ಲಾರಿಗೆ ಬೆಂಕಿ: ಸುಟ್ಟುಕರಕಲಾದ 35 ಬೈಕ್‌‌‌ಗಳು!

Posted In : ಕೊಪ್ಪಳ, ರಾಜ್ಯ

ಕೊಪ್ಪಳ: ಹೊಸ ದ್ವಿಚಕ್ರ ವಾಹನಗಳನ್ನು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 35 ಹೊಸ ಬೈಕ್‌‌ಗಳು ಸುಟ್ಟು ಕರಕಲಾಗಿರುವ ಘಟನೆ ಬುಧುವಾರದಂದು ನಡೆದಿದೆ.

ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹರಿಯಾಣ ಮೂಲದ ಲಾರಿ ಇದಾಗಿದ್ದು, ಟಿವಿಎಸ್ ಕಂಪೆನಿಯ ಬೈಕ್‌‌ಗಳನ್ನು ಸಾಗಿಸುತ್ತಿತ್ತು. ಲಾರಿಯಲ್ಲಿ ಒಟ್ಟು 65 ಹೊಸ ಬೈಕ್‌‌ಗಳಿದ್ದವು. ಆ ಪೈಕಿ 35 ಬೈಕ್‌‌ಗಳು ಬೆಂಕಿಗೆ ಆಹುತಿಯಾಗಿವೆ. ಹೊಸಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಟೋಲ್‌‌ಗೇಟ್ ಮೂಲಕ ಸಾಗಿ ಮುಂದೆ ಬರುವ ಕೆರೆಹಳ್ಳಿ ಟೋಲ್ ಗೇಟ್ ತಪ್ಪಿಸುವ ಉದ್ದೇಶದಿಂದ ಲಾರಿ ಚಾಲಕ ಲಾರಿಯನ್ನು ಬೇವಿನಹಳ್ಳಿ ಮೂಲಕ ಸಾಗುತ್ತಿದ್ದ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಲಾರಿಯ ಒಳಗೆ ಬೆಂಕಿ ಹೊತ್ತಿಕೊಂಡಿದೆ. ಆದರೆ, ಲಾರಿಯೊಳಗೆ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಇನ್ನೂ ನಿಗೂಢವಾಗಿದೆ. ಸಕಾಲಕ್ಕೆ ಕೊಪ್ಪಳ ಮತ್ತು ಹೊಸಪೇಟೆಯಿಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಹೀಗಾಗಿ, ಹೆಚ್ಚಿನ ಅನಾಹುತ ತಪ್ಪಿದೆ. ಈ ಸಂಬಂಧ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

one + 6 =

Wednesday, 26.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ -ಋತು, ಚೈತ್ರ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ನಿತ್ಯನಕ್ಷತ್ರ: ಅಶ್ವಿನಿ ಯೋಗ: ಪ್ರೀತಿ, ಕರಣ: ಚತುಷ್ಫಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 26.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ -ಋತು, ಚೈತ್ರ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ನಿತ್ಯನಕ್ಷತ್ರ: ಅಶ್ವಿನಿ ಯೋಗ: ಪ್ರೀತಿ, ಕರಣ: ಚತುಷ್ಫಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top