ತಮಿಳುನಾಡು ಶಾಸಕರ  ಶೇ.100 ಸಂಬಳ ಹೆಚ್ಚಳ

Posted In : ದೇಶ

ಚೆನ್ನೈ: ತಮಿಳುನಾಡಿನ ರೈತರು ಸಾಲಮನ್ನಾ, ಬೆಳೆ ಪರಿಹಾರಕ್ಕಾಗಿ ಬೀದಿಗಿಳಿದು ಆತ್ಮಹತ್ಯೆಗೆ ಶರಣಾದವರ ಅಸ್ಥಿಗಳೊಂದಿಗೆ, ಅರೆನಗ್ನರಾಗಿ, ಮೂತ್ರ ಕುಡಿದು, ತರಹೇವಾರಿ ಪ್ರತಿಭಟನೆ ನಡೆಸಿದ್ದು ಆದರೆ ಆ ರಾಜ್ಯದ ಎಂಎಲ್ಎಗಳು ಮಾತ್ರ ತಮ್ಮ ಸಂಬಳವನ್ನು ಶೇ.100ರಷ್ಟು ಹೆಚ್ಚಿಸಿಕೊಂಡಿದ್ದಾರೆ. ತಮಿಳುನಾಡು ಜನಪ್ರತಿನಿಧಿಗಳ ಸಂಬಳ 55 ಸಾವಿರ ರುಪಾಯಿ ಇದೆ.
ಈಗ ಸಂಬಳ 1. 10 ಲಕ್ಷ ರುಪಾಯಿ ಆಗಿದೆ. ಜೊತೆಗೆ ಪಿಂಚಣಿಯಲ್ಲೂ ಭಾರಿ ಹೆಚ್ಚಳ ಮಾಡಲಾಗಿದೆ. ಮಾಜಿ ಶಾಸಕರ ಪಿಂಚಣಿ 12 ಸಾವಿರ ರುಪಾಯಿಯಿಂದ 20 ಸಾವಿರಕ್ಕೆ ಹೆಚ್ಚಿದೆ. ಎಲ್ಲಾ ಶಾಸಕರ ಪ್ರದೇಶ ಅಭಿವೃದ್ಧಿ ಯೊಜನೆಗಳ ನಿಧಿಯನ್ನು 2 ಕೊಟಿ ರುಪಾಯಿಂದ 2.6 ಕೊಟಿ ರೂ.ಗೆ ಹೆಚ್ಚಿಸಲಾಗಿದೆ. ಶಾಸಕರ ವೇತನ ಹೆಚ್ಚಳ ಕುರಿತು ತಮಿಳುನಾಡು ಸಿಎಂ ಪಳನಿಸ್ವಾಮಿ ಇಂದು ಸದನದಲ್ಲಿ ಪ್ರಕಟಣೆ ನೀಡಿದ್ದಾರೆ.
ತಮಿಳುನಾಡು ಸರಕಾರದ ಈ ನಿರ್ಧಾರ ರಾಜ್ಯದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದ್ದು. 40 ಸಾವಿರ  ಕೋಟಿ ರು. ಪರಿಹಾರ ಪ್ಯಾಕೇಜ್ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರಕಾರ  ಜನಪ್ರತಿನಿಧಿಗಳ  ಸಂಬಳ ಹೆಚ್ಚಳ ಮಾಡಿ, ರೈತರನ್ನು ನಿರ್ಲಕ್ಷ್ಯಿಸಿದೆ ಎಂದು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

eleven − 7 =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top