ಮಾಲಿನ್ಯ ನಿಯಂತ್ರಣಕ್ಕೆ ಬೀಜಿಂಗ್‌ ಕ್ರಮ

Posted In : ವಿದೇಶ

ದೆಹಲಿ: ಇತ್ತ ದೆಹಲಿಯ ಮಾಲಿನ್ಯ ಭೀತಿ ಮೂಡಿಸುತ್ತಿದ್ದರೆ ಅತ್ತ ಬೀಜಿಂಗ್‌ ತನ್ನ ಮಾಲಿನ್ಯ ಮಟ್ಟವನ್ನು ತಗ್ಗಿಸಲು ಪರಿಣಮ ಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

2017ರ ವರ್ಷಾಂತ್ಯಕ್ಕೆ ಪಿಎಂ 2.5 ಮಾಲಿನ್ಯಕಾರಕದ ಮಟ್ಟವನ್ನು ಪ್ರತಿ ಘನ ಮೀಟರ್‌ಗೆ ಸರಾಸರಿ 60 ಮೈಕ್ರೋ ಗ್ರಾಂ ನಷ್ಟಕ್ಕೆ ಇಳಿಸಲು ಚಿಂತಿಸಲಾಗುತ್ತಿದೆ. ಕಳೆದ ವರ್ಷ ಪಿಎಂನ ವಾರ್ಷಿಕ ಸರಾಸರಿ ಮಟ್ಟ 73 ಮೈಕ್ರೊ ಗ್ರಾಂನಷ್ಟಿತ್ತು. ಕಳೆದ ಮೂರು ವರ್ಷಗಳಿಂದ ದೆಹಲಿಯ ಮಾಲಿನ್ಯದ ಮಟ್ಟ ಸರಾಸರಿ ಪ್ರತಿ ಘನಮೀಟರ್‌ಗೆ 132 ಮೈಕ್ರೊ ಗ್ರಾಂ ನಷ್ಟು ಪಿಎಂ ಎಂದು ಕಂಡು ಬಂದಿದೆ.

ಬೀಜಿಂಗ್‌ ಮಾತ್ರವಲ್ಲದೇ ಚೀನಾದ ಇನ್ನಿತರ ನಗರಗಳೂ ಮಾಲಿನ್ಯ ನಿಯಂತ್ರಣದ ವಿಚಾರದಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದು ಕೊಂಡಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಧೂಳು ನಿಯಂತ್ರಣ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣ ತಗ್ಗಿಸುವುದು, ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸುವುದು, ಕೆಲಸದ ವೇಳೆಯಲ್ಲಿ ಬದಲಾವಣೆ, ಇಂಗಾಲದ ಹೊರಸೂಸುವಿಕೆ ಹೆಚ್ಚಿರುವ ವಾಹನಗಳ ನಿಷೇಧ ಸೇರಿದಂತೆ ಹಲವಾರು ಕ್ರಮಗಳನ್ನು ಚೀನಾ ತೆಗೆದುಕೊಳ್ಳುತ್ತಿದ್ದು, ತುರ್ತು ಪರಿಸ್ಥಿತಿ ನಿರ್ಮಾಣದಂಥ ಮಾಲಿನ್ಯದ ಸನ್ನಿವೆಶಗಳು ಉಂಟಾದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸ್ಪಷ್ಟವಾಗಿ ತಿಳಿಸಿದೆ.

 

Leave a Reply

Your email address will not be published. Required fields are marked *

one × three =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

 

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

Back To Top