ವಿಶ್ವವಾಣಿ

ಸ್ವಚ್ಛತೆಯೇ ನಿಜವಾದ ಸೇವೆ: ಮೋದಿ

ದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ದೇಶಾದ್ಯಂತ ಸ್ವಚ್ಛತಾ ಚಳವಳಿಯನ್ನು ಹಮ್ಮಿಕೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಸೆಪ್ಟಂಬರ್ 15ರಂದು ಸ್ವಚ್ಛತಾ ಹಿ ಸೇವಾ ಚಳವಳಿ(ಸ್ವಚ್ಛತೆಯೇ ನಿಜವಾದ ಸೇವೆ)ಗೆ ಚಾಲನೆ ನೀಡುವುದಾಗಿ ಅವರು ವಿಡಿಯೋ ಸಂದೇಶ ನೀಡಿದ್ದು, ಶನಿವಾರ ದೇಶದ ಎಲ್ಲ ನಾಗರೀಕರು ಭಾಗವಹಿಸುವಂತೆ ಕರೆ ನೀಡಿದ್ದಾರೆ.

ಸ್ವಚ್ಚ ಭಾರತ್ ಅಭಿಯಾನದಡಿಯಲ್ಲಿ ತಳಮಟ್ಟದಲ್ಲಿ ಕಾರ್ಯ ನಿರ್ವಹಿಸುವವರೊಂದಿಗೆ ಸಂವಾದ ನಡೆಸುವುದಾಗಿಯೂ ಅವರು ತಿಳಿಸಿದ್ದಾರೆ. ಅಕ್ಟೋಬರ್ 2ರಂದು ಗಾಂಧೀಜಿ ಅವರ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಅಂದಿಗೆ ಸ್ವಚ್ಛ ಭಾರತ್ ಅಭಿಯಾನ 4 ವರ್ಷಗಳನ್ನು ಪೂರ್ಣಗೊಳಿಸುತ್ತದೆ ಎಂದರು.