lakshmi-electricals

ರಸ್ತೆ ಅಪಘಾತ: ಮೂವರ ದುರ್ಮರಣ

Posted In : ಚಿತ್ರದುರ್ಗ, ರಾಜ್ಯ

ಚಿತ್ರದುರ್ಗ: ಹಿರಿಯೂರು ತಾಲೂಕು ಜವನಗೊಂಡನಹಳ್ಳಿ ಸಮೀಪ ಲಾರಿಗೆ ಸ್ಕಾರ್ಪಿಯೋ ಹಿಂಬದಿಯಿಂದ ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಸ್ಕಾರ್ಪಿಯೋ ಗುದ್ದಿದ ಪರಿಣಾಮ ಸ್ಕಾರ್ಪಿಯೋದಲ್ಲಿದ್ದ ದಂಪತಿ ಹಾಗೂ ಮಗ ಸಾವನ್ನಪ್ಪಿದ್ದಾರೆ. ತಾವರಕೆರೆಯ ಆಂಜನೇಯ ಶೆಟ್ಟಿ(65), ಸಣ್ಣರತ್ನಮ್ಮ(55), ಮಗ ಜನಾರ್ಧನ(35) ಮೃತ ದುರ್ದೈವಿಗಳು. ಗಾಯಗೊಂಡ ನಾಲ್ವರನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

fourteen − four =

 
Back To Top