About Us Advertise with us Be a Reporter E-Paper

ಬಿಸಿನೆಸ್

ಮುಖೇಶ್​ ಅಂಬಾನಿ ಏಷ್ಯಾದ ನಂ 1 ಶ್ರೀಮಂತ

ದೆಹಲಿ: ಅಲಿಬಾಬಾ ಗ್ರೂಪ್​ನ ಜಾಕ್​ ಮಾ ಅವರನ್ನು ಹಿಂದಿಕ್ಕಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ಏಷ್ಯಾ ಖಂಡದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಇಂದು ಬಿಡುಗಡೆಯಾಗಿರುವ ಬ್ಲೂಮ್​ಬರ್ಗ್​ ವರದಿ ಪ್ರಕಾರ ಮುಖೇಶ್​ ಅಂಬಾನಿ 44.3 ಬಿಲಿಯನ್​ ಡಾಲರ್​ ಸಂಪತ್ತು ಹೊಂದುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಜಾಕ್​ ಮಾ ಅವರ ಒಟ್ಟು ಆಸ್ತಿ 44 ಬಿಲಿಯನ್​ ಡಾಲರ್​ ಇತ್ತು. ಈ ಮೂಲಕ ಅತ್ಯಂತ ಕಡಿಮೆ ಅಂತರದಿಂದ ಅಂಬಾನಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮಾರುಕಟ್ಟೆ ಇಂದು 7 ಲಕ್ಷ ಕೋಟಿ ವರಮಾನ ಹೊಂದುವ ಮೂಲಕ ಟಿಸಿಎಸ್​ನ ನಂತರ ಈ ಪ್ರಮಾಣದ ವಹಿವಾಟನ್ನು ನಡೆಸಿದ 2ನೇ ಸಂಸ್ಥೆಯಾಗಿ ದಾಖಲೆ ಬರೆದಿದೆ. ಈ ಬೆಳವಣಿಗೆಯ ನಂತರ ರಿಲಯನ್ಸ್​ ಇಂಡಸ್ಟ್ರೀಸ್​ನ ಷೇರು ಪ್ರಮಾಣದಲ್ಲಿಯೂ ಹೆಚ್ಚಳ ಕಂಡಿದ್ದು, ಇಂದು ಸಂಜೆಯೊಳಗೆ ಶೇ. 1.7ರಷ್ಟು ಹೆಚ್ಚಳಗೊಂಡಿದೆ.

ಈಗಾಗಲೇ 21.5 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮೈಲಿಗಲ್ಲು ಸ್ಥಾಪಿಸಿದೆ. ಬೇರೆ ಟೆಲಿಕಾಂ ಸಂಸ್ಥೆಗಳಿಗೆ ಸ್ಪರ್ಧೆಯೊಡ್ಡುವಂತೆ ಹಲವು ಆಫರ್​ಗಳನ್ನು ನೀಡುತ್ತಿರುವುದರಿಂದ ಗ್ರಾಹಕರ ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ಈ ತಿಂಗಳಲ್ಲಿ ಅಂಬಾನಿ 4ಕೆ ರೆಸಲ್ಯೂಷನ್​ನ ಅಡ್ವಾನ್ಸ್​ಡ್​ ಫೈಬರ್​ ಒಳಗೊಂಡಿರುವ ಜಿಯೋ ಜಿಗಾಫೈಬರ್​ ಎಂಬ ಬ್ರಾಡ್​ಬ್ಯಾಂಡ್​ ಅನ್ನು ಕೂಡ ಮಾರುಕಟ್ಟೆಗೆ ಪರಿಚಯಿಸಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close