About Us Advertise with us Be a Reporter E-Paper

Breaking Newsದೇಶಪ್ರಚಲಿತ

ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಪ್ರಿಯಾ ದತ್

ದೆಹಲಿ: 2019 ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಂಸದೆ ಪ್ರಿಯಾ ದತ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ, ಇದರಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಭಾರೀ ಹೊಡೆತವೆಂದು ತಿಳಿಯಲಾಗಿದೆ.

ಕಾಂಗ್ರೆಸ್ ಪಕ್ಷದ ಮುಂಬಯಿ ಘಟಕದೊಳಗೆ ಪರಸ್ಪರ ವಿರೋಧಿ ಬಣಗಳ ನಡುವಿನ ಕಚ್ಚಾಟಕ್ಕೆ ಬೇಸತ್ತು ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ’ ಎಂದು ಪ್ರಿಯಾ ದತ್ ಅವರು ರಾಹುಲ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಬಾಲಿವುಡ್ ಹಿರಿಯ ನಟನಾಗಿ, ರಾಜಕಾರಣಿಯಾಗಿ ಪರಿವರ್ತಿತರಾಗಿದ್ದ ದಿವಂತ ಸುನೀಲ್ ದತ್ ಅವರು ಪುತ್ರಿಯಾಗಿರುವ ಪ್ರಿಯಾ ದತ್, ಕಾಂಗ್ರೆಸ್ ಪಕ್ಷದೊಳಗಿನ ಬಣ ಸಂಘರ್ಷವನ್ನು ಪ್ರಶ್ನಿಸಿರುವ ಮೊದಲ ಮಾಜಿ ಕಾಂಗ್ರೆಸ್ ಸಂಸದೆಯಾಗಿದ್ದಾರೆ.

ಕಾಂಗ್ರೆಸ್ ಪಕ್ಷದೊಳಗಿನ ಬಣ ಸಂಘರ್ಷವನ್ನು ಪ್ರಶ್ನಿಸಿರುವ ಅವರು, 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನುಭವಿಸಿದ್ದ ಸಂದರ್ಭದಲ್ಲಿ ’ಪಕ್ಷದ ಸೋಲಿಗೆ ಆಂತರಿಕ ಸಂಘರ್ಷವೇ ಕಾರಣ ಎಂದು ಟೀಕಿಸಿದ್ದರು..

ಕಾಂಗ್ರೆಸ್ ಪಕ್ಷದ ನಿರಂತರ ಸೋಲುಗಳಿಗೆ ಅದರ ಅಂತರಿಕ ಕಲಹ ಕಾರಣ. ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿದೆ. ಇಲ್ಲದಿದ್ದರೆ ಈ ರೀತಿಯ ಸೋಲುಗಳು ಹೀಗೆಯೇ ಮುಂದವರಿಯಲಿವೆ’ ಎಂದು ಪ್ರಿಯಾ ದತ್ ಟ್ವಿಟರ್‌ನಲ್ಲಿ ಅಂದಿನ ದಿನಗಳಲ್ಲಿ ಬರೆದಿದ್ದರು.

ಹಾಗಿದ್ದರೂ ಪ್ರಯಾ ದತ್ ಅವರು ಅಂದಿನ ದಿನಗಳಲ್ಲಿ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರನ್ನು ಉತ್ತಮ ನಾಯಕ ಎಂದು ಹೊಗಳಿದ್ದರಲ್ಲದೆ, ಪಕ್ಷವನ್ನು ನಿರ್ದಿಷ್ಟ ದಿಕ್ಕಿನೆಡೆಗೆ ಒಯ್ಯುವಲ್ಲಿ ಅವರು ಪ್ರಯತ್ನಿಶೀಲರಾಗಿದ್ದಾರೆ ಎಂದು ಪ್ರಶಂಸಿಸಿದ್ದರು.

Related Articles

Leave a Reply

Your email address will not be published. Required fields are marked *

Language
Close