ವಿಶ್ವವಾಣಿ

ಕಾಲ್‌ಸೆಂಟರ್‌ ಹಗರಣ: ಭಾರತೀಯ ಮೂಲದ 21ವ್ಯಕ್ತಿಗಳ ಬಂಧನ

ನ್ಯೂಯಾರ್ಕ್‌: ಕಾಲ್‌ಸೆಂಟರ್‌ ನಡೆಸಿ ಸಹಸ್ರಾರು ಸ್ಥಳೀಯ ನಾಗರಿಕರಿಗೆ ಲಕ್ಷಾಂತರ ಡಾಲರ್‌ ಮೋಸ ಮಾಡಿ ವಂಚಿಸಿದ ಭಾರತೀಯ ಮೂಲದ  20ಕ್ಕೂ ಹೆಚ್ಚಿನ ವ್ಯಕ್ತಿಗಳಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಅಮೆರಿಕಾದ ಇತಿಹಾಸದಲ್ಲೆ ಅತಿ ದೊಡ್ಡ 2012-2016ರ ನಡೆದ ಕಾಲ್‌ ಸೆಂಟರ್‌ ಹಗರಣ 2016ರಲ್ಲಿ ಬೆಳಕಿಗೆ ಬಂದಿತ್ತು. ಈ ಹಗರಣದ ತೀರ್ಪು  ಹೊರಬಿದ್ದಿದ್ದು, 20ಕ್ಕೂ ಹೆಚ್ಚು ಅಪರಾಧಿಗಳಿಗೆ ನಾಲ್ಕರಿಂದ 20ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿದೆ.

ಕಾಲ್‌ಸೆಂಟರ್‌ ಮೂಲಕ ಸಾವಿರಾರು ಅಮೆರಿಕಾ ಪ್ರಜೆಗಳಿಗೆ ಲಕ್ಷಾಂತರ ಡಾಲರ್‌ ವಂಚಿಸಿರುವ ಹಗರಣದಲ್ಲಿ ಪಾಲ್ಗೊಂಡಿರುವ 20ಕ್ಕೂ ಹೆಚ್ಚಿನ ಭಾರತೀಯ ಮೂಲದ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯ ಅವಧಿ ಮುಗಿದ ಬಳಿಕ ಅವರನ್ನು ಭಾರತಕ್ಕೆ ಗಡಿಪಾರು ಮಾಡಲಾಗುವುದು. ಅಮೆರಿಕಾದ ಅನೇಕ ಜನರನ್ನು ಈ ಹಗರಣದಲ್ಲಿ ಬಲಿಪಶು ಮಾಡಿದ ಅಪಾರಾಧಿಗಳಿಗ ಶಿಕ್ಷೆ ವಿಧಿಸುವಲ್ಲಿ ಕಾನೂನು ಯಶಸ್ವಿಯಾಗಿದೆ. ಈ ಮೂಲಕ ಅಮೆರಿಕಾದ ಜನರಿಗೆ ನ್ಯಾಯ ದೊರಕಿದೆ ಎಂದು ಅಮೆರಿಕಾದ ಅಟಾರ್ನಿ ಜನರಲ್‌ ಜೆಫ್‌ ತಿಳಿಸಿದರು.

ಭಾರತೀಯ ಕಾಲ್‌ ಸೆಂಟರ್‌ಗಳು ಅನೇಕ ಬಗೆಯ ಟೆಲಿಫೋನ್‌ ವಂಚನೆ ಮಾದರಿಗಳನ್ನು ಬಳಸಿಕೊಂಡು ಹಿರಿಯ ಅಮೆರಿಕಾದ ಪ್ರಜೆಗಳು ಮತ್ತು ಸಕ್ರಮ ವಲಸಿಗರನ್ನು ಸೇರಿದಂತೆ ಸಾವಿರಾರು ಮಂದಿಗೆ ಲಕ್ಷಾಂತರ ಡಾಲರ್‌ ವಂಚಿಸಲಾಗಿತ್ತು.

ತೆರಿಗೆ ಅಧಿಕಾರಿಗಳ ಹೆಸರಿನಲ್ಲಿ ವಂಚನೆ

ಅಮೆರಿಕಾದಲ್ಲಿರುವ ದಕ್ಷಿಣಾ ಏಷ್ಯಾದ ಸಂತ್ರಸ್ತರಿಗೆ ಅಮೆರಿಕಾದ ತೆರಿಗೆ ಅಧಿಕಾರಿಗಳ ಹೆಸರಿನಲ್ಲಿ ಕರೆಮಾಡಿ ಸರ್ಕಾರಕ್ಕೆ ಹಣ ಪಾವತಿ ಮಾಡದಿದ್ದರೆ ಬಂಧಿಸಲಾಗುವುದು ಎಂದು ಬೆದರಿಸಿ ಡೆಬಿಡ್‌ ಕಾರ್ಡ್‌ ಮೂಲಕ ಹಣ ಪಾವತಿ ಮಾಡುವಂತೆ ಸೂಚಿಸಲಾಗುತ್ತಿತ್ತು. ಹಣ ಪಾವತಿಯಾಗುತ್ತಿದ್ದಂತೆ ಅದನ್ನು ಬೇರೆ ದೇಶಕ್ಕೆ ವರ್ಗವಣೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದರು.