About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

8.604 ಲೀಟರ್ ಬಿಯರ್, 231 ಲೀ. ಬ್ರಿಜರ್ ಮದ್ಯ ನಾಶ

ಚಾಮರಾಜನಗರ: ಕರ್ನಾಟಕ ಪಾನೀಯ ನಿಗಮದ ಆವರಣದಲ್ಲಿ ಅವಧಿ ಮೀರಿದ ಮಾನವ ಸೇವನೆಗೆ ಯೋಗ್ಯವಲ್ಲದ ಸುಮಾರು 15.08 ಲಕ್ಷರು. ಮೌಲ್ಯದ ಬಿಯರ್, ಬ್ರಿಜರ್ ಮದ್ಯವನ್ನು ನಾಶಪಡಿಸಲಾಯಿತು.

ನಗರದ ಸೋಮವಾರಪೇಟೆಬಳಿ ಇರುವ ಕರ್ನಾಟಕ ಪಾನೀಯ ನಿಗಮದ ಆವರಣದಲ್ಲಿ ಅಬಕಾರಿ ಇಲಾಖೆಯ ಉಪಆಯುಕ್ತ ನಾಗೇಶ್ ನಿರ್ದೇಶನದ ಮೇರೆಗೆ ಅಬಕಾರಿ ಅಧೀಕ್ಷಕ ಗಂಗಾಧರ್ ಮುದ್ದಣ್ಣನವರ್ ನೇತೃತ್ವದಲ್ಲಿ 8.604 ಲೀಟರ್ ಬಿಯರ್ ಹಾಗು 231 ಲೀಟರ್ ಬ್ರಿಜರ್ ಮದ್ಯವನ್ನು ನಾಶಪಡಿಸಲಾಯಿತು.

ಅಬಕಾರಿ ನಿರೀಕ್ಷಕ ಗೀತಾ, ಕರ್ನಾಟಕ ಪಾನೀಯ ನಿಗಮದ ಡೀಪೋ ವ್ಯವಸ್ಥಾಪಕ ಆರ್.ಬಿ. ಬಸವರಾಜು, ಲಿಂಗಪ್ಪ, ಲೋಕೇಶ್, ಶಿರಸ್ತೇದಾರ್ ಮಹದೇವಶೆಟ್ಟಿ ಇದ್ದರು.

Tags

Related Articles

Leave a Reply

Your email address will not be published. Required fields are marked *

Language
Close