ಸಿಕ್ಕಿಬಿದ್ದವರು ನನ್ನ ಆಪ್ತರಲ್ಲ

Posted In : ಕೊಪ್ಪಳ, ರಾಜ್ಯ

ಕೊಪ್ಪಳ: ಆದಾಯ ತೆರಿಗೆ ದಾಳಿ ನಡೆಸಿದ್ದು ಕೇಂದ್ರ ಸರಕಾರ. ಸಿಕ್ಕಿಬಿದ್ದವರು ಸರಕಾರಿ ನೌಕರರು. ಅವರು ನನಗೆ ಹೇಗೆ ಆಪ್ತರಾಗುತ್ತಾರೆ? ಅವರಿಗೂ ನನಗೂ ಸಂಬಂಧವೇ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಯಚೂರಿನಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಕೊಪ್ಪಳ ಹೊರವಲಯದ ಬಸಾಪುರದಲ್ಲಿರುವ ಖಾಸಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿ, ಕಳಂಕಿತ ಅಧಿಕಾರಿಗಳಿಗೂ ನನಗೂ ಸಂಬಂಧವಿಲ್ಲ. ಅವರು ಸರಕಾರಿ ನೌಕರರಷ್ಟೇ ಎಂದು ಸ್ಪಷ್ಟಪಡಿಸಿದರು. ನನ್ನ ಆಪ್ತರಾದವರು ಎಂದು ನಿಮಗೆ ಯಾರು ಹೇಳಿದ್ದು? ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ, ಸುಮ್ಮನೇ ಗಾಳಿ ಸುದ್ದಿ ಹರಡಬಾರದು. ಕೇಂದ್ರದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರು ನಮಗೆ ಮಾಹಿತಿ ಅಥವಾ ವರದಿ ಕೊಡುವುದಿಲ್ಲ. ಅವರೇನು ಕ್ರಮ ಕೈಗೊಳ್ಳುತ್ತಾರೋ ಕೈಗೊಳ್ಳಲಿ ಬಿಡಿ ಎಂದರು.

Leave a Reply

Your email address will not be published. Required fields are marked *

5 + 3 =

Wednesday, 26.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ -ಋತು, ಚೈತ್ರ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ನಿತ್ಯನಕ್ಷತ್ರ: ಅಶ್ವಿನಿ ಯೋಗ: ಪ್ರೀತಿ, ಕರಣ: ಚತುಷ್ಫಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 26.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ -ಋತು, ಚೈತ್ರ ಮಾಸ, ಕೃಷ್ಣಪಕ್ಷ, ಅಮವಾಸ್ಯೆ, ನಿತ್ಯನಕ್ಷತ್ರ: ಅಶ್ವಿನಿ ಯೋಗ: ಪ್ರೀತಿ, ಕರಣ: ಚತುಷ್ಫಾನ್

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top