ವಿದ್ಯುತ್ ರಿಪೇರಿ : ಲೈನ್‌ಮನ್ ಸಾವು

Posted In : ತುಮಕೂರು, ರಾಜ್ಯ

ತಿಪಟೂರು: ವಿದ್ಯುತ್ ಲೈನ್ ಸರಿಪಡಿಸಲು ಹೋಗಿ ಲೈನ್‌ಮನ್ ಮೃತಪಟ್ಟಿರುವ ಘಟನೆ ಹೊನ್ನವಳ್ಳಿ ಹೋಬಳಿ ಕಲ್ಕೆರೆ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿದೆ.

ತಾಲೂಕಿನ ಗೆದ್ಲೆಹಳ್ಳಿ ಗ್ರಾಮದ 25 ವರ್ಷದ ಶಶಿ ಎಂಬುತಾ ಮೃತಪಟ್ಟ ದುರ್ದೈವಿ. ಕಲ್ಕೆರೆ ಗ್ರಾಮದಲ್ಲಿ ಕಳೆದ ದಿನ ವಿದ್ಯುತ್ ವ್ಯತ್ಯಾಸ ಉಂಟಾಗಿದ್ದರಿಂದ ವಿದ್ಯುತ್‌ಲೈನ್ ಜಂಪ್ ಸರಿಪಡಿಸಲೆಂದು ಶಶಿ ಕಂಬ ಹತ್ತಿ ಸರಿಪಡಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ. ಲೈನ್‌ಮನ್ ಶಶಿ ಕೆಲ ತಿಂಗಳುಗಳ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದರು.

ಒಟ್ಟಾರೆ ಈ ಪ್ರಕರಣ ತಾಂತ್ರಿಕ ದೋಷದಿಂದ ಸಂಭವಿಸಿದೆಂದು ಹೇಳಲಾಗುತ್ತಿದ್ದು, ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿದಲ್ಲಿ ಸತ್ಯಾಂಶ ಹೊರಬರಲಿದೆ ಎಂದು ಬೆಸ್ಕಾಂ ನೌಕರರ ಸಂಘ ಅಭಿಪ್ರಾಯಪಟ್ಟಿದೆ. ಪ್ರಕರಣವನ್ನು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

twenty + six =

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

 

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

Back To Top