About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಆತ್ಮಾಹುತಿ ಬಾಂಬ್ ದಾಳಿ: 10 ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಆತ್ಮಾಹುತಿ ಬಾಂಬ್‌ ದಾಳಿಗೆ 10 ಮಂದಿ ಮೃತಪಟ್ಟಿದ್ದು ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಭಾನುವಾರ ಸ್ಥಳೀಯ ಕಾಲಮಾನ ಸಂಜೆ 4.30ರ ಸುಮಾರಿಗೆ ಕಾಬೂಲ್‌ನ ಗ್ರಾಮೀಣ ಪುರ್ನವಸತಿ ಮತ್ತು ಅಭಿವೃದ್ಧಿ ಸಚಿವಾಲಯದ ಗೇಟ್‌ ಬಳಿ ಆತ್ಮಾಹುತಿ ಬಾಂಬ್ ದಾಳಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮೀಣ ಪುರ್ನವಸತಿ ಮತ್ತು ಅಭಿವೃದ್ಧಿ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವೇಳೆಯೇ ಗೇಟ್ ಬಳಿ ಬಾಂಬ್ ದಾಳಿಯಾಗಿದೆ ಎಂದು ಸಚಿವಾಲಯದ ವಕ್ತಾರ ಫರಿದೂನ್ ಆಝಾನ್ದ್ ಹೇಳಿದ್ದಾರೆ.

ಈ ತಿಂಗಳಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಜೂನ್ 17ರಂದು ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 17 ಮಂದಿ ಮೃತಪಟ್ಟು, 40 ಮಂದಿ ಗಾಯಗೊಂಡಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close