About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಭಾರತ-ಇಂಗ್ಲೆಂಡ್‌ ನಾಲ್ಕನೇ ಟೆಸ್ಟ್ ಪಂದ್ಯ: ಆತಿಥೇಯ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್‌ ಪರೇಡ್‌

ಸೌಥಂಪ್ಟನ್: ಭಾರತೀಯ ವೇಗದ ಬೌಲರ್‌ಗಳ ಮಾರಕ ದಾಳಿಯನ್ನು ಎದುರಿಸಲು ಆತಿಥೇಯ ಬ್ಯಾಟ್ಸ್‌ಮನ್‌ಗಳು ಪರದಾಡಿದ ಪರಿಣಾಮ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.

ಮೊದಲು ಬೌಲಿಂಗ್ ಮಾಡಿದ ಭಾರತ ಪಿಚ್‌ನ ವೇಗ ಪುಟಿತದ ನೆರವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಇಂಗ್ಲೆಂಡ್ 66.2  ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.

ಆಂಗ್ಲರ ಪರ ಆರಂಭಿರಾಗಿ ಕಣಕ್ಕಿಳಿದ ಅಲಸ್ಟೇರ್ ಕುಕ್ (17) ಹಾಗೂ ಜೆನ್ನಿಂಗ್‌ಸ್ (0) ಜೋಡಿ ಪಂದ್ಯದ ಆರಂಭದಲ್ಲೇ ಬೇರ್ಪಟ್ಟಿತು. ವೇಗಿ ಜಸ್ಪ್ರೀತ್ ಬುಮ್ರಾ ಅವರ ಅತ್ಯಾಕರ್ಷಕ ಸ್ವಿಂಗ್ ಎಸೆತವನ್ನು ಅರಿಯುವಲ್ಲಿ ವಿಫಲರಾದ ಜೆನ್ನಿಂಗ್ಸ್ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಬಂದ ಜೋ ರೂಟ್ (4) ತಂಡಕ್ಕೆ ಆಸರೆಯಾಗಲು ವಿಫಲರಾದರು.

ಇಶಾಂತ್ ಶರ್ಮಾ ಎಲ್‌ಬಿ ಮಾಡುವ ಮೂಲಕ ರೂಟ್‌ಗೆ ಪೆವಿಲಿಯನ್ ಹಾದಿ ತೋರಿದರು. ನಂತರ ಜಾನಿ ಬೇರ್‌ಸ್ಟೋ ಅವರು ಬುಮ್ರಾ ಎಸೆತದಲ್ಲಿ ಕೀಪರ್ ಪಂತ್‌ಗೆ ಕ್ಯಾಚ್ ನೀಡಿ ಹೊರ ನಡೆದರು. ಈ ಹಂತದಲ್ಲಿ ಮತ್ತೊಬ್ಬ ಆರಂಭಿಕ ಕುಕ್, ಕೊಹ್ಲಿಗೆ ಕ್ಯಾಚ್ ನೀಡಿದರು. ಈ ಹಂತದಲ್ಲಿ ಉತ್ತಮ ಆರಂಭ ಪಡೆದ ಬೆನ್ ಸ್ಟೋಕ್ಸ್ (23) ಹಾಗೂ ಜೋಸ್ ಬಟ್ಲರ್ (21) ಮೊಹಮದ್ ಶಮಿಗೆ ಒಪ್ಪಿಸಿದ್ದು, ಇಂಗ್ಲೆಂಡ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು.

ಸ್ಟುವರ್ಟ್ ಬ್ರಾಡ್‌ 1, ಕುರ‍್ರನ್‌ 43  ರನ್‌ ಗಳಿಸಿ ಆಡುತ್ತಿದ್ದಾರೆ. ಭಾರತದ ಪರ ಬುಮ್ರಾ, ಶಮಿ,  ಇಶಾಂತ್‌ ಶರ್ಮಾ ಎರಡು ವಿಕೆಟ್‌ ಪಡೆದರೆ, ಹಾರ್ದಿಕ್‌ ಪಾಂಡ್ಯ, ಅಶ್ವಿನ್‌ ತಲಾ ಒಂದು ವಿಕೆಟ್‌ ಪಡೆದು ಮಿಂಚಿದರು.

ಇಶಾಂತ್ ಶರ್ಮಾ 250: ಭಾರತದ ವೇಗಿ ಇಶಾಂತ್ ಶರ್ಮಾ ಅವರು ಜೋ ರೂಟ್ ಅವರ ವಿಕೆಟ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 250ನೇ ವಿಕೆಟ್ ಪಡೆದರು. ಆ ಮೂಲಕ ಈ ಸಾಧನೆ ಮಾಡಿದ ಭಾರತದ 7ನೇ ಬೌಲರ್ ಆಗಿದ್ದಾರೆ.

ಸಂಕ್ಷಿಪ್ತ ಸ್ಕೋರ್ 
ಇಂಗ್ಲೆಂಡ್ ಮೊದಲ ಇನಿಂಗ್ಸ್ 185ಕ್ಕೆ8 (66.2 ಓವರ್)

Tags

Related Articles

Leave a Reply

Your email address will not be published. Required fields are marked *

Language
Close