ವ್ಯವಸ್ಥಿತ ಅಪರಾಧ ಎಲ್ಲೆೆಡೆ ಆಗುತ್ತಿದೆ: ಸುಪ್ರೀಂ ಕೋರ್ಟ್

Posted In : ದೇಶ

ದೆಹಲಿ: ವ್ಯವಸ್ಥಿತ ಅಪರಾಧಗಳು ಯಾವುದೋ ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಈ ನಿಟ್ಟಿನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಕೋರ್ಟ್‌ಗಳು ರಾಜ್ಯದ ಹೊರಗೆ ಸಿದ್ಧಪಡಿಸಿರುವ ಚಾರ್ಜ್‌ಶೀಟ್‌ಗಳನು ಮನ್ನಿಸಬಹುದಾಗಿದೆ ಎಂದ ಸುಪ್ರಿo ಮಹಾರಾಷ್ಟ್ರ ವ್ಯವಸ್ಥಿತ ಅಪರಾಧ ತಡೆ ಕಾಯ್ದೆ(ಎಂಸಿಓಸಿಏ) ಕಾಯ್ದೆಯನ್ನು ದೆಹಲಿಯಲ್ಲೂ ಕಾರ್ಯರೂಪಕ್ಕೆ ತರಲು ಅನುಮತಿ ನೀಡಿದೆ.

ಹೈ ಕೋರ್ಟ್ ಆಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ದೆಹಲಿ ಸರಕಾರಕ್ಕೆ ಈ ವಿಚಾರವಾಗಿ ನ್ಯಾಯಮೂರ್ತಿ ಎಸ್ ಎ ಬಾಬ್ಡೆ ಹಾಗೂ ಎಲ್ ನಾಗೇಶ್ವರ ರಾವ್ ಇದ್ದ ಪೀಠ ಸೂಚಿಸಿದೆ.

ಎಂಸಿಓಸಿಎ ಅಡಿಯಲ್ಲಿ ಬಂಧಿಸಲಾಗಿದ್ದ ಉತ್ತರ ಪ್ರದೇಶ ಮೂಲದ ಬ್ರಿಜೇಶ್ ಸಿಂಗ್ ಎಂಬ ಅಪರಾಧಿಯನ್ನು ಬಿಡುಗಡೆ ಮಾಡುವ ಸ್ಥಳೀಯ ನ್ಯಾಯಾಲಯವೊಂದರ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ವ್ಯವಸ್ಥಿತ ಅಪರಾಧದ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆ ದೆಹಲಿಯ ಹೊರಗೆ ಆಗಿರುವುದು ಚರ್ಚೆಗೆ ಗ್ರಾಸವಾಗಿತ್ತು.

‘‘ಸುಪಾರಿ ಕೊಲೆ, ಸುಲಿಗೆ, ಸ್ಮಗ್ಲಿoಗ್, ಮಾದಕ ದ್ರವ್ಯಗಳ ಕಳ್ಳಸಾಗಾಟ, ಹಣಕ್ಕಾಗಿ ಅಪಹರಣದಂಥ ಪ್ರಕರಣಗಳು ಹೆಚ್ಚಿರುವ ಕಾರಣ ಕಠಿಣ ಕಾನೂನಿನ ತುರ್ತು ಅಗತ್ಯವಿದೆ. ವ್ಯವಸ್ಥಿತ ಅಪರಾಧಿಗಳು ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದು ಅಫೀಮು ಪದಾರ್ಥಗಳನ್ನು ರಾಷ್ಟ್ರೀಯ ಗಡಿಗಳಾಚೆಗೂ ಪಸರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಾರಿಗೆ ತರಲಾದ ಎಂಸಿಓಸಿಎ ಕಾಯ್ದೆಯ ಆಶಯಗಳನ್ನು ಎಲ್ಲೆಡೆ ವಿಸ್ತರಿಸಲು ಅವಕಾಶ ಸೃಷ್ಟಿಸಬೇಕು’’ ಎಂದು ಪೀಠ ತನ್ನ 34 ಪುಟಗಳ ಆದೇಶದಲ್ಲಿ ತಿಳಿಸಿದೆ.

ಮಹಾರಾಷ್ಟ್ರ ಶಾಸನ ಸಭೆ 1999ರಲ್ಲಿ ಎಂಸಿಓಸಿಎ ಕಾಯ್ದೆಯನ್ನು ಜಾರಿಗೆ ತಂದಿತ್ತು.

 

 

 

Leave a Reply

Your email address will not be published. Required fields are marked *

4 × 5 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

 

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

Back To Top