About Us Advertise with us Be a Reporter E-Paper

Breaking Newsದೇಶಪ್ರಚಲಿತ

ಎಟಿಎಂನಿಂದ 18 ಲಕ್ಷ ರು. ದರೋಡೆ: ಆರೋಪಿ ಅಂದರ್‌

ಮೀರತ್: ಕಳೆದ ಮಾರ್ಚ್‌ನಲ್ಲಿ ನಡೆದ ಎಟಿಎಂ ಹಗರನದಲ್ಲಿ ಸುಮಾರು 18 ಲಕ್ಷ ರು. ದರೋಡೆ ಮಾಡಿದ ಆರೋಪಿ ಚೇತನ್ ಕುಮಾರ್ ಅನ್ನು ಶಾಮ್ಲಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಟಿಎಂನಿಂದ 18 ಲಕ್ಷ ರು. ದರೋಡೆ ಮಾಡಿದ ಚೇತನ್ ಕುಮಾರ್‌ನನ್ನು ಪೊಲೀಸರು ವಿಚಾರಿಸಿದ್ದಾಗ, ಬ್ಯಾಂಕ್ ಮ್ಯಾನೇಜರ್ ಈ ದರೋಡೆಯ ರೂವಾರಿ ಎಂಬುವ ವಿಷಯ ಬಯಲಾಗಿದೆ. ತಲೆ ಮರೆಸಿಕೊಂಡಿರುವ ಬ್ಯಾಂಕ್ ಮ್ಯಾನೇಜರ್ ವಿರುದ್ಧವು ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

ಆರೋಪಿ ಚೇತನ್ ಬಂತಿಕೇಡದಲ್ಲಿರುವ ಸಾರ್ವಜನಿಕ ವಲಯದ ಬ್ಯಾಂಕ್ ಮ್ಯಾನೇಜರ್ ರಾಬಿನ್ ಬನ್ಸಾಲ್ ಎಂಬವರನ್ನು ಸಂಪರ್ಕಿಸಿ ಪರ್ಸನಲ್ ಲೋನ್‌ಗೆ ಅರ್ಜಿ ಸಲ್ಲಿಸಿದ್ದ. ಆಗ ಧೀಮನ್‌ಪುರ ರೋಡನಲ್ಲಿರುವ ಬ್ಯಾಂಕ್ ಎಟಿಎಂನಿಂದ ಹಣ ಕಳವು ಮಾಡಿದರೆ 50 ಸಾವಿರ ರು. ಬಹುಮಾನ ನೀಡುವುದಾಗಿ ಬನ್ಸಾಲ್ ಹೇಳಿದ್ದಾರೆ.

ಆರೋಪಿ ಮ್ಯಾನೇಜರ್ ಚೇತನ್‌ಗೆ ಪಾಸ್‌ವರ್ಡ್ ನೀಡಿ ಎಟಿಎಂ ಯಂತ್ರವನ್ನು ಅಲರಾಂ ಬರದ ರೀತಿಯಲ್ಲಿ ತೆರೆಯುವುದು ಹೇಗೆ ಎಂಬ ಬಗ್ಗೆ ತರಬೇತಿ ನೀಡಿದ್ದ. ಎಟಿಎಂ ಯಂತ್ರದ ಒಳಗೆ ನಗದು ತಟ್ಟೆಗೆ ಕೈ ಹಾಕಬೇಕಾದರೆ ವ್ಯಕ್ತಿಯು ಮೂರು ಹಂತದ ಸ್ವಯಂಚಾಲಿತ ಭದ್ರತಾ ಪರೀಕ್ಷೆಗೆ ಒಳಪಡಬೇಕಿದೆ. ಯಂತ್ರವನ್ನು ತೆರೆದ ಬಳಿಕ ನಗದು ಕೈ ಹಾಕಬೇಕಾದರೆ ಎರಡು ಪಾಸ್‌ವರ್ಡ್ ಬಳಸಬೇಕು. ಇವೆಲ್ಲವನ್ನೂ ಮ್ಯಾನೇಜರ್ ನಿಂದ ತಿಳಿದುಕೊಂಡ ಬಳಿಕ ಚೇತನ್ ಎಟಿಎಂ ರಿಪೇರಿ ಸೋಗಿನಲ್ಲಿ ಪ್ರವೇಶಿಸಿ 18.3 ಲಕ್ಷ ರು. ಎಗರಿಸಿರುವುದ್ದಾಗಿ ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close