About Us Advertise with us Be a Reporter E-Paper

ಪ್ರಚಲಿತವಿದೇಶ

ಪಾಕ್ ಹಣೆಬರಹ ಬದಲಿಸಲು ಬರುತ್ತಿದ್ದೇನೆ: ನವಾಜ್

ಇಸ್ಲಾಮಾಬಾದ್: ಪಾಕಿಸ್ತಾನದ ಹಣೆಬರಹ ಬದಲಿಸುವ ಅಗತ್ಯವಿದೆ. ಅದಕ್ಕಾಗಿ ವಾಪಸ್ ಬರುತ್ತಿದ್ದೇನೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ನವಾಜ್ ಷರೀಫ್ ಮತ್ತು ಅವರ ಮಗಳು ಮರಿಯಮ್​ ನವಾಜ್ ಲಾಹೋರ್​ಗೆ ಆಗಮಿಸುತ್ತಿದ್ದಾರೆ. ಮಾರ್ಗಮಧ್ಯೆ ಅಬುಧಾಬಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಗೊತ್ತಿದೆ. ನನಗೆ 10 ವರ್ಷ ಮತ್ತು ಮಗಳಿಗೆ 7 ವರ್ಷ ಜೈಲುಶಿಕ್ಷೆಯಾಗಿದೆ. . ಪಾಕಿಸ್ತಾನದ ಭವಿಷ್ಯದ ಪೀಳಿಗೆಗಾಗಿ ಬರುತ್ತಿದ್ದೇನೆ, ದೇಶದ ಹಣೆಬರಹ ಬದಲಾಗಬೇಕಾದ ಅಗತ್ಯವಿದೆ. ನಾವು ಅದನ್ನ ನಾವು ಮಾಡಬೇಕಾಗಿದೆ. ಹೀಗಾಗಿ, ನಾವು ವಾಪಸ್ ಆಗುತ್ತಿದ್ದೇವೆ. ಸಮಸ್ಯೆಗಳನ್ನ ಎದುರಿಸಲು ಸಿದ್ಧವಾಗಬೇಕಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ, ನವಾಜ್ ಷರೀಫ್ ಬೆಂಬಲಕ್ಕೆ ಲಾಹೋರ್​ನಲ್ಲಿ ಪಿಎಂಎಲ್​(ಎನ್) ಪಕ್ಷದಿಮದ ಬೃಹತ್ ರ್ಯಾಲಿ ಆಯೋಜಿಸಲಾಗಿದೆ.

ನವಾಜ್​ ಷರೀಫ್​ ಹಾಗೂ ಮರಿಯಮ್​ ನವಾಜ್​ ಲಂಡನ್ನಿಂದ ಪಾಕಿಸ್ತಾನಕ್ಕೆ ಬರುತ್ತಿದ್ದಂತಯೇ ಅವರನ್ನು ಬಂಧಿಸಲು ಪಾಕಿಸ್ತಾನದ ಪೊಲೀಸರು ಸಜ್ಜಾಗಿದ್ದಾರೆ. ಇಬ್ಬರೂ ಬರುತ್ತಿದ್ದಂತೆ, ವಿಮಾನ ನಿಲ್ದಾಣದಲ್ಲೇ ಅವರನ್ನು ಬಂಧಿಸಲು ತಯಾರಿ ನಡೆಸಲಾಗಿದೆ. ಅವರನ್ನು ಬಂಧಿಸಿ ಹೆಲಿಕಾಪ್ಟರ್ ಮೂಲಕ ರಾವಲ್ಪಿಂಡಿಯ ಆದಿಯಾಲಾ ಜೈಲಿಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close