ವಿಶ್ವವಾಣಿ

ಭಾರತದ ಮೊದಲ ಕ್ಲೌಡ್ ಟಿವಿ ಎಕ್ಸ್ 2 ಬಿಡುಗಡೆ

ಕೌಡ್ ವಾಕರ್ ಇದೀಗ ಭಾತದ ಮೊದಲ 4 ಕೆ ರೆಡಿ ಸಂಪೂರ್ಣ ಎಚ್ ಡಿ ಸ್ಮಾರ್ಟ್ ಟಿವಿ ಕ್ಲೌಡ್ ಟಿವಿ ಎಕ್‌ಸ್ 2 ಅನ್ನು ಬಿಡುಗಡೆ ಮಾಡುವ ಮೂಲಕ ಮನ ರಂಜನೆಯ ವೀಕ್ಷಣೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಭಾರತದಲ್ಲಿ ಮೊದಲ ಬಾರಿಗೆ 4 ಕೆ ರೆಡಿ ಫುಲ್ ಎಚ್ ಡಿ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ 7.0 ನೌಗಟ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಕೊಡುಗೆ ಯಾದ 4ಕೆ ಫುಲ್ ಎಚ್ ಡಿ ಸ್ಮಾರ್ಟ್ ಟಿವಿ ಕಣ್ಣುಗಳಿಗೆ ಹಬ್ಬ ಉಂಟು ಮಾಡುವು ದಲ್ಲದೆ ಥಿಯೇಟರ್ ಅನುಭವ ನೀಡುವ ಧ್ವನಿ (ಸೌಂಡ್ ಎಫೆಕ್ಟ್)ಯನ್ನೂ ಹೊಂದಿದೆ. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸವನ್ನು ನಿರ್ವಹಿಸುವ ಇದು ಬಳಕೆದಾರರಿಗೆ ಅತಿ ವೇಗದ ಸೇವೆ ನೀಡುತ್ತದೆ.

ಕ್ಲೌಡ್ ಟಿವಿ ಎಕ್ಸ್ 2ನಲ್ಲಿ ಟಿವಿ ಪ್ರದರ್ಶನ, ಸಾಕ್ಷ್ಯಚಿತ್ರ, ಸಂಗೀತ, ವೀಡಿಯೋ, ಅಪ್ಲಿಕೇಶನ್ ಹಾಗೂ ಇನ್ನೂ ಹೆಚ್ಚಿನದನ್ನು ವೀಕ್ಷಿಸಬಹುದು. ಮನೋರಂಜನೆಯೆಂಬ ಅಂತ್ಯವಿಲ್ಲದ ಲೋಕವನ್ನು ಅನಿಯಮಿತವಾಗಿ ಅನುಭವಿಸಲು ಇದು ಅತ್ಯುತ್ತಮ ಅವಕಾಶ ನೀಡುತ್ತದೆ. ಟಿವಿ ವೀಕ್ಷಿಸುತ್ತಲೇ ಅಂತರ್ಜಾಲ ಜಗತ್ತಿನ ಸಾವಿರಾರು ಅಪ್ಲಿಕೇಶನ್‌ಗಳನ್ನು ಕುಳಿತಲ್ಲಿಂದಲೇ ಸುಧಾರಿತ ರಿಮೋಟನಿಂದ (ಇನ್‌ಬಿಲ್ಡ್ ಏರ್ ಮೌಸ್) ಡೌನ್‌ಲೋಡ್ ಮಾಡಬಹುದು ಹಾಗೂ ನ್ಯಾವಿಗೇಶನ್‌ಗಳನ್ನು ತಿಳಿಯಬಹುದು ಎಂಬುದು ಇದರ ಇನ್ನೊಂದು ವಿಶೇಷ.

ಟಿವಿ-ಮೊಬೈಲ್ ಗೆ ವಯರ್‌ಲೆಸ್ ಮೀಡಿಯಾ ಶೇರಿಂಗ್ ಆಯ್ಕೆಯನ್ನೂ ನೀಡುತ್ತದೆ. ಟಿವಿಗೆ ಪರದೆ ಕನ್ನಡಿಯಾಗಿ ಕೆಲಸ ಮಾಡುತ್ತದೆ, ರಿಮೋಟ್ ವಯರ್‌ಲೆಸ್ ಕೀಬೋರ್ಡ್ ಅಥವಾ ಏರ್ ಮೌಸ್ ನಂತೆ ಬಳಕೆಯಾಗುತ್ತದೆ. ಇದಲ್ಲದೆ ಉಚಿತ ಜೀವಿತಾವಧಿಯ ಚಂದಾದಾರಿಕೆಯಿಂದ ಬೇಕಿದ್ದಷ್ಟು ಸಿನೆಮಾ, ಡಾಕ್ಯುಮೆಂಟರಿ ಹಾಗೂ ಕಿರುಚಿತ್ರಗಳನ್ನು ವೀಕ್ಷಿಸಬಹುದು. ಬಳಕೆದಾರರು ತಮ್ಮದೇ ಒಂದು ಖಾತೆ ತೆಗೆದು ತಮಗಿಷ್ಟದ ವೀಡಿಯೋ ಹಾಡುಗಳನ್ನು ಕ್ಲೌಡ್ ಟಿವಿ ಎಕ್‌ಸ್2ವಿನಲ್ಲಿ ಸೇವ್ ಮಾಡಿಕೊಂಡು ಬೇಕಿದ್ದಾಗ ಹಾಕಿ ಕೇಳಿ ಆನಂದಿಸಬಹುದು. ಇದರೊಂದಿಗೆ ಒಟಿಎ ನೆರವಿನಿಂದ ಅಂತರ್ಜಾಲದೊಂದಿಗೆ ಸಂಪರ್ಕ ಪಡೆದು ಕೊಂಡು ಸ್ವಯಂ ಅಪ್ಡೇಟ್ ಹೊಂದಿ ಉತ್ತಮ ಕ್ಷಮತೆ ಹಾಗೂ ಮನರಂಜನೆ ನೀಡುತ್ತದೆ.

32ರಿಂದ 55 ಇಂಚು ವ್ಯಾಪ್ತಿಯ ಈ ಸ್ಮಾರ್ಟ್ ಟಿವಿಯ ಬೆಲೆ 14,990ರಿಂದ ಆರಂಭಗೊಳ್ಳುತ್ತದೆ. ಲುಮಿನಸ್ ಡಿಸ್ಪ್ಲೇ, ಬಾಕ್ಸ್, ಸ್ಪೀರ್ಸ್, ಇನ್‌ಬಿಲ್ಟ್ ವೈಫೈ, ಆಕರ್ಷಕ ವಿನ್ಯಾಸ, ತೆಳ್ಳಗಿನ ಆಕಾರದ ಈ ಟಿವಿ ನಿಮ್ಮ ಮನೆಯಲ್ಲಿದ್ದರೆ ಮನೆಯ ಸೌಂದರ್ಯವೂ ಹೆಚ್ಚುವುದು ನಿಸ್ಸಂಶಯ. ಇದರ ಆರಂಭಿಕ ಬೆಲೆ ಕೇವಲ ರೂ.14,990.

ಕ್ಲೌಡ್ ಟಿವಿ ಎಕ್ಸ್ 2 ವೈಶಿಷ್ಟ್ಯಗಳು
*4 ಕೆ ರೆಡಿ-ಪೂರ್ಣ ಎಚ್ಡಿ/ಎಚ್ಡಿ ಟಿವಿಯಲ್ಲಿ ಕೆ ಯಲ್ಲಿ ದೃಶ್ಯಗಳು ಪ್ರಸಾರವಾಗುತ್ತವೆ.
*ಆಂಡ್ರಾಯ್ಡ್ 7.0 ನೌಗಟ್ ಒಎಸ್
*ಕ್ವಾಡ್-ಕೋರ್ ಎಆರ್‌ಎಂ ಕಾರ್ಟೆಕ್ಸ್ ಪ್ರೊಸೆಸರ್
*ಕಂಟೆಂಟ್ ಡಿಸ್ಕವರಿ ಎಂಜಿನ್-ಸಂಗ್ರಹಿಸಲಾದ ವೀಡಿಯೋ ಹಾಗೂ ಅಪ್ಲಿಕೇಶನ್‌ಗಳು
*ಪ್ರಸಿದ್ಧ ಆಂಡ್ರಾಯ್ಡ್ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿ ವೀಕ್ಷಿಸಬಹುದು
*ಸೂಪರ್ ರಿಮೋಟ್ ವಿಥ್ ಇನ್‌ಬಿಲ್ಟ್ ಏರ್ ಮೌಸ್
*ಸಿಶೇರ್-ಮೊಬೈಲ್ ಕಂಟೆಂಟ್ ಹಾಗೂ ರಿಮೋಟ್ ಆ್ಯಪ್
*ಆಂಡ್ರಾಯ್ಡ್ ಟಿವಿ ಸ್ಟೈಲ್ ಯೂಸರ್-ಇಂಟರ್‌ಫೇಸ್
*ಇನ್‌ಬಿಲ್ಟ್ ಬಾಕ್ಸ್ 20ಡಬ್ಲ್ಯೂ ಪ್ರಬಲ ಧ್ವನಿ
*ಮೂವಿಬಾಕ್ಸ್ ಗೆ ಉಚಿತ ಜೀವಮಾನ ಚಂದಾದಾರಿಕೆ
*ಒಟಿಎ ಮುಖಾಂತರ ನಿಯಮಿತ ಸಾಫ್ಟ್ ವೇರ್ ಅಪ್ಡೇಟ್