Sri Ganesh Tel

ಮಾತೃಭಾಷಾ ಮಾಧ್ಯಮಕ್ಕೆ ಸಂಬಂಧಿಸಿದ ತೀರ್ಪು ನಿಜಕ್ಕೂ ಆಘಾತಕಾರಿ ಬರಗೂರು ರಾಮಚಂದ್ರಪ್ಪ

Posted In : ರಾಜ್ಯ, ರಾಯಚೂರು

ರಾಯಚೂರು: ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಸರಕಾರವು ಕಡ್ಡಾಯಮಾಡುವಂತಿಲ್ಲ ಎಂದು ನೀಡಿರುವ ತೀರ್ಪು ನಿಜಕ್ಕೂ ಆಘಾತಕಾರಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ರಾಯಚೂರಿನಲ್ಲಿ ಶುಕ್ರವಾರದಿಂದ ಆರಂಭವಾಗಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿರುವ ಬರಗೂರು ರಾಮಚಂದ್ರಪ್ಪ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಾಡು, ನುಡಿ ಗಡಿ ಸಮಸ್ಯೆಗಳ ಬಗ್ಗೆ ವಿಸ್ತಾರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ ಸರಕಾರವು ರಾಜ್ಯದ ಉಚ್ಚನ್ಯಾಯಾಲಯದ 3.7.2008ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿ ಅರ್ಜಿಯ ಬಗ್ಗೆ ನೀಡಿದ ಈ ತೀರ್ಪು ಇಡೀ ದೇಶದ ಪ್ರಾಥಮಿಕ ಶಿಕ್ಷಣ ಮತ್ತು ರಾಜ್ಯಗಳ ಹಕ್ಕಿನ ಪ್ರಶ್ನೆಯಾಗಿ ಪರಿಣಮಿಸುತ್ತದೆ. ವಿಶೇಷ ಮತ್ತು ವಿಚಿತ್ರವೆಂದರೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಅಥವಾ ರಾಜ್ಯಭಾಷೆಯ ಮಾಧ್ಯಮ ಕಡ್ಡಾಯವಾಗಬೇಕೆಂದು ಸುಪ್ರೀಂಕೋರ್ಟ್‌ನಲ್ಲಿ ಹೋರಾಡಿದ ಏಕೈಕ ರಾಜ್ಯವೆಂದರೆ ಕರ್ನಾಟಕ.

ತಮಿಳುನಾಡಿನ ಅರ್ಜಿಯೂ ಸುಪ್ರೀಂಕೋರ್ಟಿನಲ್ಲಿ ಇತ್ತಾದರೂ ತಮಿಳುನಾಡಿನ ಜಯಲಲಿತಾ ನೇತೃತ್ವದ ಸರಕಾರ ಈ ಅರ್ಜಿಯನ್ನು ಹಿಂಪಡೆದು ಕಾನೂನು ಹೋರಾಟವನ್ನು ಕೈಬಿಟ್ಟಿತು! ಆಂಗ್ಲ ಮಾಧ್ಯಮದವರಿಗೆ ಮುಕ್ತ ಅವಕಾಶ ನೀಡಲು ಸಿದ್ಧವಾಯಿತು. ಇನ್ನು ಆಂಧ್ರಪ್ರದೇಶದ ಒಂದು ಅರ್ಜಿಯು ಸುಪ್ರೀಂಕೋರ್ಟಿನಲ್ಲಿ ಇತ್ತಾದರೂ ತೆಲಂಗಾಣ ರಾಜ್ಯ ರಚನೆಯ ಸಮಸ್ಯೆಯಲ್ಲಿ ಸೆಣಸುತ್ತಿದ್ದ ಆ ರಾಜ್ಯಕ್ಕೆ ಈ ಅರ್ಜಿ ಮುಖ್ಯವಾಗಲಿಲ್ಲ. ಕಡೆಗೆ ಉಳಿದದ್ದು ಕರ್ನಾಟಕದ ಮೇಲ್ಮನವಿಯ ಅರ್ಜಿ ಮಾತ್ರ ಎಂಧು ಹೇಳಿದರು. ರಾಜ್ಯದ ಜ್ವಲಂತ ಸಮಸ್ಯೆಗೆ ಬಗ್ಗೆ ಕನ್ನಡಿಗರು ಒಂದುಗೂಡಬೇಕಿದೆ. ಶಿಕ್ಷಣದಲ್ಲಿ ಮಾತೃಭಾಷಾ ಮಹತ್ವ, ಕಡ್ಡಾಯ ಮಾತೃಭಾಷಾ ಶಿಕ್ಷಣ, ಭಾಷೆಯ ಮಹತ್ವ ಎಂದು ಹೇಳಿದರು. ಇದೇ ವೇಳೆ ಎಂ.ಎಂ ಕಲಬುರ್ಗಿ ಹತ್ಯೆ ಹಂತಕರನ್ನು ಶೀಘ್ರವೇ ಬಂಧಿಸಬೇಕು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

14 − 4 =

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

 

Saturday, 16.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶನಿವಾರ, ನಿತ್ಯ ನಕ್ಷತ್ರ-ಅನು ರಾಧಾ, ಯೋಗ-ಧೃತಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
09.00-10.30 06.00-07.30 01.30-03.00

Read More

Back To Top