About Us Advertise with us Be a Reporter E-Paper

ಯಾತ್ರಾ panel2

ಯುಂಗ್ ಫ್ರಾ ರೈಲು ನಿಲ್ದಾಣ ಸ್ವಿಡ್ಜರ್‌ಲೆಂಡ್

ಜಿ.ವೆಂಕಟೇಶಮೂರ್ತಿ

ಸ್ವಿಟ್ಜರ್ಲೆಂಡ್‌ನ ಯುಂಗ್ ಫ್ರಾ ರೈಲು ನಿಲ್ದಾಣವು ಯೂರೋಪ್ ಖಂಡದ ಅತಿ ಎತ್ತರ ಪ್ರದೇಶದ ರೈಲ್ವೇ ನಿಲ್ದಾಣವೆಂದು ಪ್ರಸಿದ್ಧಿಯಾಗಿದೆ. ಇಲ್ಲಿ ಯೂರೋಪ್ ಖಂಡದ ಅತಿ ಎತ್ತರ ಪ್ರದೇಶದ ಅಂಚೆ ಕಚೇರಿ ಸಹ ಇದೆ.

ಹಿಮದಿಂದ ಆವೃತವಾಗಿರುವ ಯುಂಗ್ ಫ್ರಾ ಪರ್ವತದ ನೆಲಮಾಳಿಗೆಯಲ್ಲಿ, ಈ ರೈಲ್ವೇ ನಿಲ್ದಾಣವಿದೆ. ಯುಂಗ್ ಫ್ರಾ ಪರ್ವತದ ಶಿಖರವು ಸಮುದ್ರ ಮಟ್ಟದಿಂದ 4158ಮೀ.( 13,642 ಎತ್ತರದಲ್ಲಿದ್ದು, ಈ ನಿಲ್ದಾಣವು ಸಮುದ್ರ ಮಟ್ಟದಿಂದ 3454 ಮೀ.(11332 ಅಡಿ) ಎತ್ತರ ದಲ್ಲಿದೆ. ಸುರಕ್ಷತೆಗಾಗಿ ರೈಲ್ವೇ ಹಳಿಗಳ ಮಧ್ಯೆ ಕಾಗ್ ವೀಲ್ ಕಂಬಿಗಳನ್ನು ಅಳವಡಿಸಲಾಗಿದೆ. ಈ ರೈಲ್ವೇಯು ಕ್ಲೈನ್ ಶಿಡೆಗ್ ರೈಲ್ವೇ ನಿಲ್ದಾಣದಿಂದ 9 ಕಿ. ಮೀ. ಉದ್ದವಿದ್ದು ನಿಲ್ದಾಣದಲ್ಲಿ ಭಾರತೀಯ ಹೊಟೇಲ್, ಮತ್ತು ಇತರೆ ರೆಸ್ಟೋರೆಂಟ್, ಶಾಪಿಂಗ್ ಮಾಲ್‌ಗಳೂ ಇರುತ್ತವೆ.

ಈ ರೈಲ್ವೇ ನಿಲ್ದಾಣವು ಆ.1, 1912ರಲ್ಲಿ ಪ್ರಾರಂಭವಾಯಿತು. ಈ ರೈಲ್ವೇ ನಿಲ್ದಾಣವನ್ನು ಜಾಗತಿಕ ಪರಂಪರೆಯ ಕೇಂದ್ರವೆಂದು ರಲ್ಲಿ ಘೋಷಿಸಲಾಯಿತು. ಈ ರೈಲ್ವೇ ನಿಲ್ದಾಣದಿಂದ ಪರ್ವತ ಶಿಖರಕ್ಕೆ ಹೋಗಲು ಅನೇಕ ಸುರಂಗ ಮಾರ್ಗಗಳಿದ್ದು ಮಧ್ಯೆ ಡಾಕ್ಯುಮೆಂಟ ರಿ ಚಿತ್ರಗಳನ್ನು ತೋರಿಸಲು ಚಿತ್ರ ಮಂದಿರ ಇರುತ್ತದೆ. ಮುಂದೆ ಸಾಗಿದರೆ ಹಿಮದ ಅರಮನೆ ಇದ್ದು ಅಲ್ಲಿ ಅನೇಕ ಹಿಮ ಪ್ರತಿಮೆ ಗಳನ್ನು ನೋಡಬಹುದು. ಈ ಸುಂದರ ಪ್ರವಾಸಿ ಸ್ಥಳಕ್ಕೆ ನಾನು ಮತ್ತು ನನ್ನ ಪತ್ನಿ ಕಳೆದ ಮೇ 16 ರಂದು ಭೇಟಿ ನೀಡಿ, ಯೂರೋಪ್ ಖಂಡದ ಅತಿ ಎತ್ತರ ಪ್ರದೇಶದ ಹೋಟೆಲ್ ಭೋಜನ ಮಾಡುವ ಸೌಭಾಗ್ಯ ನಮ್ಮದಾ ಯಿತು.

ಅ ಇಲ್ಲಿನ ಇತರೆ ಆಕರ್ಷಣೆಗಳು
ಸ್ಫಿನ್ ಕ್ಸ್ ಟೆರೇಸ್- ಸಂಶೋಧನಾ ಕೇಂದ್ರ, ಮತ್ತು ಅಂತರಿಕ್ಷ ವೀಕ್ಷಣಾಲಯ . ಇಲ್ಲಿಂದ ಇಟಲಿ ಜರ್ಮನಿ ಮತ್ತು ಫ್ರಾನ್ಸ್ ದೇಶಗಳನ್ನು ನೋಡಬಹುದು.

ಅ ಸ್ನೋ ಫನ್-ಹಿಮದಲ್ಲಿ ಆಟಗಳು
ಆಲ್ ಪೈನ್ ಸೆನ್ಸೇಷನ್ – ಬೆಳಕು ಮತ್ತು ಸಂಗೀತ ದ ಡಾಕ್ಯುಮೆಂಟರಿ.
ಯೂರೋಪ್ ಖಂಡದ ಅತಿ ಹೆಚ್ಚು ಎತ್ತರದ ಪ್ರದೇಶದಲ್ಲಿ ಶಾಪಿಂಗ್. ಗಡಿಯಾರಗಳು ಮತ್ತು ಚಾಕಲೇಟ್ ಪ್ರಸಿದ್ಧಿಯಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close