Sri Ganesh Tel

ಭಾರತ, ಪಾಕ್‌ಅನ್ನು ಒಂದೇ ತಕ್ಕಡಿಯಲ್ಲಿ ಅಳೆಯಬಾರದು: ರಷ್ಯಾ

Posted In : ದೇಶ

ದೆಹಲಿ: ಪರಮಾಣು ಪೂರೈಕೆದಾರ ಒಕ್ಕೂಟ(ಎನ್‌ಎಸ್‌ಜಿ)ದ ಸದಸ್ಯತ್ವ ಭಾರತಕ್ಕೆ ಸಿಗುವುದಕ್ಕೆ ಚೀನಾ ಸತತ ಅಡ್ಡಗಾಲಾಗುತ್ತಿರುವಂತೆಯೇ ಇತ್ತ ರಷ್ಯಾ ಇದೇ ವಿಚಾರವಾಗಿ ದೆಹಲಿಗೆ ಬೆಂಬಲ ಸೂಚಿಸಿದೆ.

ಎನ್‌ಎಸ್‌ಜಿ ಸದಸ್ಯತ್ವದ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನಗಳನ್ನು ಒಂದೇ ದೃಷ್ಟಿಕೋನದಲ್ಲಿ ನೋಡಲು ಬರುವುದಿಲ್ಲ ಎಂದಿರುವ ರಷ್ಯಾ ಇದೇ ವಿಚಾರವಾಗಿ ಚೀನಾದೊಂದಿಗೆ ಚರ್ಚಿಸುತ್ತಿದೆ.

48 ಸದಸ್ಯರ ಒಕ್ಕೂಟವನ್ನು ವಿಸ್ತರಿಸಲು ನಿಗದಿತ ಮಾನದಂಡಗಳನ್ನು ಅನುಷರಿಬೇಕೆಂದು ಚೀನಾ ಪಟ್ಟು ಹಿಡಿದಿದೆ. ಪರಮಾಣು ಸುರಕ್ಷತೆಯ ಹಿಂದಿನ ದಾಖಲೆ ಆಧಾರದ ಮೇಲೆ ಭಾರತಕ್ಕೆ ಪರಮಾಣು ವ್ಯಾಪಾರದ ನಿಯಂತ್ರಕ ಒಕ್ಕೂಟದಲ್ಲಿ ಸದಸ್ಯತ್ವ ನೀಡುವ ಕುರಿತು ಚೀನಾ ನಕಾರಾತ್ಮಕ ನಿಲುವು ತಳೆದಿದೆ.

ರಷ್ಯಾದ ವಿದೇಶಾಂಗ ಇಲಾಖೆ ಕಿರಿಯ ಸಚಿವ ಸೆರ್ಗೆ ರ‍್ಯಾಬ್ಕೊವ್‌ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಎಸ್‌ ಜೈಶಂಕರ್‌ರನ್ನು ಭೇಟಿ ಮಾಡಿದ್ದಾರೆ. “ಪಾಕಿಸ್ತಾನದ ಅರ್ಜಿಯಲ್ಲಿ ಯಾವುದೇ ಒಮ್ಮತ ಇಲ್ಲವಾಗಿದೆ. ಇದೇ ವಿಚಾರವಾಗಿ ಪಾಕ್‌ಅನ್ನು ಭಾರತದೊಂದಿಗೆ ಹೋಲಿಸುವಂತಿಲ್ಲ” ಎಂದು ರ‍್ಯಾಬ್ಕೊವ್‌ ತಿಳಿಸಿದ್ದಾರೆ.

ಭಾರತ ಹಾಗು ಪಾಕಿಸ್ತಾನದ ಅರ್ಜಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುವಂತಿಲ್ಲ ಎಂಬ ಕುರಿತಂತೆ ಇದೇ ಮೊದಲ ಬಾರಿಗೆ ರಷ್ಯಾದ ಅಗ್ರ ರಾಜತಂತ್ರಿಕರೊಬ್ಬರು ಗಮನ ಸೆಳೆದಿದ್ದಾರೆ. “ಈ ವಿಚಾರ ರಷ್ಟು ಕ್ಲಿಷ್ಟವಾಗಿದೆ ಎಂಬುದು ತಿಳಿದಿದೆ. ಆದರೆ ಕೆಲ ಬೇರೆ ದೇಶಗಳಿಗಿಂತ ಬರಿ ಮಾತನಡುವ ಬದಲು ನಾವು ವಾಸ್ತವಿಕವಾಗಿ ಪ್ರಯತ್ನಿಸುತ್ತಿದ್ದೇವೆ. ವಿವಿಧ ಸ್ಥರದಲ್ಲಿ ಇದೇ ವಿಚಾರವಾಗಿ ಚೀನಾದೊಂದಿಗೆ ಚರ್ಚಿಸುತ್ತಿದ್ದೇವೆ” ಎಂದು ರ‍್ಯಾಬ್ಕೊವ್‌ ಹೇಳಿದ್ದಾರೆ.

ಎನ್‌ಎಸ್‌ಜಿ ಸದಸ್ಯತ್ವದ ವಿಚಾರದಲ್ಲಿ ಭಾರತಕ್ಕೆ ಅಡ್ಡಿಯಾಗುವುದನ್ನು ನಿಲ್ಲಿಸಲು ಚೀನಾ ಮನವೊಲಿಸಲು ರಷ್ಯಾಗೆ ಪ್ರಯತ್ನಿಸಬೇಕೆಂದು ಮನವಿ ಮಾಡಿದ್ದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ವರ್ಷಾರಂಭದಲ್ಲಿ ತಿಳಿಸಿದ್ದರು.

ಎನ್‌ಎಸ್‌ಜಿ ಸದಸ್ಯತ್ವ ವಿಚಾರವನ್ನು ರಾಜಕೀಯವಾಗಿ ನೋಡುತ್ತಿರುವುದು ದುರದೃಷ್ಟವೆಂದ ರ‍್ಯಾಬ್ಕೊವ್‌ ಈ ವಿಚಾರವಾಗಿ ಚೀನಾದ ಹಠಮಾರಿತನಕ್ಕೆ ಬ್ರೇಕ್‌ ಹಾಕಬೇಕೆಂದರೆ ಎಲ್ಲಾ ಸದಸ್ಯ ದೇಶಗಳು ಒಮ್ಮತದ ಪ್ರುತ್ನ ಮಾಡಬೇಕಿದೆ ಎಂದು ಹೇಳಿದ್ದಾರೆ.  ಎಲ್ಲ ಪರಮಾಣು ವ್ಯಾಪಾರ ನಿಯಂತ್ರಕ ಒಕ್ಕೂಟಗಳಿಗೆ ಭಾರತದ ಸದಸ್ಯತ್ವವನ್ನು ರ‍್ಯಾಬ್ಕೊವ್‌ ಬೆಂಬಲಿಸಿದ್ದಾರೆ.

ಎನ್‌ಎಸ್‌ಜಿ ರೀತಿಯದ್ದೇ ಮತ್ತೊಂದು ಸಂಘಟನೆ, ವಾಸೆನಾರ್‌ ಅರೇಂಜ್‌ಮೆಂಟ್‌ಅನ್ನು ಗುರುವಾರದ ವೇಳೆಗೆ ಭಾರತ ಸೇರಬೇಕಿದೆ ಎಂದು ರ‍್ಯಾಬ್ಕೊವ್‌ ಹೇಳಿದ್ದಾರೆ. ವಾಸೆನಾರ್‌ ಅರೇಂಜ್‌ಮೆಂಟ್‌ 41 ದೇಶಗಳ ಸಂಘಟನೆಯಾಗಿದ್ದು ಸಾಂಪ್ರದಾಯಿಕ ಶಸ್ತ್ರಾಸ್ತ್ರ ರಫ್ತಿನ ಮೇಲೆ ನಿಯಂತ್ರಣ ಹೊಂದಿದೆ. ಚೀನಾ ಈ ಸಂಘಟನೆಯ ಸದಸ್ಯತ್ವ ಹೊಂದಿಲ್ಲ.

ಇತ್ತೀಚೆಗೆ ಜಾಗತಿಕ ವೇದಿಕೆಗಳಲ್ಲಿ ಭಾಗಿಯಾಗಲು ಸಾಕಷ್ಟು ಯತ್ನಿಸುತ್ತಿರುವ ಪಾಕಿಸ್ತಾನದೊಂದಿಗೆ ಸಂಬಂಧ ಸುಧಾರಿಸಿಕೊಳ್ಳಲು ರಷ್ಯಾ ಯತ್ನಿಸುತ್ತಿದೆ ಎಂದು ರ‍್ಯಾಬ್ಕೊವ್‌ ಇದೇ ಸಂದರ್ಭ ತಿಳಿಸಿದ್ದು ಇಸ್ಲಾಮಾಬಾದ್‌ನೊಂದಿಗಿನ ತನ್ನ ಸಂಬಂಧದಲ್ಲಿ ಯಾವುದೇ ಪರೋಕ್ಷ ಉದ್ದೇಶ ಇಲ್ಲ ಎಂದಿದ್ದಾರೆ.

“ಭಾರತವನ್ನು ಸಂಬಂಧಕ್ಕೆ ಕುತ್ತು ತರುವ ಸಂಬಂಧವನ್ನು ಯಾವುದೇ ದೇಶದೊಂದಿಗೆ ಭಾರತ ಮಾಡಿಕೊಳ್ಳುವುದಿಲ್ಲ” ಎಂದು ರ‍್ಯಾಬ್ಕೊವ್‌ ಇದೇ ಸಂದರ್ಭ ತಿಳಿಸಿದ್ದಾರೆ. ಭಯೋತ್ಪಾದನೆ ಕುರಿತ ವಿಚಾರವಾಗಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರ‍್ಯಾಬ್ಕೊವ್‌ ಇದೇ ವಿಚಾರವಾಗಿ ಈ ವರ್ಷದ ಬ್ರಿಕ್ಸ್‌ ಸಮಾವೇಶದಲ್ಲಿ ಕಠಿಣ ಸಂದೇಶ ರವಾನೆ ಮಾಡಲಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿಯುತ ಪಾಲುದಾರಿಕೆ ಮಾಡಿಕೊಂಡು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ದೇಶಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಈ ಬಾರಿಯ ಬ್ರಿಕ್ಸ್‌ ಸಮಾವೇಶದಲ್ಲಿ ಲಷ್ಕರೆ ತೊಯ್ಬಾ ಹಾಗೂ ಜೈಶೆ ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಗಳ ಹೆಸರನ್ನು ಉಲ್ಲೇಖಿಸಿ ಘೋಷವಾಕ್ಯ ಬಿಡುಗಡೆ ಮಾಡಲಾಗಿತ್ತು.  ಇದು ಭಾರತದ ಮಟ್ಟಿಗೆ ದೊಡ್ಡ ರಾಜತಾಂತ್ರಿಕ ಗೆಲುವಾಗಿತ್ತು. ಆದರೆ ನಂತರದ ಘಟನಾವಳಿಯಲ್ಲಿ  ಜೈಎ ಮೊಹಮ್ಮದ್‌ ಸಂಘಟನೆ ಮುಖಂಡ ಮಸೂದ್‌ ಅಝರ್‌ ಮೇಲೆ ನಿಷೇಧ ಹೇರುವ   ವಿಶ್ವ ಸಂಸ್ಥೆಯ ನಿರ್ಧಾರಕ್ಕೆ ಚೀನಾ ಅಡ್ಡಗಾಲಿಟ್ಟಿತ್ತು.

ಶಿಯಾಮೆನ್‌ನಲ್ಲಿ ನಡೆದ ಬ್ರಿಕ್ಸ್‌ ಸಮ್ಮೇಳನದ ಒಮ್ಮತದ ಘೋಷಣೆ ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಭಾರತದ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಎಂದು ಹೇಳಿದ್ದಾರೆ.
ಉತ್ತರ ಕೊರಿಯಾ ವಿಚಾರವಾಗಿ ಮಾತನಾಡಿದ ರ‍್ಯಾಬ್ಕೊವ್‌ ಈ ವಿಚಾರವನ್ನು ರಾಜಕೀಯ ಹಾದಿಯಲ್ಲಿ ಬಗೆಹರಿಸಿಕೊಳ್ಳುವುದೇ ಸೂಕ್ತ ಎಂದು ಹೇಳಿದ್ದಾರೆ. ಉತ್ತರ ಕೊರಿಯಾ ವಿಚಾರದಲ್ಲಿ ಭಾರತ ಹಾಗೂ ರಷ್ಯಾಗಳೆರಡೂ ಸಮಾನ ನಿಲುವು ತಳೆದಿವೆ ಎಂದು ರ‍್ಯಾಬ್ಕೊವ್‌ ಅಭಿಪ್ರಾಯಪಟ್ಟಿದ್ದಾರೆ.

 

Leave a Reply

Your email address will not be published. Required fields are marked *

17 − 11 =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top