About Us Advertise with us Be a Reporter E-Paper

Uncategorizedಅಂಕಣಗಳು

175 ವರ್ಷಗಳ ಕನ್ನಡ ಪತ್ರಿಕೋದ್ಯಮದ ನೆನಪಿನಂಗಳ

ಅವಲೋಕನ: ಟಿ.ದೇವಿದಾಸ್    

ಈಚೆಗೆ ಕೆಲವು ಪತ್ರಿಕೆಗಳಲ್ಲಿ ಭಾವಚಿತ್ರಗಳೂ ಬರುತ್ತಿವೆ. ನಮ್ಮ ದೇಶದ ಪ್ರಸಿದ್ಧ ಇಂಗ್ಲಿಷ್ ಪತ್ರಿಕೆಗಳಲ್ಲಿ ಬರುವ ಭಾವಚಿತ್ರಗಳೇ ತೆನಾಲಿ ರಾಮಕೃಷ್ಣನ ಚಿತ್ರಗಳಂತೆಯೂ, ಪಂಚ್ ಮೊದಲಾದ ಇಂಗ್ಲಿಷ್ ಹಾಸ್ಯ ಪತ್ರಿಕೆಗಳಲ್ಲಿರುವ  ಪ್ರತಿಯಾದ ವಿಕಾರಗಳಂತೆಯೂ ಇರುವಲ್ಲಿ, ಕನ್ನಡ ಪತ್ರಿಕೆಗಳ ಚಿತ್ರ ವೈಭವವನ್ನು ವರ್ಣನೆ ಮಾಡುವುದು ಅನಾವಶ್ಯಕ. ಒಂದು ವೇಳೆ ಈ ಚಿತ್ರಗಳನ್ನು ನೋಡಿದರೆ ಚಿತ್ರಿತರಾದವರಿಗೂ ಅವರ ಬಂಧುಮಿತ್ರರಿಗೂ ನಗು ಬಂದೀತೋ ಅಳು ಬಂದೀತೋ ಊಹಿಸುವುದು ಕಷ್ಟ. ಚಿತ್ರಗಳನ್ನು ಅಚ್ಚು ಮಾಡುವುದು ವೆಚ್ಚದ ಕೆಲಸ. ನುಣುಪಿನ ಕಾಗದ, ಒಳ್ಳೆಯ ಮಸಿ, ಚೊಕ್ಕಟವಾದ ಪಡಿಯಚ್ಚು , ನಯವಾದ ಯಂತ್ರ, ನಾಜೂಕಾದ ಕೈಗಾರಿಕೆ – ಇವುಗಳಲ್ಲಿ ಯಾವುದಿಲ್ಲದಿದ್ದರೂ ಚಿತ್ರವು ಅಂದವಾಗುವುದಿಲ್ಲ. ಈಚೆಗೆ ಬೆಂಗಳೂರಿನ ಒಂದೆರಡು ಪತ್ರಿಕೆಗಳವರು  ಭಾವಚಿತ್ರಭರಿತಗಳಾದ ವಿಶೇಷ ಸಂಚಿಕೆಗಳು ಅಂದವಾಗಿವೆ!

ಶುದ್ಧ ತಮಾಷೆಯಂತೆ ಈ ಮಾತುಗಳು ಭಾಸವಾದರೂ ವಿಸ್ಮಯವೇನಲ್ಲ! 1928ರ ಜುಲೈ 31 ರಂದು ಬಾಗಲಕೋಟೆಯಲ್ಲಿ ಸಮಾವೇಶಗೊಂಡ ಅಖಿಲ ಕರ್ನಾಟಕ ಪತ್ರಕರ್ತರ ಪ್ರಥಮ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನದಿಂದ ಪತ್ರಿಕಾಭೀಷ್ಮ ಎಂದೇ ನಾಡಿನಲ್ಲಿ ಜನಮಾನ್ಯರಾದ ಡಿವಿಜಿಯವರು ಆಡಿದ ಭಾಷಣದ ಕೆಲ ಮಾತುಗಳಿವು.

ಕ್ಷಣಮಾತ್ರದಲ್ಲಿ ಆಗುವ ಮಾಹಿತಿಸ್ಫೋಟ ಯುಗದ ಇತ್ತೀಚಿನ ಕಾಲದಲ್ಲಿ ಈ ಮಾತುಗಳು ಸ್ಥಿತ್ಯಂತರವನ್ನು ಅಭಿವ್ಯಕ್ತಿಸುತ್ತದೆ. ಕೇವಲ 89 ವರ್ಷಗಳಲ್ಲಿ ಜಗತ್ತಿನ ಪತ್ರಿಕೋದ್ಯಮದೊಂದಿಗೆ ಕನ್ನಡ ಪತ್ರಿಕೋದ್ಯಮವೂ  ತಲುಪಬೇಕಾದ ಗಮ್ಯವನ್ನು ತಲುಪಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡದ ಪ್ರತಿ ಪತ್ರಿಕೆಯೂ ಕಾಲ-ಸನ್ನಿವೇಶಕ್ಕೆ ಹೊಂದಿಕೊಳ್ಳುತ್ತಾ ಜನಮನಕ್ಕೆ ಹತ್ತಿರವಾಗುವಂತೆ ಬದುಕುತ್ತಿವೆ. ಅಸಾಮಾನ್ಯ ಮಜಲುಗಳನ್ನು ದಾಟಿ ಮಾಧ್ಯಮಕ್ರಾಂತಿಗೆ ಮುನ್ನುಡಿಯನ್ನು ಬರೆದಿವೆ. ಇದೊಂದು ನಿರಂತರವಾದ ಪ್ರವಾಹದಂಥ ಪ್ರಕ್ರಿಯೆ. ನೀರು ಮಡುಗಟ್ಟಿ ಪಾಚಿ ಬೆಳೆಯುವ ಮಾತು ಹಾಗಿರಲಿ, ಪ್ರವಾಹದ  ವಿರುದ್ಧ ಈಜಬಲ್ಲ ಗಟ್ಟಿಕುಳಗಳು ಮಾತ್ರ ಬದುಕುವ ಮಹಾನದಿ ಇದೆಂದು ಪತ್ರಿಕೋದ್ಯಮದ ಈವರೆಗಿನ ಅನೇಕ ಪ್ರಯೋಗಗಳು ಅರಿವು ಮೂಡಿಸಿದೆ. ಈ ಪತ್ರಿಕೋದ್ಯಮದ ಇತಿಹಾಸವೇ ಸಂಘರ್ಷಮಯವಾದದ್ದು. ತನ್ನ  ಸ್ವಾತಂತ್ರ್ಯಕ್ಕಾಗಿನ ಹೋರಾಟಗಳೇ ಇವುಗಳ ಸಂಘರ್ಷಕ್ಕೆ ಕಾರಣವೆಂಬುದೂ  ಚರಿತ್ರೆಯನ್ನು ಸೇರುತ್ತಲೇ ಇರುವ ಸಂಗತಿಯಾಗಿದೆ. ಪರಿವರ್ತನೆ ಪತ್ರಿಕೋದ್ಯಮದ ಅಂತಃಸ್ಸತ್ತ್ವ.

ಡಿವಿಜಿಯವರು ಹೇಳುವ ಪತ್ರಿಕೆಯ ಚತುರಂಗಗಳಾದ 1. ವರದಿಗಳು (್ಕಛಿಟ್ಟಠಿಜ್ಞಿಜ ) 2. ಟೀಕು (ಇಟಞಞಛ್ಞಿಠಿ)  3. ಲೇಖನ ಶೈಲಿ  4. ಜ್ಞಾನ ಪ್ರಸಾರ  ಇವುಗಳಲ್ಲಿ ಯಾವ ಪತ್ರಿಕೆಗಳು ಪತ್ರಿಕಾ ಛಿಠಿಜ್ಚಿ ಗಳನ್ನು ಜತನದಿಂದ ಕಾಪಾಡಿಕೊಂಡು ಬರುತ್ತದೋ ಅವು ಸಮಕಾಲೀನ ಪ್ರಪಂಚದಲ್ಲಿ ಯಶಸ್ಸನ್ನು ಕಾಣುತ್ತದೆಂಬುದು ಕಣ್ಣ ಮುಂದಿರುವ ಸತ್ಯ. ಅಬಾಲವೃದ್ಧರಾದಿಯಾಗಿ ಓದಲು ಪ್ರೇರೇಪಿ  ಪತ್ರಿಕೆಗಳು ಸಮಕಾಲೀನ ಜಗತ್ತಿಗೆ, ಜನರ  ಮನೋಭಿಲಾಷೆಗೆ, ಸ್ಥಳೀಯತೆಗೆ ಗಹನತೆ ನೀಡುತ್ತಿರುತ್ತವೆ.

ಸುದ್ದಿಗಳು ಆಕರ್ಷಣೆ ಜತೆಗೆ ನಾವೀನ್ಯ ವಿನ್ಯಾಸಗಳು ಪತ್ರಿಕೆಗೆ ಕಾಲಕಾಲಕ್ಕೆ ಆಗುತ್ತಿರಬೇಕು. ಸೃಜನ, ಸೃಷ್ಟಿಶೀಲತೆ ಪ್ರದರ್ಶಿಸಬೇಕು. ಜನರಿಗೆ ಹೇಳುವುದನ್ನೇ, ಕೊಡುವುದನ್ನೇ ಹೊಸ ರೀತಿಯಲ್ಲಿ ಹೇಗೆ ಪ್ರಸ್ತುತ ಪಡಿಸಬಹುದು ಎಂಬುದನ್ನು ಸದಾ ಹಂಬಲಿಸಬೇಕು. ಏಕೆಂದರೆ ಪತ್ರಿಕೋದ್ಯಮ ಈಗ ಲಾಭಗಳಿಕೆಯ ಒಂದು ಸ್ಪರ್ಧಾತ್ಮಕ ಉದ್ಯಮ. ಪತ್ರಿಕಾವೃತ್ತಿ-ಪತ್ರಿಕೋದ್ಯೋಗವಾಗಿದ್ದ ಪತ್ರಿಕಾ ಕ್ಷೇತ್ರ ಪತ್ರಿಕೋದ್ಯಮವಾಗಿ ಬೆಳೆದದ್ದು ಎಂಬತ್ತರ ದಶಕದ ನಂತರ.

ಅಲ್ಲಿಯವರೆಗೆ ಅದೊಂದು ಉದ್ಯಮವಾಗಿ ಪರಿಗಣಿಸಲು  ತತ್ತ್ವಾದರ್ಶಗಳ ಅನುಮತಿ ನೀಡಿರಲಿಲ್ಲ. ಹೇಗೆ ಈಗ ಶಿಕ್ಷಣ ಒಂದು ಲಾಭ ಗಳಿಕೆಯ ಉದ್ಯಮ ಆಗುತ್ತಿದೆಯೋ ಹಾಗೆ ! ಯಾವಾಗ ಅವಸಾನದಲ್ಲಿ  ಮುಖನೆಟ್ಟಿದ್ದ ಬೆನೆಟ್ ಆ್ಯಂಡ್ ಕೋಲ್ ಮನ್ ಕಂಪೆನಿಯ ಸಾರಥ್ಯವನ್ನು ಸಮೀರ್ ಜೈನ್  ವಹಿಸಿಕೊಂಡರೋ(1986) ಅಲ್ಲಿಂದ ಭಾರತೀಯ ಪತ್ರಿಕೋದ್ಯಮದ ಒಟ್ಟೂ ಚಿತ್ರಣವೇ ಬದಲಾಯಿತು. ಉದಾರೀಕರಣ, ಖಾಸಗೀಕರಣಗಳ ಗೋಡೆಯಿಲ್ಲದ ಜಗತ್ತಿನಲ್ಲಿ ಜಾಹೀರಾತೆಂಬ ಚಿನ್ನದ ಮೊಟ್ಟೆ ಇಡುವ ಕೋಳಿಗೆ ಆಕರ್ಷಣೆಗೊಂಡು ಪತ್ರಿಕೋದ್ಯೋಗ ಪತ್ರಿಕೋದ್ಯಮವಾಗಿ ಬೆಳೆದದ್ದು ಕೇವಲ ಎರಡು-ಮೂರು ದಶಕಗಳ ಕ್ಷಿಪ್ರ ಬೆಳವಣಿಗೆ.  238 ವರ್ಷಗಳ ಭಾರತೀಯ ಪತ್ರಿಕೋದ್ಯಮ ಮತ್ತು ಸುಮಾರು 174 ವರ್ಷಗಳ ಕನ್ನಡ ಪತ್ರಿಕೋದ್ಯಮದಲ್ಲಿ ಇದು ಸಣ್ಣ ಅವಧಿ.  ತಿರುಮಲೆ ತಾತಾಚಾರ್ಯ ಶರ್ಮ, ಎಂ. ವೆಂಕಟಕೃಷ್ಣಯ್ಯ, ಡಿವಿಜಿ, ಆರ್.ಆರ. ದಿವಾಕರ್, ಮೊಹರೆ ಹನುಮಂರಾವ್, ಸಿದ್ಧವನಹಳ್ಳಿ ಕೃಷ್ಣಶರ್ಮ, ಖಾದ್ರಿ ಶಾಮಣ್ಣ,  ಟಿ.ಎಸ್. ರಾಮಚಂದ್ರ ರಾವ್, ಶಾಮರಾಯರು… ಮುಂತಾದ ದಿಗ್ಗಜರನ್ನು ಕಂಡ ಪತ್ರಿಕೋದ್ಯಮಕ್ಕಂತೂ ಬದಲಾವಣೆಯ ಗಾಳಿ ಪತ್ರಿಕಾವೃತ್ತಿಯ ಉನ್ನತಿಯ ಗಾಳಿ ಆಯಿತೇ ಹೊರತು ಉದ್ಯಮದ ಗಾಳಿ ಎನಿಸಲಿಲ್ಲ.

 ಆದರೆ , ಜಾಗತೀಕರಣದ ಪ್ರಭಾವದಿಂದಾಗಿ  ಅಥವಾ ಜಗತ್ತಿನ ಇತರ ಭಾಗದ ಪತ್ರಿಕೋದ್ಯಮ ಯಾವ ಹಾದಿ ಹಿಡಿಯಿತೋ  ಆ ಹಾದಿಯಿಂದ ಹೊರತು ಪಡಿಸಿಕೊಳ್ಳಲು ಕನ್ನಡ ಪತ್ರಿಕೋದ್ಯಮಕ್ಕೆ ಈಗಲೂ ಸಾಧ್ಯವಿಲ್ಲ. ಆದರೆ ಪತ್ರಿಕೆ ಒಂದು ್ಟಟ್ಠ್ಚಠಿ ಆಗಿ , ಓದುಗ ಒಬ್ಬ ಗ್ರಾಹಕ ಆದಲ್ಲಿಂದ ಕನ್ನಡ ಪತ್ರಿಕೋದ್ಯಮದ ಗತಿ ಮತ್ತು ಹಾದಿಗಳೆರಡೂ ಬದಲಾಗಿಬಿಟ್ಟವು. ಆದ್ಯತೆಯೇ ಬದಲಾದ ಮೇಲೆ ಪ್ರಯತ್ನ ಮತ್ತು ಫಲಿತಾಂಶ ಬದಲಾಗಲೇಬೇಕು. ಆಗ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನ ಪರಿಭಾಷೆಯಲ್ಲಿ ಪತ್ರಿಕೆಯ ಒಟ್ಟೂ ಚಲನೆ ಸಾಗಬೇಕಾಗಿ ಬಂತು. ಇದಕ್ಕೆ  ಮಾರ್ಕೆಟಿಂಗ್, ಪ್ರೊಮೊಷನ್, ಪ್ಯಾಕೇಜಿಂಗ್ ಮೊದಲಾದ ಅಪ್ಪಟ ವ್ಯವಹಾರದ ಪದಗಳ ಬಳಕೆ ಅನಿವಾರ್ಯವಾದವು. ನೇರವಾಗಿ ಹೇಳುವುದಾದರೆ, ಮೂರೋ ನಾಲ್ಕೋ ರೂಪಾಯಿ ಕೊಟ್ಟು ಪೇಪರ್ ಕೊಳ್ಳುವ ಓದುಗನಿಗೆ ತಾವು ನ್ಯಾಯ ಒದಗಿಸಬೇಕು ಎಂಬುದಕ್ಕಿಂತಲೂ ಸಾವಿರಾರು ರೂಪಾಯಿ ತೆತ್ತು ಜಾಹೀರಾತು ನೀಡುವ ಕಂಪನಿಯವರಿಗೇ ನ್ಯಾಯ ಒದಗಿಸಬೇಕು ಎಂಬ ಹಾದಿ ಹಿಡಿದಿರುವುದು ಮುಖ್ಯವಾಹಿನಿ ಪತ್ರಿಕೆಗಳ ಸದ್ಯದ ಪರಿಸ್ಥಿತಿ. ಪತ್ರಿಕೆ ಎಷ್ಟು ಪ್ರಸರಣೆ ಹೊಂದಿದೆ ಎಂಬಷ್ಟೇ ಅದು ಯಾವ ವರ್ಗದ, ಯಾವ ಪ್ರದೇಶದ ಓದುಗರಲ್ಲಿ ಪ್ರಸರಣೆ  ಎಂಬುದೂ ಪತ್ರಿಕೆಗಳಿಗೆ ಮುಖ್ಯವಾಗುತ್ತದೆ. ಹೊಸಯು ಗದ ಸ್ಪರ್ಧೆಗೆ ತೆರೆದುಕೊಂಡ ಕನ್ನಡ ಪತ್ರಿಕೆಗಳು ಅನಿವಾರ್ಯವಾಗಿ ಹೊಸ ಪ್ರಯೋಗಗಳಿಗೂ ತೆರೆದುಕೊಂಡವು.

ಪ್ರಸರಣೆ – ಪ್ರವರ್ಧನೆ ವಿಭಾಗಗಳು ಚುರುಕಾದಷ್ಟೇ ಸಂಪಾದಕೀಯ ವಿಭಾಗವೂ ಚುರುಕಾಗಿ ಬದಲಾವಣೆ ತಂದುಕೊಳ್ಳ ಬೇಕಾಯಿತು. ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ ಕೊಡುವಷ್ಟೇ ಪ್ರಾಧಾನ್ಯ ಮತ್ತು ಪ್ರಾಮುಖ್ಯವನ್ನು ಪ್ರಾದೇಶಿಕ ಮತ್ತು ಸ್ಥಳೀಯ ವರ್ತಮಾನಗಳಿಗೆ ಕೊಡುವಂತಾಯಿತು. ಒಟ್ಟಾರೆ ರಾಜಕಾರಣದ ಬಗ್ಗೆ ಬರೆಯುವ ಬದಲು ರಾಜಕಾರಣಿಗಳ ಬಗ್ಗೆ ಬರೆಯಲು ಪತ್ರಿಕೆಗಳು ಹೆಚ್ಚಿನ ಆದ್ಯತೆ ನೀಡಿದವು. ಯುವಜನರನ್ನು ಕೇಂದ್ರೀಕರಿಸಿ  ಒಟ್ಟೂ ವಿನ್ಯಾಸಗಳು ಬದಲಾದವು. ಪತ್ರಿಕೆಗಳಿಗೂ ಮ್ಯಾಗಜಿನ್‌ಗಳಿಗೂ ಇರುವ ಅಂತರ ಕಡಿಮೆಯಾಯಿತು. ಬಹುತೇಕ ಪತ್ರಿಕೆಗಳು ನಿತ್ಯ ಪುರವಣಿ ಪ್ರಕಟಿಸಿದವು. ಸುದ್ದಿ ಬರೆವಣಿಗೆ , ಪ್ರಸ್ತುತಿ, ವಿನ್ಯಾಸ, ಅಕ್ಷರ ರಚನೆ, ಬಣ್ಣಗಳ ಹೊಂದಿಕೆ-ಇವುಗಳಿಂದಾಗಿ ಪತ್ರಿಕೆಗಳು ಬದಲಾದವು.

ಸುದ್ದಿಯನ್ನು ಸುದ್ದಿಯಾಗಿ ಕೊಡುವುದಕ್ಕಿಂತ ಸಂಪಾದಕೀಕರಣಗೊಳಿಸಿ ಕೊಡುವುದು ರೂಢಿಗೊಳಿಸಲಾಯಿತು. ಓದುಗ ಸ್ನೇಹೀ ವಿನ್ಯಾಸಕ್ಕೆ ಆದ್ಯತೆ ಬಂತು. ಸಂಕ್ಷಿಪ್ತತೆಯೇ ಸುದ್ದಿಯ ಜೀವಾಳ ಎಂಬ ಮಾತು ನಿಜಾರ್ಥದಲ್ಲಿ ಅನುಷ್ಠಾನಕ್ಕೆ ಬಂತು. ಪ್ರತಿ ಜಿಲ್ಲೆಯ ಸುದ್ದಿಗೆ ಒಂದು ಪುಟ ಮೀಸಲಿಡುವಷ್ಟು  ಪಡೆಯಿತು. ಹಲವು ಕಡೆಗಳಿಂದ ಸುದ್ದಿ ಏಕಕಾಲದಲ್ಲಿ ಪ್ರಕಟಗೊಂಡು, ಪ್ರಸಾರವಾಗುವಷ್ಟು ವೇಗಕ್ಕೆ ಒಗ್ಗಿಕೊಳ್ಳಲಾಯಿತು.

ಇಟ್ಞಠಿಛ್ಞಿಠಿ ಅಷ್ಟೇ ್ಚಜಜ್ಞಿಜ ಗೂ ಮಹತ್ವ ಬಂತು. ಇಂತಹ ಬದಲಾವಣೆಗಳು ಆಗುತ್ತಲೇ ಇವೆ. ಪತ್ರಿಕೆಗಳು ಜನಮಾನಸದಿಂದ ದೂರವಾಗುತ್ತಿದ್ದರೂ ಹೊಸ ಪತ್ರಿಕೆಗಳ ಉದಯವೂ ಆಗುತ್ತಿದೆ. ಇರುವ ಸ್ಥಿತಿಯನ್ನೇ ಪರಿವರ್ತಿ ಸಿಕೊಂಡು ಮತ್ತೆ ಹೊಸರೂಪದಲ್ಲಿ ಪತ್ರಿಕೆಗಳು ಜನರನ್ನು ಆಕರ್ಷಿಸುತ್ತಲೂ ಇದೆ. ಸಮಾಜದ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದೇ ಅತ್ಯಧಿಕ. ವರ್ತಮಾನಕ್ಕೆ ಸ್ಪಂದಿಸುತ್ತ, ನೆಲವನ್ನು ಪ್ರೀತಿಸುತ್ತ , ಆಕಾಶಕ್ಕೆ ಮುಖಮಾಡಿ, ರಾಷ್ಟ್ರಪ್ರಗತಿಯ  ಹೊತ್ತು ಅದಮ್ಯ ಹಂಬಲದೊಂದಿಗೆ ಜಗತ್ತಿಗೆ ತೆರೆದುಕೊಳ್ಳುತ್ತಿರುವ ಕನ್ನಡ ಪತ್ರಿಕೋದ್ಯಮ ಸೃಷ್ಟಿಶೀಲತೆ ಅನಾವರಣ ಮಾಡುತ್ತಿದೆ ಎಂಬುದು ಸರ್ವವೇದ್ಯ.

ಹೊಸ ಮನ್ವಂತರಕ್ಕೆ ನಿತ್ಯವೂ ಮುಂದಾಗುತ್ತಿದೆ. ಇದರಿಂದ ಅಪೇಕ್ಷಿತ ಪರಿವರ್ತನೆಗಳಾಗಿವೆ. ನೈತಿಕತೆ ಹಾದಿಯನ್ನು ಔನ್ನತ್ಯಗೊಳಿಸಿಕೊಂಡು, ಘನ ಪರಂಪರೆಯ ಸೌಧವನ್ನು ಕಟ್ಟುವ ಸೂಚನೆಗಳನ್ನು ಹೊಸ ವಿನ್ಯಾಸದಲ್ಲಿ ರೂಢಿಸಿಕೊಂಡಿದೆ. ಈ ಬಗೆಯ ನಿತ್ಯದ ಪರಿವರ್ತನೆಗಳು ಪ್ರತಿ ಪತ್ರಿಕೆಗೆ ಹೊಸ ಹುಟ್ಟೇ ಆಗಿರುತ್ತದೆ. ಸಮುದಾಯದ ಕಾಳಜಿ ಮತ್ತು ಜನತೆ ಇಲ್ಲಿ ಇಂತಹ ಹುಟ್ಟಿನಲ್ಲಿರುತ್ತದೆ. ಸುದ್ದಿಗಳನ್ನು ರಂಜನೀಯಗೊಳಿಸಿ ಓದುಗರ  ತಪ್ಪಿಸುವಂತ ಹೊರತಾದ ಜವಾಬ್ದಾರಿಯನ್ನು ಆರಂಭದಿಂದಲೂ ಹೊತ್ತಿರುವ ಕನ್ನಡ ಪತ್ರಿಕೋದ್ಯಮ ಇನ್ನಷ್ಟು ಪ್ರಬುದ್ಧತೆ ಮೆರೆಯುತ್ತಿದೆ.

ಭಾಷೆಯೂ ಸ್ಪಷ್ಟ, ಸುಲಭ ಪದರಚನೆ, ವೈವಿಧ್ಯಮಯ ಅಂಕಣಗಳು, ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಜೀವನಚರಿತ್ರೆ, ಅಧ್ಯಾತ್ಮ, ವ್ಯಕ್ತಿ ವಿಶೇಷ, ದಿನ ವಿಶೇಷ, ಅತ್ಯಾಧುನಿಕತೆ, ವೈಜ್ಞಾನಿಕತೆ, ಮಾಹಿತಿ ತಂತ್ರಜ್ಞಾನ, ಶ್ರೇಷ್ಠ ವಿಚಾರಗಳು-ನಿತ್ಯವೂ ಒಳಗೊಳ್ಳುತ್ತಿದೆ. ಸಾಹಿತ್ಯ ಮತ್ತು ರಾಜಕಾರಣದ ಕೇಂದ್ರವಾಗದೆ, ಸಮಾಜ ಮತ್ತು ಜನಕೇಂದ್ರಿತವಾಗುತ್ತಿದೆ. ಬಹುಮುಖ್ಯವಾಗಿ ಈ ದೇಶ , ಈ ಬದುಕು ದೊಡ್ಡದು ಎಂದು ಹಂಬಲಿಸುವ  ಆಲೋಚನಾ ಕ್ರಮದಲ್ಲಿ ಸಂಕುಚಿತತೆ ಇರದೇ ನಮ್ಮದನ್ನು ಗೌರವಿಸುವ ಲೋಕದೃಷ್ಟಿ ಹೊಂದಿದೆ. ಸೈದ್ಧಾಂತಿಕವಾಗಿ ಹಂಗಿಲ್ಲದ ಛಿಞಠಿ ಯನ್ನು ಮೂಲಸತ್ತ್ವವನ್ನಾಗಿಸಿಕೊಂಡು ಉತ್ತಮ ಪಬ್ಲಿಕ್ ರಿಲೇಷನ್‌ಸ್ ಹೊಂದುತ್ತಿದೆ.

ಓದುಗರ ವಿಶ್ವಾಸಾರ್ಹತೆ ಪತ್ರಿಕೆಗಳಿಗೆ ಬಹು ಮುಖ್ಯ. ನಾನು ಓದುವ ಪತ್ರಿಕೆ ನನ್ನ ಚಿಂತನಾ ಸಾಮರ್ಥ್ಯವನ್ನು ಎತ್ತರಿಸಬೇಕು. ಹೀಗೆ , ನಮಗೆ ನಾವು ಬದಲಾಗುವ ಆನಂದಕ್ಕೆ ಪತ್ರಿಕೆ ಆಸ್ಪದವೀಯಬೇಕು. ಸದ್ಯದ ಮಟ್ಟಿಗೆ ಕನ್ನಡ ಪತ್ರಿಕೋದ್ಯಮ ಈ ಹಾದಿಯಲ್ಲಿ ಸಾಗುತ್ತಿದೆ. 1843ರಲ್ಲಿ ಮಂಗಳೂರು ಸಮಾಚಾರದೊಂದಿಗೆ ಆರಂಭಗೊಂಡ ಕನ್ನಡ  ಈ ಜುಲೈಗೆ 175 ವಸಂತ ಮುಗಿಸಿ ಮುನ್ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಮೇಲಿನ ಮಾತುಗಳನ್ನು ಒಳಗೊಂಡು, ಕನ್ನಡ ಪತ್ರಿಕೋದ್ಯಮವು ಹೊಸಹುಮ್ಮಸ್ಸು, ಹೊಸಚೈತನ್ಯದಿಂದ ರಾಷ್ಟ್ರೀಯ – ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ವಿಶೇಷವಾಗಿ ರೂಪಿಸಿಕೊಳ್ಳುತ್ತಿದೆ.ಜತೆಗೆ ಉತ್ಕರ್ಷ ಹಾದಿಯಲ್ಲಿ ನಮ್ಮ ನಮ್ಮ ಬೌದ್ಧಿಕ ಮತ್ತು ಮಾನಸಿಕ ಆರೋಗ್ಯದ ಮಟ್ಟವನ್ನೂ ಹದಗೊಳಿಸುತ್ತಿದೆ.

ಸಮಕಾಲೀನ ಕನ್ನಡ ಜಗತ್ತನ್ನು ವಿಭಿನ್ನವಾದ ಮತ್ತು ವಿಶಿಷ್ಟವಾದ ದೃಷ್ಟಿಕೋನದಿಂದ ವಿಶ್ಲೇಷಿಸುವ ಕನ್ನಡ ಪತ್ರಿಕೋದ್ಯಮವು ಕನ್ನಡದ ಸಮಗ್ರ  ಇತಿಹಾಸ ಹೇಳುವ ಜ್ವಲಂತ ಸಾಕ್ಷಿಗಳಲ್ಲಿ  ಒಂದು ಜೀವಂತ ಭಾಷೆ ಮತ್ತದರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಪೋಷಿಸುವಲ್ಲಿ ಪತ್ರಿಕೆ ಗಳ ಪಾತ್ರ ಮಹತ್ವದ್ದು, ಕನ್ನಡ ನಾಡಿಗೆ ಇದು ಎಂದಿಗೂ ಅತ್ಯಗತ್ಯ.

ಕನ್ನಡದ ಉಳಿವಿನ ಚಿಂತನೆಯ ಬಗ್ಗೆ ಎಲ್ಲೆಲ್ಲೂ ಕೂಗು  ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮಕ್ಕಳು ಕನ್ನಡದ ಪತ್ರಿಕೆಗಳನ್ನು ಓದುವ ವ್ಯವಸ್ಥೆಯನ್ನು ಶಾಲಾ-ಕಾಲೇಜುಗಳಲ್ಲಿ, ಮನೆ, ಸಾರ್ವಜನಿಕ ಗ್ರಂಥಾಲಯಗಳಲ್ಲಿ ಇನ್ನೂ ಹೆಚ್ಚಾಗಿ ಮಾಡಿಕೊಳ್ಳಬೇಕಾಗಿದೆ.  ಸರಕಾರವೂ ಇದಕ್ಕೆ ಯೋಜನೆ ರೂಪಿಸಬೇಕಿದೆ. ಹಾಗೆಯೇ ನಾವು ಕೂಡ ಕನ್ನಡ ಪತ್ರಿಕೆಗಳನ್ನು ಹೆಚ್ಚಾಗಿ  ಓದಿದಾಗಲೇ ಕನ್ನಡತನ ಉಳಿಸಿಕೊಂಡು, ಹೊಸತನಕ್ಕೆ ತೆರೆದುಕೊಳ್ಳುತ್ತಿರುವ ಪತ್ರಿಕೋದ್ಯಮದ ಶ್ರಮಕ್ಕೆ ನೀಡುವ ಗೌರವಿದಂತೆ.

Tags

Related Articles

Leave a Reply

Your email address will not be published. Required fields are marked *

Language
Close