Sri Ganesh Tel

ವಿನಯ್‌ಗೆ ಹ್ಯಾಟ್ರಿಕ್‌, ಮುಂಬೈ ಏಳು ವಿಕೆಟ್‌ ಪತನ

Posted In : ಕ್ರೀಡೆ

ನಾಗ್ಪುರ: ಸತತ ಎರಡು ವರ್ಷ ಕ್ವಾರ್ಟರ್‌ ಪೈನಲ್‌ನಲ್ಲಿ ಎಡವಿದ ಬಳಿಕ ಈ ಬಾರಿಯ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಹಳೆಯ ತಪ್ಪುಗಳನ್ನು ಪುನರಾವರ್ತಿಸದಿರಲು ತೀರ್ಮಾನಿಸಿ ಕಣಕ್ಕಿಳಿದಂತೆ ಕಂಡ ಕರ್ನಾಟಕ ಎದುರಾಳಿ ಮುಂಬಯಿ ವಿರುದ್ಧ ಪಂದ್ಯದ ಮೊದಲ ಅವಧಿಯಲ್ಲೇ ಮೇಲುಗೈ ಸಾಧಿಸಿದೆ.

ಭೋಜನ ವಿರಾಮಕ್ಕೆ ತೆರಳುವ ಮುನ್ನವೇ ಮುಂಬಯಿ 90 ರನ್‌ಗಳಿಗೆ ತನ್ನ ಏಳು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ಸಂಕಷ್ಟದಲ್ಲಿ ಸಿಲುಕಿದೆ. ತಮ್ಮ 100ನೇ ದೇಶೀ ಪಂದ್ಯವಾಡುತ್ತಿರುವ ಕರ್ನಾಟಕ ತಂಡದ ನಾಯಕ ವಿನಯ್‌ ಕುಮರ್‌ ಪಂದ್ಯದ ಮೂರನೇ ಓವರ್‌ನಲ್ಲೇ ಹ್ಯಾಟ್‌ ಟ್ರಿಕ್‌ ಪಡೆಯುವ ಮೂಲಕ ಎರುರಾಳಿಗೆ ಆರಂಭಿಕ ಆಘಾತ ನೀಡಿದರು.

ಪಂದ್ಯದ ಮೊದಲನೇ ಓವರ್‌ನ ಕೊನೆ ಎಸೆತದಲ್ಲಿ ಆರಂಭಿಕ ಪೃಥ್ವಿ ಶಾ ವಿಕೆಟ್‌ ಪಡೆದ ವಿನಯ್‌ ತಮ್ಮ ಮುಂದಿನ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಗೋಕುಲ್‌ ಬಿಸ್ತಾ ಹಾಗೂ ಆಕಾಶ್‌ ಪರ್ಕರ್‌ ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡು ಹ್ಯಾಟ್‌ ಟ್ರಿಕ್‌ ಪೂರ್ಣಗೊಳಿಸಿದರು. ಬಿಗುವಿನ ಬೌಲಿಂಗ್‌ ದಾಳಿ ನಡೆಸಿದ ವಿನಯ್‌ ಎದುರಾಳಿಗೆ ಉಸಿರಾಡಲು ಅವಕಾಶವನ್ನೇ ನೀಡಲಿಲ್ಲ.

ಆರಂಭಿಕ ಆಘಾತದಿಂದ ತಮ್ಮ ತಂಡವನ್ನು ಮೆಲೆತ್ತಲು ಐದನೇ ಕ್ರಮಾಂಕದಲ್ಲಿ ಆಡಲಿಳಿದ ಸಿದ್ದೇಶ್‌ ಲಾಡ್‌ ವಿನಯ್‌ ಕುಮಾರ್‌ರ ಅದ್ಭುತ ಎಸೆತವೊಂದಕ್ಕೆ ನಿರುತ್ತರರಾಗಿ ವಿಕೆಟ್‌ಕೀಪರ್‌ ಗೌತಮ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಹಾದಿ ಹಿಡಿದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಅಖಿಲ್‌ ಹೆರ್ವಾಡ್ಕರ್‌ ತಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪೆರೇಡ್‌ ಮಾಡುತ್ತಿದ್ದರೆ ಮೊತ್ತವನ್ನು 100ರ ಗಡಿ ದಾಟಿಸಲು ಯತ್ನಿಸುತ್ತಿದ್ದಾರೆ.

ವಿನಯ್‌ಗೆ ಉತ್ತಮ ಬೆಂಬಲ ನೀಡಿದ ಅಭಿಮನ್ಯ ಮಿಥುನ್‌, ಶ್ರೀನಾಥ್‌ ಅರವಿಂದ್‌  ಹಾಗು ಕೃಷ್ಣಪ್ಪ ಗೌತಮ್‌ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ.

Leave a Reply

Your email address will not be published. Required fields are marked *

2 × 1 =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top