ವಿಶ್ವವಾಣಿ

ಹ್ಯಾಷ್‌ಲರ್ನ್: ಉಚಿತ, ಲೈವ್ ವಿಡಿಯೋ ತರಗತಿಗಳಿಗೆ ಚಾಲನೆ

ಪ್ರಶಸ್ತಿ ವಿಜೇತ ಶಿಕ್ಷಣ ಸಂಸ್ಥೆ ಹ್ಯಾಷ್‌ಲರ್ನ್, ಸ್ಪರ್ಧಾತ್ಮಕ ಪರೀಕ್ಷೆಯ ಉನ್ನತ ಗುಣಮಟ್ಟದ ತರಗತಿಯನ್ನು ಕೈಗೆಟಕುವ ದರದಲ್ಲಿ ನೀಡಲು ಮುಂದಾಗಿದೆ.  17ರಂದು, ನೀಟ್ ಪರೀಕ್ಷಾ ಅಭ್ಯರ್ಥಿಗಳಿಗೆ 2019ರ ಪರೀಕ್ಷೆ ಎದುರಿಸಲು ನೆರವಾಗುವಂತೆ ಉಚಿತ, ಲೈವ್ ವಿಡಿಯೋ ಕ್ಲಾಸ್‌ಗಳನ್ನು ಆರಂಭಿಸಲಿದೆ. ಹ್ಯಾಷ್‌ಲರ್ನ್ ಪ್ರತಿ ಪಠ್ಯದ ಹಂತದಲ್ಲೂ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿಕೊಂಡು ನಿಗದಿತ ಅವಧಿಯೊಳಗೆ ಸಂಪೂರ್ಣ ಪಠ್ಯವನ್ನು ಪೂರ್ಣಗೊಳಿಸುತ್ತದೆ. ಅಭ್ಯರ್ಥಿಗಳು ಈ ನೇರ ತರಗತಿಯಲ್ಲಿ ಪಾಲ್ಗೊಳ್ಳಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಒಂದು ವೇಳೆ ಅವರು ಲೈವ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ನಂತರದಲ್ಲಿ ಕೂಡ ಅದನ್ನು ಉಚಿತವಾಗಿ ನೋಡಬಹುದಾಗಿದೆ.

ಮೂರು ವರ್ಷಗಳಲ್ಲಿ, ಸಂಸ್ಥೆ ಭಾರತದ ಅತ್ಯಂತ ಕಡಿಮೆ ದರದ ತರಗತಿಗಳನ್ನು ಪರಿಚಯಿಸಿದೆ. ಕೇವಲ 40 ರೂ.ಗಳಿಗೆ,ಉತ್ತಮ ಗುಣಮಟ್ಟದ, ಗ್ಯಾರಂಟಿ ನೀಡುವ, ವೈಯಕ್ತಿಕ ತರಬೇತಿ, ಲೈವ್ ತರಗತಿಗಳು ಸೇರಿದಂತೆ ತರಬೇತಿ ಯೋಜನೆಗಳನ್ನು ಜಾರಿಗೆ ತಂದಿದೆ. ಇತ್ತೀಚೆಗೆ, ಇದೇ ಮೊದಲ ಬಾರಿಗೆ ಬಳಕೆದಾರರಿಗೆ ವೈಯಕ್ತಿಕವಾಗಿ ಪಠ್ಯಗಳಿಗೆ ಅನುಸಾರವಾಗಿ ಪುಸ್ತಕಗಳನ್ನು ಭಾರತದ ಪ್ರಮುಖ ಪ್ರಕಾಶಕರಿಂದ ಪಡೆಯಲು ಅವಕಾಶ ಕಲ್ಪಿಸಿದೆ. ಹ್ಯಾಷ್ ಲರ್ನ್ ಒಟ್ಟಾರೆಯಾಗಿ 5 ಮಿಲಿಯನ್ ನಿಮಿಷಗಳ ತರಗತಿಗಳನ್ನು ನಡೆಸಿದ್ದು, ಅಭ್ಯರ್ಥಿಗಳು ಸಾವಿರಾರು  ಹಾಗೂ ಪಠ್ಯಕ್ರಮಗಳ ಯೋಜನೆಗಳನ್ನು(ಪ್ಯಾಕೇಜ್) ಖರೀದಿಸಿದ್ದಾರೆ.

ದುಬಾರಿ ಪರೀಕ್ಞಾ ತರಬೇತಿ ಉದ್ಯಮವನ್ನು ಸಮಗ್ರವಾಗಿ, ತಂತ್ರಜ್ಞಾನ ಆಧಾರಿತ ಪ್ರೋಗ್ರಾಮ್ ಮಾದರಿಯಲ್ಲಿ, ಕೈಗೆಟಕುವ ದರದಲ್ಲಿ ಪರೀಕ್ಷಾಕಾಂಕ್ಷಿಗಳಿಗೆ ತಲುಪಿಸುವ ಸಂಸ್ಥೆಯ ಉದ್ದೇಶದ ಮಹತ್ವದ ಹೆಜ್ಜೆಗಳಲ್ಲಿ ಹ್ಯಾಷ್‌ಲರ್ನ್ ಕೋರ್ಸ್‌ಗಳ ಆರಂಭವೂ ಒಂದು. ಇದರಲ್ಲಿ ನೋಂದಣಿಯಾದವರಿಗೆ ಸಂಪೂರ್ಣ ಪಠ್ಯಕ್ರಮವನ್ನು ಮುಂಚಿತವಾಗಿಯೇ ಪರಿಶೀಲಿಸಲು, ಶಿಕ್ಷಕರ ಹಿನ್ನೆಲೆ ತಿಳಿಯಲು ಅವಕಾಶವಿರುತ್ತದೆ. ನಂತರ, ತಮ್ಮ ಅನುಕೂಲದ ಅವಧಿಯಲ್ಲಿ ದಿನನಿತ್ಯದ ಲೈವ್ ವಿಡಿಯೋ ತರಗತಿಗಳಿಗೆ ಹಾಜರಾಗಬಹುದಾಗಿದೆ. ನೋಂದಾಯಿತ ಆಕಾಂಕ್ಷಿಗಳು, ಪಾಸ್‌ಪೋರ್ಟ್ ಪರಿಷ್ಕರಣೆ, ತರಗತಿ ಮುಗಿದ  ಶಿಕ್ಷಕರು ನೀಡುವ ವಿಶೇಷ ತರಬೇತಿ ಯೋಜನೆಗಳು, ಪರೀಕ್ಷೆಗೆ ಮುಂಚಿನ ಅಣಕು ಕಿರುಪರೀಕ್ಷೆಗಳು, ರಿಯಾಯ್ತಿ ದರದ ತರಬೇತಿ ಯೋಜನೆಗಳು, ಪ್ರಕಾಶಕರ ವಿಶೇಷ ಕೊಡುಗೆಗಳಿಗೆ ಹಣ ಪಾವತಿಸಬೇಕಾಗುತ್ತದೆ. ಪ್ರತಿ ವರ್ಷ ಪರೀಕ್ಷೆಗೆ ತಯಾರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ 499 ರೂ. ಆರಂಭಿಕ ದರದಲ್ಲಿ ಪಾಸ್‌ಪೋರ್ಟ್ ಅನ್ನು ನೀಡಲಾಗುತ್ತದೆ. ಜೆಇಇ ಮೇನ್ ಹಾಗೂ ನೀಟ್ ಹೊರತುಪಡಿಸಿ, ಸಂಸ್ಥೆ ಬ್ಯಾಂಕಿಂಗ್ ಹಾಗೂ ಸಿಎಟಿ ಪರೀಕ್ಷೆಗಳ ಕೋರ್ಸ್‌ಗಳಿಗೂ ಪೂರ್ವ ನೋಂದಾಯಿತ ತರಗತಿಗಳನ್ನು ಆರಂಭಿಸಿದೆ.