About Us Advertise with us Be a Reporter E-Paper

ದೇಶವಿದೇಶ

2030ಕ್ಕೆ ವ್ಯಾಪಾರ ದುಪ್ಪಟ್ಟುಗೊಳಿಸಲು ಭಾರತ-ದ.ಕೊರಿಯಾ ನಿರ್ಧಾರ

Modi

ದೆಹಲಿ: ದ್ವಿಪಕ್ಷೀಯ ವ್ಯಾಪಾದ ಸಂಬಂಧ ವೃದ್ಧಿ ಮಾಡಿಕೊಳ್ಳುತ್ತಿರುವ ಭಾರತ-ದಕ್ಷಿಣ ಕೊರಿಯಾ, 2030ರ ವೇಳೆಗೆ ತಮ್ಮ ನಡುವಿನ ವ್ಯಾಪಾರ ವಹಿವಾಟನ್ನು 50 ಶತಕೋಟಿ ಡಾಲರ್‌ಗೇರಿಸಲು ನೋಡುತ್ತಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ-ಇನ್‌ ತಮ್ಮ ದೇಶಗಳ ಉದ್ಯಮಿಗಳಿಗೆ ಈ ಕುರಿತಂತೆ ಕೋರಿದ್ದು, ಜಂಟಿ ಪಾಲುದಾರಿಕೆಗಳು ಹಾಗು ವ್ಯಾಪಾರ ವಿಸ್ತರಣೆಗೆ ಮುಂದಾಗಬೇಕಿದೆ ಎಂದಿದ್ದಾರೆ.

ವ್ಯಾಪಾರ ಸಹಕಾರ, ಸಾಂಸ್ಕೃತಿಕ ಸಹಕಾರ, ತಂತ್ರಜ್ಞಾನ ಹಾಗು ವೈಜ್ಞಾನಿಕ ಸಂಶೋಧನೆ ಕುರಿತಂತೆ ಅನೇಕ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಮಾಡಿದ್ದಾರೆ. 2017ರಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು 20 ಶತಕೋಟಿ ಡಾಲರ್‌ಗಳಷ್ಟಿತ್ತು.

ಮೂನ್‌ ನಾಲ್ಕು ದಿನಗಳ ಮಟ್ಟದ ಭಾರತ ಪ್ರವಾಸದಲ್ಲಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧಗಳು ಸ್ವಾಭಾವಿಕವಾಗಿ ಚಲಿಸುವ ರೀತಿಯಲ್ಲಿ ವಿದೇಶಾಂಗ ನೀತಿಗಳಿವೆ ಎಂದು ಮೋದಿ ತಿಳಿಸಿದ್ದಾರೆ.

“ಭಾರತದ ಆಕ್ಟ್‌ ಈಸ್ಟ್‌ ನೀತಿ ಹಾಗು ದಕ್ಷಿಣ ಕೊರಿಯಾದ, ನ್ಯೂ ಸದರ್ನ್‌ ವ್ಯೂಹಗಳು ಒಂದಕ್ಕೊಂದು ಪೂರಕವಾಗಿವೆ. ಈ ನಿಟ್ಟಿನಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ” ಎಂದು ಮೋದಿ ತಿಳಿಸಿದ್ದಾರೆ.

ಉಭಯ ದೇಶಗಳ ನಡುವೆ ಸಾಂಸ್ಕೃತಿಕ ಹಾಗು ಜನತೆ ನಡುವಿನ ಕೊಡು ಕೊಳ್ಳಿಯನ್ನು ಇನ್ನಷ್ಟು ವೃದ್ಧಿಸಲು ಉಭಯ ನಾಯಕರು ಮಾತನಾಡಿಕೊಂಡಿದ್ದಾರೆ. ನೋಯ್ಡಾದ ಮೊಬೈಲ್‌ ಫೋನ್‌ ತಯಾರಿಕಾ ಘಟಕ ಉದ್ಘಾಟಿಸಲು ಉಭಯ ನಾಯಕರು ದೆಹಲಿ ಮೆಟ್ರೋ ರೈಲಿನಲ್ಲ ಪ್ರಯಾಣಿಸಿದ್ದಾರೆ. ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಸಂಸ್ಥೆಯ ಮೊಬೈಲ್ ಉತ್ಪಾದನಾ ಘಟಕದ ಸ್ಥಾಪನೆ ಮೂಲಕ 70,000 ಉದ್ಯೋಗ ಸೃಷ್ಟಿಯಾಗಲಿದ್ದರೆ, ವಾರ್ಷಿಕ 1.2 ಕೋಟಿ ಮೊಬೈಲ್‌ ಉತ್ಪಾದನೆ ಮಾಡಲಾಗುವುದು.

 

Tags

Related Articles

Leave a Reply

Your email address will not be published. Required fields are marked *

Language
Close