lakshmi-electricals

ಭಾಸ್ಕರ ಶೆಟ್ಟಿ ಕೊಲೆ: ಐವರ ಮೇಲೆ ಆರೋಪ ಪಟ್ಟಿ

Posted In : ಉಡುಪಿ, ಜಿಲ್ಲೆ, ದಕ್ಷಿಣ ಕನ್ನಡ, ರಾಜ್ಯ

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ತನಿಖೆ ನಡೆಸಿದ ಸಿಐಡಿ ಪೊಲೀಸರು ಬುಧವಾರ ಐದು ಆರೋಪಿಗಳ ವಿರುದ್ಧ ಪ್ರಧಾನ ಹೆಚ್ಚುವರಿ ನ್ಯಾಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.
ಭಾಸ್ಕರ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ (50), ಪುತ್ರ ನವನೀತ ಶೆಟ್ಟಿ (20), ಪುರೋಹಿತ ನಿರಂಜನ ಭಟ್ (26), ಶ್ರೀನಿವಾಸ ಭಟ್ (56) ಮತ್ತು ರಾಘವೇಂದ್ರ (26) ಆರೋಪ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಎಸ್‌ಪಿ ಯಡಾ ಮಾರ್ಟಿನ್ ಮಾಹಿತಿ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಳ್ಳಿ ಸೇತುವೆ ಸಮೀಪ ವಶಪಡಿಸಿಕೊಂಡಿದ್ದ ಮೂಳೆಗಳು ಭಾಸ್ಕರ ಶೆಟ್ಟಿ ಅವರದ್ದೇ ಎಂದು ಡಿಎನ್‌ಎ ವರದಿಯಲ್ಲಿ ಸಾಬೀತಾಗಿದೆ. ಸುಮಾರು 1,300 ಪುಟಗಳ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅದರಲ್ಲಿ 80ಕ್ಕೂ ಹೆಚ್ಚು ಮಂದಿಯ ಹೇಳಿಕೆಯನ್ನು ದಾಖಲಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ ವರದಿ, ಜನರ ಹೇಳಿಕೆ ಸೇರಿದಂತೆ 100ಕ್ಕೂ ಹೆಚ್ಚಿಿನ ಸಾಕ್ಷ್ಯಗಳನ್ನು ಸಿಐಡಿ ಪೊಲೀಸರು ಸಂಗ್ರಹಿಸಿದ್ದಾರೆ ಎಂದರು.
ಜು. 28ರಂದು ಮಧ್ಯಾಾಹ್ನ 3 ಗಂಟೆಗೆ ದುರ್ಗಾ ಇಂಟರ್‌ನ್ಯಾಷನಲ್ ಹೋಟೆಲ್‌ನಿಂದ ಇಂದ್ರಾಳಿಯಲ್ಲಿನ ತನ್ನ ಮನೆಗೆ ಬಂದಾಗ ರಾಜೇಶ್ವರಿ ಶೆಟ್ಟಿ, ನವನೀತ ಶೆಟ್ಟಿ ಮತ್ತು ನಿರಂಜನ ಭಟ್ಟ ಅವರು ಭಾಸ್ಕರ ಶೆಟ್ಟಿ ಮುಖಕ್ಕೆೆ ಪೆಪ್ಪರ್ ಸ್ಪ್ರೇ ಹಾಕಿ, ಕೀಟನಾಶಕ ಕುಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದರು. ನಂತರ ಕಾರಿನ ಡಿಕ್ಕಿಿಯಲ್ಲಿ ಅವರನ್ನು ಹಾಕಿ ನಂದಳಿಕೆಯಲ್ಲಿರುವ ನಿರಂಜನ ಭಟ್ಟನ ಮನೆಯಲ್ಲಿರುವ ಯಾಗಶಾಲೆಗೆ ಕೊಂಡೊಯ್ದು ಹೋಮಕುಂಡ ಸಿದ್ಧಪಡಿಸಿ ಭಾಸ್ಕರ ಶೆಟ್ಟಿ ಅವರನ್ನು ಸುಟ್ಟಿಿದ್ದರು. ಈ ಸಾಕ್ಷ್ಯಗಳನ್ನು ನಾಶ ಮಾಡಲು ನಿರಂಜನ ಭಟ್ಟನ ತಂದೆ ಶ್ರೀನಿವಾಸ ಭಟ್ಟ ಮತ್ತು ಕಾರು ಚಾಲಕ ರಾಘವೇಂದ್ರನ ಸಹಾಯ ಪಡೆಯಲಾಗಿದೆ. ಭಾಸ್ಕರ ಶೆಟ್ಟಿಿ ಮೂಳೆ ಮತ್ತು ಹೋಮಕುಂಡಕ್ಕೆೆ ಬಳಸಿದ ಕಲ್ಲುಗಳನ್ನು ನದಿಗೆಸೆಯಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

 

Leave a Reply

Your email address will not be published. Required fields are marked *

2 × 4 =

Friday, 20.01.2017

ಶ್ರೀ ಶಾಲಿವಾಹನ ಗತ ಶಕೆ 1938ನೇ ದುರ್ಮುಖ ಸಂವತ್ಸರ ಉತ್ತರಾಯಣ, ಹೇಮಂತ ಋತು, ಪುಷ್ಯಮಾಸ, ಕೃಷ್ಣಪಕ್ಷ , ತಿಥಿ: ಅಷ್ಟಮಿ, ನಿತ್ಯನಕ್ಷತ್ರ: ಸ್ವಾತಿ ಯೋಗ: ಧೃತಿನಾಮ, ಕರಣ: ಕೌಲ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 20.01.2017

ಶ್ರೀ ಶಾಲಿವಾಹನ ಗತ ಶಕೆ 1938ನೇ ದುರ್ಮುಖ ಸಂವತ್ಸರ ಉತ್ತರಾಯಣ, ಹೇಮಂತ ಋತು, ಪುಷ್ಯಮಾಸ, ಕೃಷ್ಣಪಕ್ಷ , ತಿಥಿ: ಅಷ್ಟಮಿ, ನಿತ್ಯನಕ್ಷತ್ರ: ಸ್ವಾತಿ ಯೋಗ: ಧೃತಿನಾಮ, ಕರಣ: ಕೌಲ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top