ರಾಜ್ಯ ನೀತಿ ಸಾಧನವಾಗಿ ಭಯೋತ್ಪಾದನೆ: ಭಾರತ ಟೀಕೆ

Posted In : ವಿದೇಶ

ನ್ಯೂಯಾರ್ಕ್: ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ಸ್ವರ್ಗವೆನಿಸಿದೆ. ಭಯೋತ್ಪಾದನೆಯನ್ನು ತನ್ನ ರಾಜ್ಯ ನೀತಿಯ ಸಾಧನವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಭಾರತ ಆಕ್ರೋಶ ವ್ಯಕ್ತಪಡಿಸಿದೆ.

ನ್ಯೂಯಾರ್ಕ್ ಮೂಲದ ಭಾರತದ ಶಾಶ್ವತ ಮಿಷನ್ ಸಚಿವ ಎಸ್.ಶ್ರೀನಿವಾಸ್ ಮಾತ ನಾಡಿ, ಜಮ್ಮು-ಕಾಶ್ಮೀರ ಯಾವತ್ತಿಗೂ ಭಾರತದ ಅವಿಭಾಜ್ಯ ಅಂಗ ಎಂದು ನೆರೆ ದೇಶಕ್ಕೆ ನೆನಪು ಮಾಡಿಕೊಡುತ್ತೇನೆ. ಪಾಕಿಸ್ತಾನ ಕೂಡ ಈ ನಿಟ್ಟಿನಲ್ಲಿ ಸಮನ್ವಯ ತೋರುವುದು ಎಂದು ಭಾವಿಸುತ್ತೇನೆ ಎಂದರು.

ಅಂತರ ದೇಶ ಬಾಂಧವ್ಯಗಳು ಉತ್ತಮ ನೆರೆದೇಶಗಳು, ಪರಸ್ಪರ ಗೌರವ ಮತ್ತು ಮತ್ತೊಬ್ಬರ ವಿಷಯದಲ್ಲಿ ಮಧ್ಯ ಪ್ರವೇಶಿಸದಿರು ವುದನ್ನು ಕೂಡ ಒಳಗೊಂಡಿರುತ್ತದೆ ಎಂದು ಹೇಳಿದರು. ಭಾರತದಲ್ಲಿ ತಮಗೆ ಏನು ಬೇಕು ಎಂದು ಕೇಳಲು ಜನರಿಗೆ ಆಯ್ಕೆ ಸ್ವಾತಂತ್ರ್ಯವಿದೆ. ತೀವ್ರಗಾಮಿಗಳು ಮತ್ತು ಮೂಲಭೂತವಾದಿಗಳು ಜನರನ್ನು ದುರ್ಬಲ ಗೊಳಿಸಲು ಸಾಧ್ಯವಿಲ್ಲ. ಅಹಿಂಸೆಯ ಮೂಲಕ ಶಾಂತಿಯನ್ನು ಪ್ರಚಾರ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

one × 5 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top