About Us Advertise with us Be a Reporter E-Paper

ಸಿನಿಮಾಸ್

ಮುದ್ದು ಮುಖದ ಸುಂದರಿ ಸಿರಿ ಪ್ರಹ್ಲಾದ

ಈ ಮುದ್ದು ಮುಖದ ಚೆಂದೊಳ್ಳಿ ಚೆಲುವೆ ಸಿರಿ ಪ್ರಹ್ಲಾದ್. ಇವರು ಉತ್ತರ ಕರ್ನಾಟಕದವರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯುಗಗಳ ಗೀತೆ ಧಾರಾವಾಹಿಯಲ್ಲಿ ನಾಯಕಿಯಾಗಿ ಪಂಚಮಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಎಲ್ಲರ ಮನೆ ಮಾತಾಗಿದ್ದಾಳೆ. ಅವರ ಸಂದರ್ಶನ ನಿಮ್ಮ ಮುಂದೆ..

ನಿಮ್ಮ ಹಿನ್ನಲೆ?
ಮೂಲತಃ ನಾನು ಉತ್ತರ ಕರ್ನಾಟಕದವಳು, ಹೊಸಪೇಟೆ ನನ್ನ ಊರು.

ಅಭಿನಯದೆಡೆಗೆ ಒಲವು ಮೂಡಿದ್ದು ಹೇಗೆ?
ಇದೇ ವರ್ಷ ನಾನು ಅಭಿನಯಕ್ಕೆ ಕಾಲಿಟ್ಟಿದ್ದು. ಮೊದಲಿನಿಂದಲೂ ನಾನು ಡ್ಯಾನ್ಸರ್. ಬಾಲ್ಯದಿಂದಲೂ ನನಗೆ ನಟನೆಯಲ್ಲೇ ಮುಂದುವರಿಯಬೇಕು, ಏನಾದರೂ ಸಾಧಿಸಬೇಕು ಎಂಬ ಕನಸಿತ್ತು. 2014ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟೆ. ಆಗಲೇ ಅಭಿ ನಯಿಸಲು ಅನೇಕ ಅವಕಾಶಗಳು ಅರಸಿ ಬಂದವು. ಆದರೆ ಇನ್ನು ಕಾಲೇಜಿಗೆ ಹೋಗುತ್ತಿದ್ದ ಕಾರಣ ಶಿಕ್ಷಣಕ್ಕೆ ಜಾಸ್ತಿ ಒತ್ತು ಕೊಟ್ಟೆ. ಮೊನ್ನೆಯಷ್ಟೆ ಡಿಗ್ರಿ ಮುಗಿಸಿದ್ದೇನೆ. ಉದ್ಯೋಗ ಸಿಕ್ಕಿದರೂ ಕೂಡ ಕೆಲಸಕ್ಕೆ ಸೇರದೆ, ನಟನಾ ಕ್ಷೇತ್ರ ದಲ್ಲೇ ಮುಂದುವರಿಬೇಕೆಂದು ತೀರ್ಮಾನಿಸಿದೆ. ಆಗ ಯುಗಗಳ ಗೀತೆ ಧಾರಾವಾಹಿಗೆ ಆಡಿಷನ್ ಕೊಡುವ ಮೂಲಕ ಆಯ್ಕೆ ಯಾದೆ.

ಮಾಡೆಲಿಂಗ್ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದು ಏಕೆ? 
ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಮೊದಲಿನಿಂದಲೂ ಇತ್ತು. ನಮ್ಮ ಕಾಲೇಜಿನಲ್ಲಿ ಟೈಮ್ಸ್ ಆಫ್ ಇಂಡಿಯಾದವರು ನಡೆಸಿದ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ನಾನು ಗೆದ್ದಿದ್ದೆ. ನಂತರ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಟಾಪ್-5ನಲ್ಲಿ ಆಯ್ಕೆಯಾದಾಗ ಹಲವಾರು ಧಾರಾವಾಹಿಗಳಿಗೆ ನಟಿಸುವ ಆಫರ್‌ಗಳು ಬರಲಾರಂಭಿಸಿದವು. ಪ್ರಸಾದ್ ಬಿಡ್ಡಪ್ಪ ಅವರ ಮಾಡೆಲಿಂಗ್ ಏಜೆನ್ಸಿಯಲ್ಲಿ ಟ್ರೈನಿಂಗ್ ಪಡೆದುಕೊಂಡಿದ್ದೇನೆ. ನಂತರ ಪ್ಲಿಪ್‌ಕಾರ್ಟ್, ಅಮೆಜಾನ್ ಕಡೆಯಿಂದ ಅನೇಕ ಆಫರ್‌ಗಳು ಬರಲಾರಂಭಿಸಿದವು. ಹೀಗೆ ನನ್ನ ಮಾಡೆಲಿಂಗ್ ಪ್ರಯಾಣ ಶುರುವಾಯಿತು.

ಶಾಲಾ-ಕಾಲೇಜು ದಿನಗಳಲ್ಲಿ ಇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ರಾ?
ಲ್ಯದಿಂದಲೂ ನನಗೆ ಡ್ರಾಮಾ ಹಾಗೂ ಡ್ಯಾನ್ಸ್ ಅಂದ್ರೆ ಇಷ್ಟ. ತಪ್ಪದೆ ಇವೆರಡರಲ್ಲಿ ಭಾಗವಹಿಸು ತ್ತಿದ್ದೆ. ಕಾಲೇಜು ದಿನಗಳಲ್ಲಿ ಫ್ಯಾಶನ್ ಟೀಂನಲ್ಲಿ ನಾನೇ ತಂಡದ ನಾಯಕಿಯಾಗಿದ್ದೆ.

ಕನಸಿನ ಪಾತ್ರ?
ಪೌರಾಣಿಕ ಕಥೆಗಳೆಂದರೆ ಇಷ್ಟ. ದೇವಿ ಪಾತ್ರ ಅಥವಾ ರಾಣಿ ಪಾತ್ರ ಮಾಡೋದೆಂದರೆ ಏನೋ ಖುಷಿ. ದೆವ್ವದ ಪಾತ್ರ ಮಾಡಬೇಕೆಂಬ ಆಸೆ ಇದೆ. ಪಾತ್ರಗಳು ವಿಭಿನ್ನವಾಗಿರಬೇಕು.

ಸಿನಿಮಾ ಆಫರ್ ಬರುತ್ತಿವೆಯಾ?
ಸದ್ಯಕ್ಕೆ ಯಾವುದೂ ಬಂದಿಲ್ಲ. ಧಾರಾವಾಹಿಯಲ್ಲೇ ಬ್ಯುಸಿಯಾಗಿದ್ದೇನೆ. ಮುಂದೆ ಒಳ್ಳೆಯ ಆಫರ್‌ಗಳು ಬಂದರೆ ಸಿನಿಮಾದಲ್ಲಿ ಅಭಿನಯಿಸುತ್ತೇನೆ.

ಟೆಲಿ ಸೀರಿಯಲ್ ಬಿಟ್ಟು ಸಿನಿಮಾ ಕಡೆ ಮುಖ ಮಾಡುತ್ತೀರಾ?
ಸೀರಿಯಲ್ ಬಿಟ್ಟು ಹೋಗೋದಿಲ್ಲ. ಒಳ್ಳೆಯ ಸಿನಿಮಾ ಆಫರ್ ಬಂದರೆ ನಮ್ಮ ಟೀಂ ಜೊತೆ ಮಾತುಕತೆ ಮಾಡಿ ಡೇಟ್ಸ್ ಹೊಂದಿಕೆಯಾದರೆ ಸಿನಿಮಾದಲ್ಲಿ ಅಭಿನಯಿಸುತ್ತೇನೆ.

ನಟನೆಗೆ ಸ್ಫೂರ್ತಿ?
ರಾಧಿಕಾ ಪಂಡಿತ್. ಅವರ ಕೆಲಸ, ಶ್ರದ್ದೆ ಎಲ್ಲವೂ ನನಗೆ ಇಷ್ಟ. ಹಾಗಾಗಿ ಅವರೇ ನನಗೆ ಸ್ಫೂರ್ತಿ.

ನಟನಾ ಲೋಕ ಹೇಗಿದೆ?
ಮೊದಲಿನಿಂದಲೂ ನಟನಾ ಲೋಕದಲ್ಲಿ ಕೆಲಸ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಈಗ ಅದು ನನಸಾಗಿದೆ. ನಮ್ಮಲ್ಲಿರುವುದು ಒಂದೇ ಜೀವನ. ಹಾಗಾಗಿ ನಾವು ಈ ಜೀವನದಲ್ಲಿ ಹಲವಾರು ಪಾತ್ರ ಹಚ್ಚುವ ಮೂಲಕ ಅಭಿನಯಿಸಬಹುದು. ನಟನೆಯಿಂದ ಕೆಲವರಿಗೆ ಮಾದರಿಯೂ ಆಗಬಹುದು.

ಸಾಧಿಸಬೇಕು ಎನ್ನುವವರಿಗೆ ನಿಮ್ಮ ಸಲಹೆ?
ಮೊದಲು ಏನು ಸಾಧನೆ ಮಾಡಬೇಕು ಎಂಬ ಕನಸು ಅವರಿಗಿರವೇಕು. ಆತ್ಮವಿಶ್ವಾಸ, ಶ್ರದ್ದೆ, ಪರಿಶ್ರಮ ಸಾಧನೆಯ ಮೂಲ ಮಂತ್ರ.

ನಿಮ್ಮ ಈ ಯಶಸ್ಸಿನ ಖುಷಿಯಲ್ಲಿ ಯಾರಿಗೆ ಕೃತಜ್ಞತೆ ಸಲ್ಲಿಸುತ್ತೀರಾ?
ಮೊದಲನೆಯದಾಗಿ ನಮ್ಮ ತಂದೆ-ತಾಯಿ ಹಾಗೂ ನನ್ನ ಇಬ್ಬರು ಅಕ್ಕಂದಿರು. ಅದಲ್ಲದೆ ನನಗೆ ಡ್ಯಾನ್ಸ್ ಮತ್ತು ನಾಟಕ ಕಲಿಸಿ ಕೊಟ್ಟ ಗುರುಗಳಿಗೆ ಹಾಗೂ ನಿರ್ಮಾಪಕಿ ನಂದಿನಿ ಅವರಿಗೆ ನಾನು ಯಾವತ್ತೂ ಕೃತಜ್ಞಳು.

ಈ ಧಾರಾವಾಹಿಯಲ್ಲಿ ನಿಮ್ಮ ಇನ್ವಾಲ್‌ಮೆಂಟ್ ಹೇಗಿದೆ?
ನಿಜ ಜೀವನದಲ್ಲಿ ಪಂಚಮಿಗೆ ಹಾಗೂ ಸಿರಿಗೆ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಪಂಚಮಿಯಿಂದ ಕಲಿಯೋದು ಸಾಕಷ್ಟಿದೆ. ಅವಳು ಏನನ್ನೂ ನಿರೀಕ್ಷೆ ಮಾಡದೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತಾಳೆ. ನನಗೆ ಮೊದಲೇ ನಿರ್ಮಾಪಕಿ ನಂದಿನಿ ಅವರು ಪಾತ್ರದ ಬಗ್ಗೆ, ಪಾತ್ರಕ್ಕೆ ಯಾವ ರೀತಿ ತಯಾರಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದರು. ಹಾಗಾಗಿ ನಾನು ಪ್ರತಿದಿನ ಆಫ್ ಸ್ಕ್ರೀನ್‌ ನಲ್ಲಿ ಕೂಡ ಪಂಚಮಿ ಆಗಿರೋಕೆ ಪ್ರಯತ್ನಿಸುತ್ತೇನೆ. ಅದು ನನಗೆ ಆನ್‌ಸ್ಕ್ರೀನ್‌ಗೆ ಸಹಾಯವಾಗುತ್ತದೆ.

ಮರೆಯಲಾಗದಂತ ನೆನಪು?
ಈ ಧಾರಾವಾಹಿಗೆ ಆಫರ್ ಸಿಕ್ಕ ಕ್ಷಣ. ಯುಗಗಳ ಗೀತೆ ಪೋಸ್ಟರ್ ಹೊರಗೆ ನೋಡಿದ್ದು, ಮೊದಲ ಎಪಿಸೋಡ್‌ನಲ್ಲಿ ನನ್ನನ್ನು ನಾನು ಟಿ.ವಿಯಲ್ಲಿ ನೋಡಿದ್ದು, ಸಂಬಂಧಿಕರೆಲ್ಲ ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದು ನನ್ನ ಜೀವನದ ಸಿಹಿ ನೆನಪು.

ನಿಮ್ಮ ಫಿಟ್ನೆಸ್‌ನ ಗುಟ್ಟೇನು?
ಡ್ಯಾನ್ಸ್. ದಿನದಲ್ಲಿ ಅರ್ಧ, ಮುಕ್ಕಾಲು ಗಂಟೆ ಡ್ಯಾನ್ಸ್ ಮಾಡುತ್ತೇನೆ. ಅದಲ್ಲದೆ ಯೋಗ ಹಾಗೂ ವಾಕಿಂಗ್ ಮಾಡುತ್ತೇನೆ. ಸಿಕ್ಕದ್ದನ್ನು ತಿನ್ನದೆ ಮಿತಿಯಾದ, ಒಳ್ಳೆಯ ಆಹಾರ ಸೇವಿಸುತ್ತೇನೆ.

ವೀಕ್ಷಕರಿಗೆ ಏನು ಹೇಳೋಕೆ ಇಷ್ಟಪಡುತ್ತೀರಾ?
ಕಾಲೇಜ್ ಹುಡುಗರಿಂದ ಹಿಡಿದು ಎಲ್ಲಾ ವಯಸ್ಸಿನವರು ಕೂತು ನೋಡಬಹುದಾದ ಧಾರಾವಾಹಿ. ತುಂಬಾ ಹಿರಿಯ ಕಲಾ ವಿದರು ಕೂಡ ಇದ್ದಾರೆ. ಇದೇ ಮೊದಲ ಬಾರಿಗೆ ಕಾಲೇಜ್ ಲೈಫ್ ಬಗ್ಗೆ ಧಾರಾವಾಹಿ ಪ್ರಸಾರವಾಗುತ್ತಿದೆ. ಹಾಗಾಗಿ ಎಲ್ಲರ ಸಹಕಾರ ಆರ್ಶೀವಾದ ಬೇಕು.

ಸುಹಾನಿ ಬಡೆಕ್ಕಿಲ

Related Articles

Leave a Reply

Your email address will not be published. Required fields are marked *

Language
Close