About Us Advertise with us Be a Reporter E-Paper

ಗೆಜೆಟಿಯರ್

ಮನೆಕೆಲಸ ಈಗ ಇನ್ನಷ್ಟು ಸಲೀಸು!

ಪ್ಯೂರ್ ಸೈಟ್ ಭಾರತದಲ್ಲಿ ವೈಫೈ ಸಂಪರ್ಕ ನಿಯಂತ್ರಿತ ಮತ್ತೊಂದು ವ್ಯಾಕ್ಯೂಮ್ ಐ ರೊಬೊಟ್ ರೊಂಬಾ  ಅನ್ನು ಬಿಡುಗಡೆಗೊಳಿಸಿದೆ.

ಮನೆಯ ನೆಲವನ್ನು ಸ್ವಚ್ಛಗೊಳಿಸುವುದು ದಣಿವನ್ನು ನೀಡುವ ಕೆಲಸ. ನಿಮ್ಮ ಸಾಧಾರಣ ವ್ಯಾಕ್ಯೂಮ್ ಕ್ಲೀನರ್‌ಗಳು ಊಟದ ಮೇಜಿನ ಕೆಳಗೆ, ಕುರ್ಚಿಗಳ ನಡುವಿನ ಕಿರಿದಾದ ದಾರಿಯನ್ನು ಸ್ವಚ್ಛಗೊಳಿಸದೆ ಧೂಳನ್ನು ಹಾಗೆ ಉಳಿಸುತ್ತವೆ.

ಅದರ ಬದಲು ಟಿವಿ, ಎಸಿಯನ್ನು ರಿಮೋಟ್ ಬಟನ್ ಒತ್ತಿ ನಿಯಂತ್ರಿಸುವಂತೆ ವ್ಯಾಕ್ಯೂಮ್ ಕ್ಲೀನರನ್ನೂ ಸಹ ಒಂದು ಬಟನ್ ಒತ್ತಿ ಆರಂಭಿಸುವಂತಿದ್ದರೆ? ನೀವುಆರಾಮವಾಗಿ ಕುಳಿತಲ್ಲಿಂದಲೇ ವ್ಯಾಕ್ಯೂಮ್ ಕ್ಲೀನರನ್ನು ನಿಯಂತ್ರಿಸುವಂತಿದ್ದರೆ? ಇದು ಕೇವಲ ಕನಸು ಎನ್ನುತ್ತೀದ್ದಿರೇ? ಅಲ್ಲ, ಇದು  ನಿಜವಾಗುತ್ತಿದೆ. ಭಾರತದಲ್ಲಿ ಐರೊಬೊಟ್ ಉತ್ಪನ್ನಗಳ ಅಧಿಕೃತ ವಿತರಕರಾದ ರ್ಪೂ ಸೈಟ್ ಸಿಸ್ಟಮ್ಸ್ ಪ್ರೈ.ಲಿ. ತಮ್ಮ ಹೊಸ ರೊಬೊ ವ್ಯಾಕ್ಯೂಮ್ ಕ್ಲೀರ್ನ ರೊಂಬಾ 671 ಅನ್ನು ಭಾರತದಲ್ಲಿಬಿಡುಗಡೆಗೊಳಿಸಿದೆ. ವೈಫೈ ಸಂಪರ್ಕದಿಂದ ಚಾಲನೆಗೊಳ್ಳುವ ಈ ಯಂತ್ರ ಮನೆಯ ಉದ್ದಕ್ಕೂ ನ್ಯಾವಿಗೇಟ್ ಮಾಡಿ ಮಂಚ ಮತ್ತು ಹಾಸಿಗೆ ಕೆಳ ಪ್ರದೇಶವೂ ಸೇರಿದಂತೆಮನೆಯ ಎಲ್ಲಾ ಭಾಗಗಳನ್ನೂ ಸ್ವಚ್ಛಗೊಳಿಸುತ್ತದೆ. ಇದಕ್ಕೆ ಕ್ಲೀನ್ ಎಂಬ ಒಂದು ಬಟನ್ ಒತ್ತಿದರೆ ಸಾಕು. ಐರೋಬೊಟ್ ವೆಬ್ಸೈಟ್ ನಲ್ಲಿ, ಮಳಿಗೆಗಳಲ್ಲಿ ಹಾಗೂ  ನಲ್ಲಿ ಇದು ಲಭ್ಯವಿದೆ. ಇದರ ಬೆಲೆ 37,900. ಈಗ ಬಿಡುಗಡೆ ಬೆಲೆ 29,900.

ವಿನ್ಯಾಸ

ಡಿಸ್‌ಕ್ ಆಕಾರದ ರೊಂಬಾ 671 ವಿನ್ಯಾಸ ಬೆರಗುಗೊಳಿಸುವಂತಿದೆ. 9.2ಸೆ.ಮೀ. ಎತ್ತರದೊಂದಿಗೆ ಮನೆಯಿಡೀ ತಿರುಗಾಡಿ, ಕೈಗೆಟುಕದ ಪೀಠೋಪಕರಣಗಳ ಕೆಳಭಾಗಕ್ಕೂ ತೆರಳಿ ಸ್ಚಚ್ಛಗೊಳಿಸುತ್ತದೆ. ಈ ರೊಬೊಟ್ ನ ಬದಿಗಳಲ್ಲಿರುವ ಬ್ರಶ್ ಧೂಳನ್ನು ತೆಗೆದು ಕೊಳೆಯನ್ನು ಉಜ್ಜಿ  ಸ್ವಚ್ಛಗೊಳಿಸುತ್ತದೆ. ಹೋಮ್ ಬೇಸ್ ಚಾರ್ಜಿಂಗ್  ಸ್ಟೇನ್ ಗೆ ಸ್ವಯಂಚಾಲಿತವಾಗಿ ತೆರಳಿ ಚಾರ್ಜ್ ಆಗುತ್ತದೆ.

ಕಾರ್ಯ ವಿಧಾನ:

ರೊಂಬಾ 671ನಲ್ಲಿ  ಹಂತದ ಸ್ವಚ್ಛತಾ ವ್ಯವಸ್ಥೆಯಿದ್ದು ಅದು ನೆಲವನ್ನು ಸಂಪೂರ್ಣವಾಗಿ ಸ್ಚಚ್ಛಗೊಳಿಸುತ್ತದೆ. ನೆಲದ ಮೇಲೆ ಬಿದ್ದಿರುವ ಸಣ್ಣ ಹುಳು, ಧೂಳು ಮತ್ತು ಅಲರ್ಜಿಕಾರಕ ಕಸಗಳನ್ನು ಹೆಕ್ಕಿ ತೆಗೆಯುತ್ತದೆ. ನೀವು ಮನೆಯಲ್ಲಿಲ್ಲದ ಸಂದರ್ಭದಲ್ಲೂ ವೈಫೈ ಸಂಪರ್ಕದ ಮುಖಾಂತರ ಇದನ್ನು ನಿಯಂತ್ರಿಸಿ ಕೆಲಸ ಮಾಡಬಹುದು.ಅಂದರೆ ಕಚೇರಿಯಿಂದ ನೀವು ಕೆಲಸ ಮುಗಿಸಿ ಹೊರಡುವಾಗ ಆನ್ ಬಟನ್ ಒತ್ತಿದರೆ ಮನೆಗೆ ಬಂದು ತಲುಪುವಾಗ ಮನೆ ಸಂಪೂರ್ಣ ಸ್ವಚ್ಛಗೊಂಡು ಥಳ ಥಳಹೊಳೆಯುತ್ತಿರುತ್ತದೆ. ಸತತವಾಗಿ ಒಂದು ಗಂಟೆ ಕೆಲಸ ಮಾಡಿ  ಚಾರ್ಜಿಂಗ್ ಘಟಕದತ್ತ ತೆರಳುತ್ತದೆ. ಅಮೆಜಾನ್ ಅಲೆಕ್ಸಾದಂತಹ ಸ್ಮಾರ್ಟ್ ಫೋನ್ ಅಸಿಸ್ಟೆಂಟ್‌ನೊಂದಿಗೆ ಹೊಂದಿಕೊಂಡು ಕಾರ್ಯ ನಿರ್ವಹಿಸುತ್ತದೆ.

ಹೆಚ್ಚು ಕೊಳೆಯಾಗಿರುವ ಸ್ಥಳವನ್ನು ಗುರುತಿಸುವ ಈ ರೊಬೊಟ್ ಡರ್ಟ್ ಡಿಟೆಕ್‌ಟ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ಭಾರತದಲ್ಲಿ ಪ್ರಸ್ತುತ ಐರೊಬೊಟ್ ಶೋರೂಮ್ಗಳಿರುವ ಬೆಂಗಳೂರು, ಚೆನ್ನೈಗಳಲ್ಲಿ ಲಭ್ಯವಿದೆ. ಇದರೊಂದಿಗೆ ಅಮೇಜಾನ್ ಹಾಗೂ ಐರೊಬೊಟ್ನ ಭಾರತೀಯವೆಬ್ಸೈಟ್

(https://irobot.in)ನಲ್ಲೂ ಲಭ್ಯವಿದೆ.

Tags

Related Articles

Leave a Reply

Your email address will not be published. Required fields are marked *

Language
Close