ಭಾರತಕ್ಕೆ ಫ್ರಾನ್‌ಸ್‌ ರಕ್ಷಣಾ ಸಚಿವೆ

Posted In : ದೇಶ

ದೆಹಲಿ: ಡೆಸೆಂಬರ್‌ನಲ್ಲಿ ಫ್ರಾನ್‌ಸ್‌ ಅಧ್ಯಕ್ಷ ಎಮ್ಮ್ಯಾನುಯೆಲ್ ಮೆಕ್ರಾನ್ ಭಾರತ ಭೇಟಿಗೂ ಮುನ್ನ ಅಲ್ಲಿನ ರಕ್ಷಣಾ ಸಚಿವ ಫ್ಲಾರೆನ್ಸ ಪಾರ್ಲೆ ದೆಹಲಿಗೆ ಭೇಟಿ ನೀಡಲಿದ್ದಾರೆ.

ಈ ಸಂದರ್ಭ ಭಾರತ-ಫ್ರಾಾನ್‌ಸ್‌ ನಡುವೆ ದ್ವಿಪಕ್ಷೀಯ ಮಟ್ಟದಲ್ಲಿ ವ್ಯೂಹಾತ್ಮದ ಸಂಬಂಧಕ್ಕೆ ವೇದಿಕೆ ನಿರ್ಮಿಸುವ ಕೆಲಸವಾಗಲಿದೆ.

ರಫೇಲ್‌ನ 36 ಯುದ್ಧ ವಿಮಾನಗಳನ್ನು ಖರೀದಿಸಲು ಕಳೆದ ಸೆಪ್ಟೆoಬರ್‌ನಲ್ಲಿ ಉಭಯ ದೇಶಗಳ ನಡುವೆ 59,000 ಕೋಟಿ ರು ಮೌಲ್ಯದ ಒಪ್ಪಂದವೇರ್ಪಟ್ಟಿತ್ತು. ಇನ್ನೂ ಹೆಚ್ಚಿನ ಯುದ್ಧ ವಿಮಾನಗಳನ್ನು ಮಾರಲು ರಫೇಲ್ ಉತ್ಸುಕವಾಗಿದೆ.

ನವೆಂಬರ್ 2019 ಹಾಗೂ 2022ರ ಮಧ್ಯದ ವೇಳೆಗೆ ಸದರಿ ಖರೀದದಿಸುತ್ತಿರುವ ರಫೇಲ್ ಯುದ್ಧ ವಿಮಾನಗಳನ್ನು ಪಶ್ಚಿಮ ಬಂಗಾಳದ ಹಸೀಮಾರಾ ಹಾಗೂ ಹರಿಯಾಣಾದ ಅಂಬಾಲಾದಲ್ಲಿ ಇಡಲಾಗುವುದು. ಇನ್ನೂ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ವಾಯುಪಡೆ ಉತ್ಸುಕವಾಗಿದೆ.

ಅಕ್ಟೋಬರ್ 27-28ರಂದು ಭಾರತಕ್ಕೆ ಭೇಟಿ ನೀಡಲಿರುವ ಪಾರ್ಲೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ರೊಂದಿಗೆ ಭದ್ರತೆ, ನಾವಿಕ ಸುರಕ್ಷೆ, ರಕ್ಷಣಾ ಯೋಜನೆಗಳು, ಭಯೋತ್ಪಾದನೆ ವಿರುದ್ಧ ಹೋರಾಟ ಸೇರಿದಂತೆ ಹಲವು ವಿಚಾರಗಳಲ್ಲಿ ಮಹತ್ವದ ಮಾತುಕತೆ ನಡೆಯಲಿದೆ.

ಇದೇ ಸಂದರ್ಭ ಫ್ರಾನ್‌ಸ್‌‌ನ ಡಸೌ ವಿಮಾನಯಾನ ಸಂಸ್ಥೆ ಹಾಗೂ ರಿಲಾಯನ್‌ಸ್‌ ಡಿಫೆನ್‌ಸ್‌ ಜಂಟಿ ಸಹಯೋಗದಲ್ಲಿ ನಾಗ್ಪುರದಲ್ಲಿ ನಿರ್ಮಿಸಲಾಗುತ್ತಿರುವ ಸೌಲಭ್ಯವೊಂದಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು.

ಯುದ್ಧ ವಿಮಾನಗಳ ಖರೀದಿಗೆಂದು ಮಾಡಿಕೊಂಡಿದ್ದ 59,000 ಕೋಟಿ ರುಗಳ ಅರ್ಧದಷ್ಟನ್ನು ಆಫ್‌ಸೆಟ್ ರೂಪದಲ್ಲಿ ಫ್ರಾನ್‌ಸ್‌ ಭಾರತದಲ್ಲಿ ಹೂಡಿಕೆ ಮಾಡಬೇಕಿದೆ.

ವಾಯುಪಡೆಗೆ ಅತ್ಯಗತ್ಯವಿದ್ದ 20 ಶತಕೋಟಿ ಡಾಲರ್ ಮೌಲ್ಯದ 126 ಯುದ್ಧ ವಿಮಾನಗಳ ಮಧ್ಯಮ ಗಾತ್ರದ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆಯನ್ನು ನರೇಂದ್ರ ಮೋದಿ ಸರಕಾರ ವಜಾಗೊಳಿಸಿತ್ತು.

70,000 ಕೋಟಿ ರು ಮೌಲ್ಯದ ಪ್ರಾಾಜೆಕ್‌ಟ್‌-75(ಭಾರತ) ಯೋಜನೆಯಡಿ ಆರು ಸುಧಾರಿತ ಜಲಾಂತರ್ಗಾಮಿ ನೌಕೆಗಳ ನಿರ್ಮಾಣಕ್ಕೆೆ ಫ್ರಾಾನ್‌ಸ್‌ ಕೂಡಾ ಉತ್ಸುಕತೆ ತೋರುತ್ತಿದೆ.

 

 

 

 

Leave a Reply

Your email address will not be published. Required fields are marked *

twelve − five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top