About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮುಝಫ್ಫರ್‌ಪುರ ಘಟನೆಯಿಂದ ನಾವೆಲ್ಲಾ ತಲೆತಗ್ಗಿಸುವಂತಾಗಿದೆ: ನಿತೀಶ್‌ ಕುಮಾರ್‌

ಪಟನಾ: ಬಿಹಾರದ ಮುಝಫ್ಫರ್‌ಪುರ ಆಶ್ರಯಗೃಹದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಕುರಿತಂತೆ ಕೊನೆಗೂ ತುಟಿ ಬಿಚ್ಚಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವುದಾಗಿ ಹೇಳಿದ್ದಾರೆ. ,

ಕಾರ್ಯಕ್ರಮವೊಂದರ ಉದ್ಘಾಟನೆ ಸಂದರ್ಭ ಮಾತನಾಡಿದ ನಿತೀಶ್‌ , “ಆಶ್ರಯ ಗೃಹದಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ನಮ್ಮೆಲ್ಲರನ್ನೂ ತಲೆ ತಗ್ಗಿಸುವಂತೆ ಮಾಡಿದ್ದು ಅಪರಾಧ ಪ್ರಜ್ಞೆ ಮೂಡಿಸಿದೆ” ಎಂದಿದ್ದಾರೆ.

“ಅಪರಾಧಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದೆಂದು ಸದಾ ಹೇಳಿದ್ದೇವೆ. ಈ ಕುರಿತು ಸದನದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ, ಹೈಕೋರ್ಟ್ ನಿರ್ದೇಶನದಲ್ಲಿ ಸಿಬಿಐ ತನಿಖೆ ನಡೆಸಲು ಖದ್ದು ಸರಕಾರವೇ ಉತ್ಸುಕವಾಗಿದೆ ಎಂದು ಘೋಷಿಸಿದ್ದಾರೆ” ಎಂದು ಇದೇ ಸಂದರ್ಭ ನಿತೀಶ್‌ ತಿಳಿಸಿದ್ದಾರೆ.

ಇಂಥ ಘಟನೆಗಳನ್ನು ನಿಯಂತ್ರಣಕ್ಕೆ ತರಲು ಸಾಂಸ್ಥಿಕ ಮಟ್ಟದಲ್ಲಿ ಯೋಜನೆ ತರಲು ತಮ್ಮ ಸರಕಾರದ ಮುಖ್ಯ ಕಾರ್ಯದರ್ಶಿಗೆ ತಿಳಿಸಿರುವುದಾಗಿ ನಿತೀಶ್‌ ಕುಮಾರ್‌ ಇದೇ ಸಂದರ್ಭ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close