ಮಾಜಿ ಸಚಿವ ಚಿಂಚನಸೂರ್ ಗೆ ಸಮನ್ಸ್

Posted In : ಬೆಂಗಳೂರು, ರಾಜ್ಯ

ಬೆಂಗಳೂರು: 12 ಕೋಟಿ ರೂ.ಗಳ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ಬಾಂಬುರಾವ್ ಚಿಂಚನಸೂರ್ ಅವರಿಗೆ 15ನೇ ಎಸಿಎಂಎಂ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ ಖುದ್ದು ಹಾಜರಾತಿಗೆ ಆದೇಶಿಸಿದೆ.

ನಾಗರಬಾವಿಯ ನಿವಾಸಿ ಅಂಜನಾ ಎಂಬವರಿಂದ 12 ಕೋಟಿ ರೂ.ಗಳನ್ನು ಪಡೆದು ನಂತರ ಅದನ್ನು ಹಿಂತಿರುಗಿಸದೆ ವಂಚಿಸಿ, ನಂತರ ಚೆಕ್ ನೀಡಲಾಗಿತ್ತು. ಅದು ಬೌನ್ಸ್ ಆದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಚಿವರಾಗಿದ್ದಾಗಲೇ ಈ ಆರೋಪ ಕೇಳಿ ಬಂದಿತ್ತು. ಆದರೆ ಪ್ರತಿಕ್ರಿಯಿಸದೆ ಸರಿ ಮಾಡಿಕೊಳ್ಳುತ್ತೇವೆ. ನ್ಯಾಯಾಲಯದಿಂದಲೇ ಪರಿಹಾರ ಕಂಡುಕೊಳ್ಳುತ್ತೇನೆ ಎಂದು ಬಾಬುರಾವ್ ಚಿಂಚನಸೂರ್ ಹೇಳಿದ್ದರು.

ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ನ.30ರಂದು ಖುದ್ದು ಹಾಜರಾಗಬೇಕೆಂದು ಬಾಬುರಾವ್ ಅವರಿಗೆ ಸೂಚನೆ ನೀಡಿದೆ. ಕಳೆದ ನ.19ರಂದು ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಚಿಂಚನಸೂರ್ ಪರ ವಕೀಲರು ಕಾಲಾವಕಾಶ ಕೋರಿದ್ದರು.

Leave a Reply

Your email address will not be published. Required fields are marked *

twenty − sixteen =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

 

Sunday, 30.04.2017

ಹೇಮಲಂಬಿನಾಮ ಸಂವತ್ಸರ ಉತ್ತರಾಯಣ. ಋತು-ವಸಂತ. ಮಾಸ- ವೈಶಾಕ, ಪಕ್ಷ-ಶುಕ್ಲ, ಚತುರ್ಥಿ, ಭಾನುವಾರ, ನಿತ್ಯನಕ್ಷತ್ರ-ಮೃಗುಣ, ಯೋಗ-ಅತಿಗಂಡ, ಕರಣ-ಭವ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

Back To Top