ಮಹಿಳೆ ಧ್ವನಿಗೆ ಫಿದಾ ಆಗಿ ಹಣ ಕಳೆದುಕೊಂಡ ಗಂಡಸರಿಗೆ ಇನ್ನು ರಿಲೀಫ್

Posted In : ಮೈಸೂರು, ರಾಜ್ಯ

ಮೈಸೂರು: ಆಕಸ್ಮಿಕವಾಗಿ ಬರುತ್ತಿದ್ದಂತಹ ಅನಾಮಿಕ  ಮಹಿಳೆಯ ಕರೆಗೆ ಮಾರುಹೋಗಿ ಹಣ ಒಡವೆಯನ್ನು ಕಳೆದುಕೊಂಡ ಮೈಸೂರಿನ ಯುವಕರು ಇನ್ನುಮುಂದೆ ನಿಟ್ಟುಸಿರು ಬಿಡುವಂತಾಗಿದೆ.

ಮೈಸೂರಿನ ಅಮ್ರಿನ್ ಸಬಾ (24) ಹಾಗೂ ಇವಳಿಗೆ ಸಾಥ್ ನೀಡುವ ಜಾವೇದ್ (22) ಮತ್ತು ತೌಸಿಫ್ (23) ಇವರುಗಳು ಹನಿಟ್ರ್ಯಾಪ್ ಪ್ರಕರಣದ ಮುಖ್ಯ ರೂವಾರಿಗಳು.
 
ಮೊದಲಿಗೆ ಅಮ್ರಿನ್ ಸಬಾ ಎಂಬ ಯುವತಿ ಶ್ರೀಮಂತ ಯುವಕರನ್ನು ಫೋನ್ ಮೂಲಕ ಅಥವಾ ಮಾಲ್ ಗಳಲ್ಲಿ ವಿಳಾಸ ಕೇಳುವ ನೆಪದಲ್ಲಿ ಪರಿಚಯಿಸಿಕೊಳ್ಳುತ್ತಿದ್ದಳು. ಬಳಿಕ ಮೊಬೈಲ್ ನಂಬರ್ ನೀಡಿ ಮಾತನಾಡುತ್ತಲೇ ವ್ಯಕ್ತಿಯನ್ನು ಮೋಹಕ್ಕೆ ಕೆಡವಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದಳು. ನಂತರ ಸಹಚರರ ಸಹಾಯದಿಂದ ಚಿನ್ನಾಭರಣ, ಹಣ ದೋಚುತ್ತಿದ್ದರು.
 
ಆದರೆ ಈಬಾರಿ ಇವರ ಬ್ಯಾಡ್ಲಕ್ ಪೊಲೀಸ್ ಡಿಪಾರ್ಟ್‌ಮೆಂಟ್ನಲ್ಲೇ ಕಾದಿತ್ತು. ಕಳೆದ ಡಿಸೆಂಬರ್‍ ನಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ಮಗನ ಮೊಬೈಲ್ಗೆ ಕರೆ ಮಾಡಿದ ಅಮ್ರಿನ್ ಸಬಾ ಯಾರನ್ನೋ ಕೇಳುವ ನೆಪ ಮಾಡಿ ಕೆಲ ಕಾಲ ಮಾತನಾಡಿ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಈತನೂ ಮಾತನಾಡಿದ್ದಾನೆ. ಮಾತಿನಲ್ಲೇ ಎಲ್ಲವನ್ನು ತಿಳಿದುಕೊಂಡ ಆಕೆ ಬಳಿಕ ಊಟಕ್ಕೆ ಕರೆಯುವ ನೆಪದಲ್ಲಿ ಅವನನ್ನು ಹತ್ತಿರದಿಂದ ನೋಡಿ ಆತನ ಬಳಿ ಏನಿದೆ ಎಲ್ಲವನ್ನು ತಿಳಿದುಕೊಂಡಿದ್ದಾಳೆ.
 
 
ಇದಾದ ನಂತರ ತನ್ನ ಸಹಚರರಿಗೆ ವಿಷಯ ತಿಳಿಸಿ ಡಾಬವೊಂದಕ್ಕೆ ಬರಲು ಹೇಳಿದ್ದಾಳೆ. ಅಲ್ಲಿ ಇಬ್ಬರೂ ಕುಳಿತು ಮಾತನಾಡಿದ್ದಾರೆ. ಆತನಿಗೆ ಮದ್ಯ ಸೇವಿಸು ತೊಂದರೆಯಿಲ್ಲ ಎನ್ನುತ್ತಾ ಕುಡಿಸಿ ಬಳಿಕ ಪರಿಚಿತರು ಕಂಡರೆ ಕಷ್ಟ ಯಾವುದಾದರೂ ನಿರ್ಜನ ಪ್ರದೇಶಕ್ಕೆ ಹೋಗೋಣ ಎಂದು ಹೇಳಿದ್ದಾಳೆ.
 
 ಅಮ್ರಿನ್ ಸಬಾ ಆತನನ್ನು ಮೈಸೂರು ನಗರದ ಉದಯಗಿರಿ ಲಿಡ್ಕರ್ ಕಾಲೋನಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾಳೆ. ಅಷ್ಟರಲ್ಲೇ ಅಲ್ಲಿಗೆ ಬಂದಿದ್ದ ತೌಸಿಫ್ ಮತ್ತು ಜಾವೇದ್ 'ನಮ್ಮ ಹುಡುಗಿನ ಕರೆದುಕೊಂಡು ಬರೋಕೆ ನಿನ್ಯಾರೋ' ಎನ್ನುತ್ತಾ ಅವನ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ, ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.
 
ಈ ವಿಚಾರವನ್ನು ಆತ ಯಾರಿಗೂ ಹೇಳಲಾಗದೆ ಖಿನ್ನನಾಗಿದ್ದನು. ಇದ್ದಕ್ಕಿದ್ದಂತೆ ಮಗನಲ್ಲಾದ ಬದಲಾವಣೆ ಅಪ್ಪನಿಗೆ ಆಶ್ಚರ್ಯವನ್ನುಂಟು ಮಾಡಿದ್ದು ವಿಶ್ವಾಸಕ್ಕೆ ಪಡೆದು ಕೇಳಿದಾಗ ಕೆಲ ವಿಚಾರವನ್ನಷ್ಟೆ ಹೇಳಿದ್ದಾನೆ. ಆಗ ಹೀಗೊಂದು ವಂಚನೆ ಜಾಲ ನಡೆಯುತ್ತಿದೆ ಎಂಬುದರ ಬಗ್ಗೆ ಅವರು ಉದಯಗಿರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
 
ತಕ್ಷಣ ಕಾರ್ಯಪ್ರವೃತ್ತರಾದ ಇನ್ಸ್ ಪೆಕ್ಟರ್ ಪಿ.ಪಿ.ಸಂತೋಷ್ ಕಾರ್ಯಾಚರಣೆ ನಡೆಸಿ ಅಮ್ರಿನ್ ಸಬಾ ಮತ್ತು ಸಹಚರರಾದ ತೌಸಿಫ್, ಜಾವೇದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾವು ಮಾಡುತ್ತಿದ್ದ ಕೃತ್ಯ ಒಪ್ಪಿಕೊಂಡಿದ್ದಾರೆ. ಅದೆಷ್ಟು ಜನರು ಇವರುಗಳ ಮೋಹದ ಜಾಲಕ್ಕೆ ಸಿಕ್ಕಿ ಹಣ ಕಳೆದುಕೊಂಡಿದ್ದಾರೋ ವಿಚಾರಣೆಯ ಬಳಿಕವೇ ತಿಳಿಯಬೇಕಿದೆ.
 
 

Leave a Reply

Your email address will not be published. Required fields are marked *

4 × two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top