About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕರ್ನಾಟಕದಲ್ಲಿವೆ ಬರೋಬ್ಬರಿ 1,861 ಜಾತಿಗಳು..!

ಬೆಂಗಳೂರು: ಕರ್ನಾಟಕದಲ್ಲಿ ಎಷ್ಟು ಜಾತಿಗಳಿವೆ ಎಂದು ನೀವು ಊಹಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಸುಮಾರು  1861 ಜಾತಿಗಳಿವೆ ಎಂದು ಜನಗಣತಿ ಅಂಕಿ ಅಂಶಗಳ ಪ್ರಕಾರ ತಿಳಿದು ಬಂದಿದೆ.

ಮೊದಲು ಮಾಹಿತಿ ಸೋರಿಕೆಯಾದಾಗ 1351 ಜಾತಿಗಳಿವೆ ಎಂದು ಹೇಳಲಾಗಿತ್ತು. ನಂತರ ಕರ್ನಾಟಕದ ಸಾಮಾಜಿಕ ಆರ್ಥಿಕ ಜನಗಣತಿಯು 510 ಜಾತಿಗಳನ್ನು ಸೇರಿಸಿ 1861 ಜಾತಿಗಳಿವೆ ಎಂದು  ತಿಳಿಸಿತು. ಎರಡು ವರ್ಷಗಳ ಹಿಂದೆಯೇ ಜನಗಣತಿ ಸಿದ್ದಗೊಂಡಿತ್ತು.ಆದರೆ ಸಿದ್ದರಾಮಯ್ಯ ಸರಕಾರ ಪಕ್ಷಕ್ಕೆ ಸಾಮಾಜಿಕ ಮತ್ತು ಆರ್ಥಿಕ ಹಿನ್ನಡೆಯಾಗುತ್ತದೆ ಎಂಬ ಉದ್ದೇಶದಿಂದ ಇದನ್ನು ಬಿಡುಗಡೆ ಮಾಡಿರಲಿಲ್ಲ.

ಜನಗಣತಿಯ ಪ್ರಕಾರ ಮುಸ್ಲಿಮರು ಶೇ 16 ರಷ್ಟಿದ್ದು, ರಾಜ್ಯದಲ್ಲೇ ಎರಡನೇ ದೊಡ್ಡ ಸಮುದಾಯವಾಗಿದೆ. ಲಿಂಗಾಯಿತರು ಶೇ 14 ರಷ್ಟು ಹಾಗೂ ಒಕ್ಕಲಿಗರು ಶೇ 11 ರಷ್ಟಿದ್ದಾರೆಂದು ಮಾಹಿತಿ ನೀಡಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗವು ನೂರಾರು ಉಪ ಜಾತಿಯನ್ನು ಹೊಂದಿದ್ದು. ಶೇ. 23 ರಷ್ಟಿದೆ. ಪರಿಶಿಷ್ಟ ಪಂಗಡವು ಶೇ. 4 ರಷ್ಟು ಹಾಗೂ ಬ್ರಾಹ್ಮಣರು ಶೇ. 4 ರಷ್ಟು ಜನಸಂಖ್ಯೆಯನ್ನು ಹೊಂದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close