About Us Advertise with us Be a Reporter E-Paper

ಯಾತ್ರಾ panel2

ವಿದೇಶದಲ್ಲೊಂದು ಸರ್ವಿಸ್ ಅಪಾರ್ಟ್‌ಮೆಂಟ್…

ಮೋಹನ್ ಎಂ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳನ್ನು ಸುತ್ತುವ ಬಹು ದಿನಗಳ ನಮ್ಮ ಕನಸಿಗೆ ಒಂದು ರೂಪ ಹೋಗಿ ಬರಲು ಪ್ರಯಾಣದ ಟಿಕೆಟ್‌ಗಳನ್ನು ಖರೀದಿಸಲಾಯಿತು. ಉಳಿಯಲು (ಲಾಡ್ಜ್) ಮತ್ತು ಸ್ಥಳ ಸುತ್ತುವ (ಸೈಟ್ ಸೀಯಿಂಗ್) ಯೋಜನೆ ಮಾಡಬೇಕಿತ್ತು.

ಹೊಟೇಲ್‌ನಲ್ಲಿ ಬರೀ ಉಳಿಯುವ ಬದಲು, ಸರ್ವಿಸ್ ಅಪಾರ್ಟ್‌ ಮೆಂಟ್ ಮಾಡಿದರೆ ಹೇಗೆ? ಎಂಬ ಸಲಹೆ ಬಂತು. ಹೊರದೇಶ ಗಳಲ್ಲಿ ಸಸ್ಯ ಹಾರವು ಎಲ್ಲಾ ಕಡೆ ಸಿಗುವುದು ಅಷ್ಟು ಸುಲಭವಲ್ಲ. ಸರ್ವಿಸ್ ಅಪಾರ್ಟ್‌ ಮೆಂಟ್ ನಲ್ಲಿ ಅಡುಗೆ ಮಾಡಿಕೊಳ್ಳಲು ಅನು ಕೂಲವಿರುವುದರಿಂದ, ನಾವೇ ಬೆಂಗಳೂರಿನಿಂದ ರೆಡಿಮೇಡ್ ಫುಡ್ ಐಟಮ್ ಕೊಂಡೊಯ್ಯಲು ನಿರ್ಧರಿಸಿದೆವು.

ಮೇ13ರಂದು ನಾವು, (ನಾನು, ಹೆಂಡತಿ ಮತ್ತು ಮಗಳು) ವಿಮಾನದಲ್ಲಿ CAIRNS AIRPORT, ನ್ನು ತಲುಪಿ, ನಮ್ಮ ಮೊದಲೇ ಬುಕ್ ಮಾಡಿದ North cove waterfront suites, esplaned road ನ ಸರ್ವಿಸ್ ಆರ್ಪಾಟ್‌ಮೆಂಟ್‌ಗೆ ಬಂದಿಳಿದೆವು. ಆಗ ಸಮಯ ಮಧ್ಯಾಹ್ನ 2.30. ಮುಂದಿರುವ reception counter ಕ್ಲೋಸ್ ಆಗಿತ್ತು. ಕೈಯಲ್ಲಿ ಲಾಡ್ಜ್ ಬುಕಿಂಗ್ confirm ಆದ ಪತ್ರವಿತ್ತು. ಫೋನ್ ಮಾಡೋಣ ಅಂದರೆ ನಮ್ಮ ಮೊಬೈಲ್‌ಗೆ ಲೋಕಲ್ ಸಿಮ್ ಕಾರ್ಡ್ ಹಾಕಿಸಿರಲಿಲ್ಲ. ಕಟ್ಟಡದ ಸುತ್ತಲೂ ಒಂದು ಸುತ್ತು ಒಂದು ನರಪಿಳ್ಳೆ ಇಲ್ಲ. ಯಾಕಾದರೂ ಈ ಸರ್ವಿಸ್ ಅರ್ಪಾಟ್‌ಮೆಂಟ್ ಪ್ರಯೋಗ ಮಾಡಲು ಹೋದೆವೂ? ಅಂತ ಆ ಸಂದರ್ದ ಲ್ಲಿ ಅನ್ನಿಸಿತು.

ಆ ದಿನ ಭಾನುವಾರವಾದ್ದರಿಂದ 12 ಗಂಟೆವರೆಗೆ reception counter ಇರುತ್ತೆ. ಈ ವಿಷಯ ನಮಗೆ ಗೊತ್ತಿರಲಿಲ್ಲ. ಸರ್ವಿಸ್ ಅಪಾರ್ಟ್‌ಮೆಂಟ್ ಮೊದಲೆ ಬುಕ್ ಮಾಡಿ ದ್ದರಿಂದ, ಹೋದ ಕೂಡಲೇ ನಮ್ಮ ರೂಮಿನ ಕೀ ಸಿಗಬಹುದೆಂದು ನಂಬಿದ್ದೆವು. ಹೀಗೆ 10 ನಿಮಿಷ ಕಳೆಯುತ್ತಿರುವಾಗ, ನನ್ನ ಮಗಳು, ಸ್ಯೂಟ್‌ನ ( suit) ಪ್ರಾರಂಭ ಗೋಡೆಯಲ್ಲಿ ಬರೆದ ಸೂಚನೆಯನ್ನು ನೋಡುತ್ತಿದ್ದಳು. ಆ ಸೂಚನೆಯಂತೆ, ಪಕ್ಕದಲ್ಲೇ ಇದ್ದ ಗೋಡೆಗೆ ಅಂಟಿಸಿದ ಫೋನ್‌ನಲ್ಲಿ ಮಾತನಾಡಿದಾಗ, ಆ ಕಡೆ ಯಿಂದ ಹೇಳಿದ ಕೋಡ್ ನಂಬರುಅನ್ನು, ಅಲ್ಲಿದ್ದ ಲಾಕರ್‌ನಲ್ಲಿ ಒತ್ತಿದಾಗ ಲಾಕರ್ ಓಪನ್ ಆಗಿ ನಮ್ಮ ರೂಮಿನ ಕೀ ಮತ್ತು ವೆಲ್‌ಕಮ್ ಲೆಟರ್ ಸಿಕ್ಕಿತು. ಈ ಕೀ ಸಹಾಯದಿಂದ, ಏಳು ಸುತ್ತಿನ ಕೋಟೆಗೆ ಹೋದ ಹಾಗೆ, ಮೊದಲು ಮೈನ್ ಡೋರ್, ನಂತರ ಲಿಫ್ಟ್ ನಲ್ಲಿ ಲೆವೆಲ್ 2 ನಲ್ಲಿ, ನಮ್ಮ ರೂಮನ್ನು ಸೇರಿದೆವು.

ಮಾಡಿ, ವಾಷಿಂಗ್ ಮಿಷನ್‌ಗೆ ಬಟ್ಟೆಗಳನ್ನು ಹಾಕಿ, ಟೈಮರ್‌ನಲ್ಲಿ 90 ಮಿನಿಟ್ಸ್ ಸೆಟ್ ಮಾಡಿ ಪ್ರಾರಂಬಿಸಿದೆವು. 3 ಗಂಟೆಯಾದರೂ ವಾಷಿಂಗ್ ಮಿಷನ್ ನಿಲ್ಲುವ ಸೂಚನೆ ಕಾಣಲಿಲ್ಲ. ಕೊನೆಗೆ ಅದನ್ನು ನಿಲ್ಲಿಸಿ, ಯಾರ ನ್ನಾದರೂ ಕರೆಯೋಣ ವೆಂದರೆ ಲಾಡ್ಜ್ ಸಿಬ್ಬಂದಿ ಯಾರೂ ಇಲ್ಲ (ಭಾನುವಾರ ಆದ್ದರಿಂದ). ಬಟ್ಟೆ ವಾಷಿಂಗ್ ಮಿಷನ್‌ನಲ್ಲೇ ಉಳಿಯಿತು. ಈ ಮಧ್ಯದಲ್ಲಿ, ಅಲ್ಲಿದ್ದ electric stove ಅತ್ಯಂತ ಇತ್ತೀಚಿನ ನಮೂನೆಯ ದಾಗಿತ್ತು. ಅದನ್ನು ಹೇಗೆ ಪ್ರಾರಂಭಿಸಬೇಕು ಎಂದು ಅರಿಯಲು ನಮಗೆ ಗಂಟೆ ಬೇಕಾಯಿತು (trail and error ಮಾಡಿ). ಕೊನೆಗೂ ನಮ್ಮ ದೇಶಿಯ ಅಡುಗೆ ರೆಡಿಯಾಗಿ, ಊಟ ಬಿಟ್ಟು ಒಂದು ವಾರವಾದವರಂತೆ ಹೊಟ್ಟೆ ತುಂಬಾ ತಿಂದೆವು.

ನಮಗೆ ಸಮಾಧಾನದ ತಂದ ವಿಷಯವೇನೆಂದರೆ, ನಮ್ಮ ಸ್ಯೂಟ್ , ಬೀಚ್ ಮುಂದೆ ಇತ್ತು. ಶುಭ್ರವಾದ ನೀರು, ಬೆಳ್ಳಗಿನ ಮರಳು, ದೂರದಲ್ಲಿ ಎರಡು ದೊಡ್ಡ ಬೆಟ್ಟಗಳ ಮಧ್ಯೆ ಸಮುದ್ರ ಇದ್ದ ದೃಶ್ಯ (ಹೊಟ್ಟೆ ತುಂಬಿದ ಹೊತ್ತಿನಲ್ಲಿ) ನೋಡಲು ನಯನ ಮನೋಹರವಾಗಿ ಮಧ್ಯಾಹ್ನ ನಡೆದ ಮರೆತೆವು. ರಾತ್ರಿ 9 ಗಂಟೆಯವರೆಗೂ ಬೀಚ್‌ ನಲ್ಲಿ ಅಲೆದು, ನಾಳೆ great barrier reefನೋಡಲು ಬೆಳಗ್ಗೆ ಬೇಗ ರೆಡಿಯಾಗ ಬೇಕಿದ್ದರಿಂದ, ಸ್ಯೂಟ್‌ಗೆ ಬಂದು ಮಲಗಿದೆವು. ಹೊರದೇಶಗಳಲ್ಲಿ ಉಳಿಯುವ ಪರಿಸ್ಥಿತಿ ಬಂದಾಗ, ಫೈವ್‌ಸ್ಟಾರ್ ಹೋಟೆಲ್‌ಗಳಲ್ಲಿ ಉಳಿದು ಕೊಳ್ಳಬೇಕೆಂದಿನಿಲ್ಲ. ಅಂತಹ ಹೋಟೆಲ್‌ಗಳಲ್ಲಿ ಬಾಡಿಗೆಯೂ ಜಾಸ್ತಿ. ಆದರ ಬದಲು ಸರ್ವಿಸ್ ಅಪಾರ್ಟ್‌ ಮೆಂಟ್‌ನಲ್ಲಿ ಉಳಿದುಕೊಳ್ಳುವುದರಿಂದ ಹೆಚ್ಚಿನ ಅನುಕೂಲಗಳನ್ನು ಪಡೆದು ಹಣವನ್ನು ಉಳಿಸಬಹುದು.

ಹಾಗಾಗಿ CAIRNS ನಲ್ಲಿ ಇರುವಂತಹ ಸರ್ವಿಸ್ ಅಪಾರ್ಟ್‌ಮೆಂಟ್‌ಗಳನ್ನು ಗೂಗಲ್‌ನಲ್ಲಿ ಹುಡುಕಿದಾಗ, ನಮಗೆ ‘”Narth Cave Water front suites, beach ನ ಹತ್ತಿರ ಇದೆಯೆಂದು ತಿಳಿದು ಆನ್‌ಲೈನ್ ಬುಕ್ ಮಾಡಿದೆವು. ಬುಕ್ ಮಾಡಿದಾಗ, ಸೀಸನ್‌ನಲ್ಲಿ AUD 150.00 ಪ್ರತಿ ದಿವಸದ ಬಾಡಿಗೆಯಾಗಿತ್ತು. ನಾವು ಹೋಗಿದ್ದ ಸಮಯ ಚಳಿಗಾಲದ ಪ್ರಾರಂಭ ವಷ್ಟೆ. ಆದ್ದರಿಂದು ಇದು ಅವರಿಗೆ OFF Season ಅಲ್ಲಿ ಪ್ರತ್ಯಕ್ಷ ವಿಚಾರಿಸಿದಾಗ, ಸೀಸನ್‌ನಲ್ಲಿ AUD -300ರೂ. ಪ್ರತಿ ದಿವಸಕ್ಕೆ ಹೋಗುವುದೆಂದು ಗೊತ್ತಾಯಿತು. ಇದರ ವೆಬ್‌ ಸೈಟ್ : www.northcove.com.au. land line No :07 40316100.ಅಡುಗೆ ಮಾಡಿಕೊಳ್ಳಲು ಬೇಕಾದ ಸಲಕರಣೆಗಳನ್ನು ಒದಗಿಸಿರುತ್ತಾರೆ. ಉದಾಃ ಪ್ಲೇಟ್, ಸ್ಪೂನ್ಸ್, ತವಾ, ಚಾಕು ಮತ್ತು ಪಾತ್ರೆಗಳು ಡಿಶ್ ವಾಷರ್ ಅಲ್ಲದೇ ಐರನ್ ಬಾಕ್ಸ್ ಇರುತ್ತೆ ಬೆಳಗ್ಗೆ ಮಾಡಿದ ಆಹಾರವನ್ನು ತಂಗಲು ಪೆಟ್ಟಿಗೆಯಲ್ಲಿ ಇಟ್ಟು ರಾತ್ರಿ ಓವನ್‌ ನಲ್ಲಿ ಬಿಸಿ ಮಾಡಿಕೊಳ್ಳಬಹುದು.

ಮರುದಿನ ಬೆಳಗ್ಗೆ ಅವರಲ್ಲಿ ವಾಷಿಂಗ್ ಮಿಷನ್‌ನ ಕಥೆಯನ್ನು ಹೇಳಿದಾಗ, ನೀವು ಈ ದಿನ ಸೈಟ್ ಸೀಯಿಂಗ್ ಮುಗಿಸಿ ಬರುವ ವೇಳೆಗೆ ನಿಮ್ಮ ಬಟ್ಟೆಗಳು ವಾಶ್ ಆಗಿ ರೆಡಿ ಆಗಿರುತ್ತವೆ ಹೇಳಿದರು. ಅದರಂತೆ ನಾವು ರಾತ್ರಿ ಬಂದಾಗ, ಬಟ್ಟೆ ಒಗೆದು, ಒಣಗಿಸಿ, ಮಡಚಿ ಇಟ್ಟಿದ್ದರು. ಇದು ಅಲ್ಲಿ ನಾನು ಕಂಡ ಸೇವೆಯ ಪರಿ.

Tags

Related Articles

Leave a Reply

Your email address will not be published. Required fields are marked *

Language
Close