಕೆಂಪೇಗೌಡ ನಗರದ ನಿವಾಸಿಯಾಗಿರುವ ಜೈಶಂಕರ್ ವಿಜಯನಗರದಲ್ಲಿ ಶ್ರೇಯಸ್ ಎಲೆಕ್ಟ್ರಿಕಲ್ ಗೂಡ್ಸ್ ವ್ಯಾಪಾರಿಯಾಗಿದ್ದ ಈತನ ಬಳಿಯಿದ್ದ 21.20ಲಕ್ಷ ಕ್ಕೆ ಪ್ರತಿಯಾಗಿ 25ಲಕ್ಷ ಹಳೇ ನೋಟುಗಳನ್ನು ನೀಡುವುದಾಗಿ ಆರೋಪಿಗಳು ಕಮಿಷನ್ ಅಮಿಷ ಒಡ್ಡಿದ್ದರು.ಜೈ ಶಂಕರ್ ತನ್ನ ಆರು ಜನ ಸ್ನೇಹಿತರ ಬಳಿ ಈ ಬಗ್ಗೆ ಚರ್ಚೆ ನಡೆಸಿದ್ದ ಹಾಗೆ 21.20 ಲಕ್ಷ ಹಣ ಸಂಗ್ರಹಣೆ ಮಾಡಿದ್ದ. ಈ ಹಣವನ್ನು ಮಾಗಡಿರಸ್ತೆಯ ಸ್ಟಾರ್ ಬಜಾರ್ ಬಳಿ ತನ್ನ ಸ್ನೇಹಿತ ಗಿರೀಶ್‌ನೊಂದಿಗೆ ಮಾರುತಿ ಕಾರಿನಲ್ಲಿ ತೆಗೆದುಕೊಂಡು ಹೋಗಿದ್ದ.

ಅಲ್ಲಿಗೆ ಬಂದ ಮಣಿವಣ್ಣನ್ ಮತ್ತು 9 ಮಂದಿ ಮಾದನಾಯಕನಹಳ್ಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿ ಜೈ ಶಂಕರ್ ಬಳಿಯಿರುವ 2000 ನೋಟಿನ ಹಣ ಕಸಿದು ಹಲ್ಲೆ ಮಾಡಿದ್ದಾರೆ . ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆಗೆ ಹೆದರದ ಜೈ ಶಂಕರ್ ನೇರವಾಗಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು ಪ್ರಕರಣ ಭೇದಿಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇನ್ನುಳಿದ ನಾಲ್ವರಿಗಾಗಿ ಶೋಧ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾದ12 ಗಂಟೆಗಳಲ್ಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

sixteen + 11 =

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

 

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

Back To Top