lakshmi-electricals

ಮುತ್ತೂಟ್ ಫೈನಾನ್ಸ್‌ನಲ್ಲಿ ದರೋಡೆ

Posted In : ರಾಜ್ಯ, ರಾಮನಗರ

 ರಾಮನಗರ : ಪೊಲೀಸ್ ವೇಷದಲ್ಲಿ ನಾಲ್ವರ ತಂಡ ಮುತ್ತೂಟ್ ಫೈನಾನ್ಸ್‌ನ ಮಾನ್ಯೇಜರ್‌ನನ್ನು ಅಪರಿಸಿಕೊಂಡು ಹೋಗಿ ಅವರಿಂದ ಬ್ಯಾಂಕ್‌ನ ರಹಸ್ಯ ಮಾಹಿತಿಗಳನ್ನು ತಿಳಿದುಕೊಂಡು ಬಳಿಕ ದರೋಡೆ ಮಾಡಿರುವ ಘಟನೆ ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಠಾಣಾ ವ್ಯಾಪ್ತಿಯ ಮರಿಯಪ್ಪನ ಪಾಳ್ಯದಲ್ಲಿ ಇರುವ ಮುತ್ತೂಟ್ ಫೈನಾನ್ಸ್ ಬ್ಯಾಂಕ್‌ನ ಮ್ಯಾನೇಜರ್ ನಾಗೇಂದ್ರಪ್ಪ ಗುರುವಾರ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಬೈಕ್ ಚಾಲನೆ ಮಾಡಲು ಮುಂದಾದ ಸಂದರ್ಭದಲ್ಲಿ ಪೊಲೀಸ್ ವೇಷದಲ್ಲಿ ಬಂದ ನಾಲ್ವರ ತಂಡ ಮ್ಯಾನೇಜರ್ ಅವರನ್ನು ಮಾಹಿತಿ ಕೇಳುವ ರೀತಿ ಕಾರಿನಿಂದ ಇಳಿದು ಅಪಹರಿಸಿದ್ದಾರೆ. 

ಬಳಿಕ ನಿರ್ಜನ ಪ್ರದೇಶವೊಂದಲ್ಲಿ ಥಳಿಸಿ ಬ್ಯಾಂಕ್‌ನ ಲಾಕರ್‌ಗಳ ರಹಸ್ಯವನ್ನು ಪಡೆದುಕೊಳ್ಳುವುದರ ಜತೆಗೆ ಬ್ಯಾಂಕ್‌ನ ಕೀಗಳನ್ನು ಕಿತ್ತುಕೊಂಡು ಮಾಗಡಿ ಮತ್ತು ಬೆಂಗಳೂರು ಮಾರ್ಗ ಮಧ್ಯೆ ಮಚೋಹಳ್ಳಿಯ ಬಳಿ ಬಿಟ್ಟಿದ್ದು, ಅಲ್ಲಿಂದ ಬ್ಯಾಂಕ್‌ಗೆ ತೆರಳಿ ದರೋಡೆ ಮಾಡಿದ್ದಾರೆ ಎಂದು ಮ್ಯಾನೇಜರ್ ನಾಗೇಂದ್ರಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಸೀಮಂತ್‌ಕುಮಾರ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ, ಡಿವೈಎಸ್ಪಿ ಲಕ್ಷ್ಮಗಣೇಶ್ ಕುಂಬಳಗೂಡು ಪೊಲೀಸ್ ಠಾಣೆಯ ಸಿಪಿಐ ಶ್ರೀಧರ್ ಹಾಗೂ ಪಿಎಸ್‌ಐ ಮುರುಳೀಧರ್, ಬಸವನಗೌಡ ಪಾಟೀಲ್ ಸೇರಿದಂತೆ ಬೆರಳಚ್ಚು ತಜ್ಞರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. 

Leave a Reply

Your email address will not be published. Required fields are marked *

19 − 18 =

Sunday, 26.02.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಕೃಷ್ಣಪಕ್ಷ, ತಿಥಿ: ಅಮಾವಾಸ್ಯೆ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶಿವ, ಕರಣ: ಚುತುಷ್ಟಾ

ರಾಹುಕಾಲಗುಳಿಕಕಾಲಯಮಗಂಡಕಾಲ
04.56-06.24 03.28-04.56 12.32-02.00

Read More

 

Sunday, 26.02.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘಮಾಸ, ಕೃಷ್ಣಪಕ್ಷ, ತಿಥಿ: ಅಮಾವಾಸ್ಯೆ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶಿವ, ಕರಣ: ಚುತುಷ್ಟಾ

ರಾಹುಕಾಲಗುಳಿಕಕಾಲಯಮಗಂಡಕಾಲ
04.56-06.24 03.28-04.56 12.32-02.00

Read More

Back To Top