1993 ಮುಂಬೈ ಸ್ಪೋಟ: ಅಬು ಸಲೇಂ ಸೇರಿ, ನಾಲ್ವರಿಗೆ ಶಿಕ್ಷೆ ಪ್ರಕಟ ಇಂದು

Posted In : ದೇಶ

ಮುಂಬೈ: ಮುಂಬೈ ಬಾಂಬ್ ಸ್ಫೋಟ(1993)ಕ್ಕೆ ಸಂಬಂಧಿಸಿ, ಅಪರಾಧಿಗಳಿಗೆ ವಿಶೇಷ ಟಾಡಾ ನ್ಯಾಯಾಲಯ ಗುರುವಾರ ಶಿಕ್ಷೆಯ ಪ್ರಮಾಣ ಘೋಷಿಸಲಿದೆ. ನ್ಯಾಯಮೂರ್ತಿ ಜಿ.ಎ.ಸನಾಪ್ ಅವರ ಪೀಠವು ಪ್ರಕರಣ ಸಂಬಂಧಿಸಿದಂತೆ ಶಿಕ್ಷೆ ಪ್ರಕಟಿಸ ಲಿದೆ.

ಕಳೆದ ಜೂನ್ 28ರಂದು ಸ್ಪೋಟದ ರೂವಾರಿ ಮುಸ್ತಫಾ ದೊಸಾ ಮತ್ತು ಅಬು ಸಲೇಂ ಸೇರಿದಂತೆ ಆರು ಆರೋಪಿಗಳಾದ ಫಿರೋಜ್ ಖಾನ್, ಮೊಹಮ್ಮದ್ ತಾಹೀರ್ ಮರ್ಚಂಟ್, ಕರಿಮುಲ್ಲಾ ಖಾನ್ ಮತ್ತು ರಿಯಾಜ್ ಅಹ್ಮದ್ ಸಿದ್ದಿಕಿ ಮುಂತಾದವರಿ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು.

2015ರಲ್ಲಿ ಯಾಕೂಬ್ ಮೆನನ್ ಅವರನ್ನು ಗಲ್ಲಿಗೇರಿಸಲಾಗಿತ್ತು. 2005ರಲ್ಲಿ ಸಿಬಿಐ ಅಬು ಸಲೇಂ, ತಾಹೀರ್ ಮರ್ಚಂಟ್ ಮತತು ಕರಿಮ್ಲುಲಾ ಖಾನ್ ವಿರುದ್ದ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರು. ಸಲೇಂ ನನ್ನು 2005ರಲ್ಲಿ ಪೋರ್ಚು ಗಲ್‌ನಿಂದ ಗಡೀಪಾರು ಮಾಡಲಾಗಿತ್ತು. ಗುಜರಾತ್‌ನಿಂದ ಮುಂಬೈಗೆ ಶಸ್ತ್ರಾಸ್ತ್ರ ಸಾಗಿಸಿದ ಆರೋಪ ಸಲೇಂ ಮೇಲಿದೆ.

ಮಾರ್ಚ್ 12, 1993ರಲ್ಲಿ ನಡೆದ ಸ್ಫೋಟದಲ್ಲಿ 257 ಜನ ಮೃತಪಟ್ಟು, 700 ಜನ ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟದ ಹಿಂದೆ ಭಯೋತ್ಪಾದಕ ದಾವೂದ್ ಇಬ್ರಾಹಿಂ ಎಂಬುದು ಸಾಬೀತಾಗಿತ್ತು.

Leave a Reply

Your email address will not be published. Required fields are marked *

13 + 13 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top