About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಬೋಗಿಬಿಲ್ ರೈಲು ಸಂಚಾರ ಸೇತುವೆ ಮಾರ್ಗ ಡಿ.25ಕ್ಕೆ ಲೋಕಾರ್ಪಣೆ

ದೆಹಲಿ: ದೇಶದ ಅತ್ಯಂತ ಉದ್ದದ ರೈಲು ಸೇತುವೆ ಬೋಗಿಬಿಲ್ ರೈಲು ಸಂಚಾರ ಸೇತುವೆ ಮಾರ್ಗವನ್ನು ಡಿಸೆಂಬರ್ 25ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.

ಬ್ರಹ್ಮಪುತ್ರ ನದಿಯ ಉತ್ತರ ತೀರದಿಂದ ದಕ್ಷಿಣಕ್ಕೆ ಸಂಪರ್ಕ ಕಲ್ಪಿಸುವ 4.94 ಕಿ.ಮೀ ಉದ್ದದ ರೈಲು ಸೇತುವೆ ಇದಾಗಿದೆ. ಟಿನ್ಸುಕಿಯಾ-ನಹರ್ಲಾಗುನ್ ಅಂತರ್ ನಗರ ಎಕ್ಸ್ ಪ್ರೆಸ್ ವೇ ವಾರದಲ್ಲಿ 5 ದಿನ ಸಂಚರಿಸಲಿದೆ. ಅಸ್ಸಾಂನ ಟಿನ್ಸುಕಿಯಾದಿಂದ ಅರುಣಾಚಲಪ್ರದೇಶದ ನಹರ್ಲಾಗುನ್ ನಗರಕ್ಕೆ ಸಂಪರ್ಕ ಕಲ್ಪಿಸಲಿದ್ದ 10 ತಾಸಿನ ಒಳಗೆ ತಲುಪಲಿದೆ. ಡಿಸೆಂಬರ್ 25ರಂದು ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಅಂದೇ ಬೋಗಿಬಿಲ್ ರೈಲು ಸಂಚಾರ ಸೇತುವೆ ಮಾರ್ಗವನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ.

ಅರುಣಾಚಲಪ್ರದೇಶದ ಗಡಿಭಾಗದಲ್ಲಿ ಸರಕು ಸಾಗಣೆ ಉತ್ತಮ ಪಡಿಸುವ ನಿಟ್ಟಿನಲ್ಲಿ 4.94 ಕಿ.ಮೀ ಉದ್ದದ ಬೋಗಿಬಿಲ್ ಸೇತುವೆ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close