About Us Advertise with us Be a Reporter E-Paper

ರಾಜ್ಯ

ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ರೇಷ್ಮೆ ಸೀರೆಭಾಗ್ಯ!

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಬಂಪರ್ ಆಫರ್ ನೀಡಲು ಮುಂದಾಗಿದೆ.

9 ರಿಂದ 10 ಸಾವಿರ ರೂ. ಬೆಲೆ ಬಾಳುವ ಪ್ರಖ್ಯಾತ ಮೈಸೂರು ಸಿಲ್ಕ್ ಸೀರೆಯನ್ನು ಕೇವಲ 4,500 ರೂ.ಗಳಿಗೆ ಮಾರಾಟ ಮಾಡಲು ತೀರ್ಮಾನಿಸಲಾಗಿದೆ.

ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆ ಸಚಿವ ಸಾ ರಾ ಮಹೇಶ್ ಈ ವಿಚಾರವನ್ನು ತಿಳಿಸಿದ್ದು, ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಸೀರೆ ಜನಸಾಮಾನ್ಯರಿಗೂ ದೊರಕುವಂತೆ ಮಾಡಲು ಆರಂಭಿಕ ಬೆಲೆಗೆ ನೀಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ದರ ದುಬಾರಿ ಆಗಿರುವ ಕಾರಣ ಮೈಸೂರು ರೇಷ್ಮೆ ಸೀರೆ ನಮಗೆ ಕೈಗೆಟಕುವುದಿಲ್ಲವೆಂಬ ಭಾವನೆ ಹಲವರಲ್ಲಿದೆ. ಈಗ ಕಡಿಮೆ ಬೆಲೆಗೆ ಮಾರಾಟ ಮಾಡಲು ತೀರ್ಮಾನಿಸಿರುವುದರಿಂದ ಖರೀದಿಸಲು ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಮಧ್ಯಮ ವರ್ಗ ಹಾಗೂ ಬಡವರಿಗೂ ಮೈಸೂರು ಸಿಲ್ಕ್ ಸೀರೆ ಲಭ್ಯವಾಗಬೇಕು ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Language
Close