Sri Ganesh Tel

ರಂಗೋಲಿ ಕೆಳಗೆ ತೂರುತ್ತಿರುವ ರೆಸ್ಟಾರಂಟ್‌ಗಳು

Posted In : ದೇಶ

ದೆಹಲಿ: ರೆಸ್ಟಾರಂಟ್‌ನಲ್ಲಿ ಆಹಾರ ಸೇವನೆ ಮಾಡಲು ಇದ್ದ ಶೇ 18 ಹಾಗೂ ಶೇ 12 ರಷ್ಟಿದ್ದ ಜಿಎಸ್‌ಟಿ ತೆರಿಗೆಯನ್ನು ಶೇ 5ಕ್ಕೆ ಇಳಿಸಿದ ಬಳಿಕವೂ ದೇಶಾದ್ಯಂತ ಅನೇಕ ರೆಸ್ಟಾರಂಟ್‌ಗಳು ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ.

ರಂಗೋಲಿ ಕೆಳಗೆ ತೂರುವ ಪ್ರಹಸನ ನಡೆಸುತ್ತಿರುವ ರೆಸ್ಟಾರಂಟ್‌ಗಳು ಖಾದ್ಯಗಳ ಮೂಲ ಬೆಲೆಯನ್ನೇ ಏರಿಕೆ ಮಾಡಿದ್ದು ಜಿಎಸ್‌ಟಿ ಇಳಿಕೆಯ ಬಳಿಕವೂ ಯಾವುದೇ ದರ ಇಳಿಕೆ ಮಾಡಿಲ್ಲ. ಕಚ್ಛಾ ವಸ್ತುಗಳು ಹಾಗೂ ಬಾಡಿಗೆ ಮೇಲಿನ ತೆರಿಗೆಯಲ್ಲಿ ನೀಡುತ್ತಿದ್ದ ಕ್ರೆಡಿಟ್‌ಅನ್ನು ಸರಕಾರ ಇದೇ ಸಂದರ್ಭ ಹಿಂಪಡೆದಿದೆ ಎಂಬುದು ಈ ರೆಸ್ಟಾರಂಟ್‌ ಸರಣಪಣಿಗಳ ವಾದವಾಗಿದೆ.

ಸ್ಟಾರ್‌ಬಕ್ಸ್‌, ಮ್ಯಾಕ್‌ ಡೊನಾಲ್ಡ್‌ ಹಾಗೂ ಡಾಮಿನೋಸ್‌ ಪಿಜ್ಜಾಗಳು ಈಗಾಗಲೇ ತಮ್ಮಲ್ಲಿ ದೊರಕುವ ಖಾದ್ಯಗಳ ಬೆಲೆಯನ್ನು ಏರಿಕೆ ಮಾಡಿವೆ. ಕೆಎಫ್‌ಸಿಯಂತ ಇನ್ನಿತರ ರೆಸ್ಟಾರಂಟ್‌ಗಳು ಮುಂದಿನ ವಾರದಿಂದ ಇದೇ ಹಾದಿ ತುಳಿಯಲು ನಿರ್ಧರಿಸಿವೆ.

ಈ ಮುನ್ನ ದೇಶದ ಪ್ರತಿಷ್ಠಿತ ಕಾಫಿ ರೆಸ್ಟಾರಂಟ್‌ನಲ್ಲಿ 155ರು ಮೂಲಬೆಲೆಗೆ ದೊರಕುತ್ತಿದ್ದ ಕಾಫಿ ಮೇಲೆ ಶೇ 18 ಜಿಎಸ್ ಟಿ ತೆರಿಗೆ ರೂಪದಲ್ಲಿ 28 ರುಗಳನ್ನು ತೆರಬೇಕಿತ್ತು. ಆದರೆ ಈಗ ಇದೇ ಕಾಫಿಯ ಮೂಲಬೆಲೆಯನ್ನು 170ರುಗೆ ಏರಿಸಿದ್ದು ಜಿಎಸ್‌ಟಿ ದರವನ್ನು ಶೇ 5ಕ್ಕೆ ಇಳಿಸಿದ ಬಳಿಕವೂ ಗ್ರಾಹಕರಿಗೆ ಕೇವಲ 4 ರುಗಳಷ್ಟು ಬೆಲೆ ಇಳಿಕೆಯಾಗಿದೆ. ಮೊದಲಿನ ಬೆಲೆಯನ್ನೇ ಮುಂದುವರೆಸಿದ್ದಲ್ಲಿ ಗ್ರಾಹಕರಿಗೆ 20ರುಗಳಷ್ಟು ಲಾಭವಾಗಬೇಕಿತ್ತು.

ತೆರಿಗೆ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡದ ವ್ಯಪಾರಿಗಳ ಮೇಲೆ ನಿಗಾ ಇಡಲು ಲಾಭಕೋರ ವಿರೋಧಿ ಸಂಸ್ಥೆಯನ್ನು ತರುವುದಾಗಿ ಸರಕಾರ ಹೇಳಿದ್ದರೂ ಈ ವಿಚಾರವಾಗಿ ರೆಸ್ಟಾರಂಟ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಕಠಿಣವಾಗಿದೆ.

“ಜುಲೈನಲ್ಲಿ ಜಿಎಸ್ ಟಿ ಜಾರಿಯಾದ ಬಳಿಕ ದುರ್ಲಾಭ ಪಡೆದು ಬೆಲೆ ಏರಿಕೆ ಮಾಡಿದ ಸಾಕಷ್ಟು ಪ್ರಕರಣಗಳು ನಡೆದಿದ್ದವು. ಆದರೆ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಾವು ಮುಂದಾಗಲಿಲ್ಲ. ಬೆಲೆಗಳನ್ನು ನಾವು ನಿಯಂತ್ರಿಸದ ಕಾರಣ ಬೆಲೆಯೇರಿಕೆಗಳು ರೆಸ್ಟಾರಂಟ್‌ಗಳ ನಡುವಿನ ಪೈಪೋಟಿಯನ್ನುಅವಲಂಬಿಸಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

16 + twelve =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top