lakshmi-electricals

ಸೋಂಕು ಪೀಡಿತ ಮಗುವನ್ನು ದತ್ತು ಪಡೆದ ವಿದೇಶಿ ದಂಪತಿ

Posted In : ರಾಜ್ಯ, ಹಾಸನ

ಹಾಸನ: ಅಮೆರಿಕಾ ಮೂಲದ ದಂಪತಿಯೊಬ್ಬರು ಸೋಂಕಿನಿಂದ ಬಳಲುತ್ತಿರುವ ಮಗುವನ್ನು ದತ್ತು ಪಡೆಯಲು ಮುಂದೆ ಬಂದಿದ್ದಾರೆ.

ತಂದೆ ತಾಯಿಯೇ ತಮ್ಮ ರೋಗ ವಿರುವ ಮಗುವನ್ನು ಸಕಲಾಗುವುದಿಲ್ಲ ಎಂದು ಹೇಳಿ  ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‌ನ ತೊಟ್ಟಿಲು ಸಂಸ್ಥೆಗೆ ಕೊಟ್ಟು ಹೋಗಿದ್ದರು. ನಂತರದಲ್ಲಿ ಈ ಮಗುವನ್ನು ಮುದ್ದಾಗಿ ಸಾಕಿದ್ದ ಅಧ್ಯಕ್ಷ ಡಾ. ಪಾಲಾಕ್ಷ ಅವರು ಮಗುವನ್ನು ವಿದೇಶಿ ದಂಪತಿಯ ಮಡಿಲಿಗೆ ನೀಡಿದ್ದಾರೆ. ತಂದೆ ತಾಯಿಗೂ ಬೇಡವಾದ ಈ ಮಗುವನ್ನು ಅಮೆರಿಕಾ ದಂಪತಿ ದತ್ತು ತೆಗೆದುಕೊಳ್ಳುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಕಳೆದ ಡಿಸೆಂಬರ್ ತಿಂಗಳಿಂದ ನ್ಯಾಯಾಲಯದ ಮೂಲಕ ಅಗತ್ಯವಾದ ದಾಖಲೆಗಳು ಸಿದ್ಧವಾದ ನಂತರ  ಈ ಒಂದೂವರೆ ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಹೆತ್ತವರಿಗೆ ಬೇಡವಾದ ಮಗು ಕೊನೆಗೂ ವಿದೇಶಕ್ಕೆ ಹೋಗುವ ಭಾಗ್ಯ ಪಡೆಯುವುದರ ಜೊತೆ ದತ್ತು ಪಡೆದ ಅಮ್ಮನ ಮಡಿಲು ಸೇರಿದ್ದಾಳೆ.

 ಅಮೆರಿಕಾದ ಡೇವಿಡ್ ಅಲೆನ್ ಲೈಕನ್ ಮತ್ತು ಇವರ ಪತ್ನಿ ಮೆಲಿಸಾ ಸ್ಪೂ ಲೈಕನ್ ದಂಪತಿಗಳು ಈ ಮಗುವಿತ್ತ ಅತ್ಮೀಯತೆಯ ವಾತ್ಸಲದ ದೃಷ್ಟಿ ಬೀರಿದ್ದಾರೆ ಇದರ ಫಲವಾಗಿ ನಾಳೆ ಮಗು ಅಮೆರಿಕಾ ವಿಮಾನ ಹತ್ತಲು ಸಿದ್ಧವಾಗಿದೆ.

Leave a Reply

Your email address will not be published. Required fields are marked *

15 + four =

 
Back To Top