About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

24 ಗಂಟೆಯಲ್ಲಿ ದೋಸ್ತಿ ಸರಕಾರ ಪತನವಾಗದಿದ್ದರೆ ಉಮೇಶ್ ಕತ್ತಿ ರಾಜೀನಾಮೆ ಕೊಡಲಿ: ಗುಂಡೂರಾವ್

ಬೆಂಗಳೂರು: 24 ಗಂಟೆಯಲ್ಲಿ ದೋಸ್ತಿ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದ ಬಿಜೆಪಿ ಮುಖಂಡ, ಮಾಜಿ ಸಚಿವ ಉಮೇಶ ಕತ್ತಿಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲು ಎಸೆದಿದ್ದಾರೆ.

“24 ಗಂಟೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರಕಾರ ಬೀಳದಿದ್ದರೆ, ಬಿಜೆಪಿ ಶಾಸಕ ಉಮೇಶ್ ಕತ್ತಿ ರಾಜೀನಾಮೆ ಕೊಟ್ಟು ಬರಲಿ” ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲು ಎಸೆದಿದ್ದಾರೆ.

ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಸರಕಾರ ಉರುಳಿಸುವ ಬಗ್ಗೆ ಉಮೇಶ್ ಕತ್ತಿ ಬಳಿ ಏನು ದಾಖಲೆ ಇದೆ. ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ, ಸರ್ಕಾರವನ್ನು ಬೀಳಿಸಲಿ. 24 ಗಂಟೆ ಯಾಕೆ? ಈಗಲೇ ಬೀಳುತ್ತೆ ಎಂದು ಹೇಳಬಹುದಿತ್ತಲ್ಲವೇ? ಕತ್ತಿಯವರ ಮಾತು ನಿಜವಾಗದೇ ಆಗಿದ್ದರೆ, ಅವರಿಗೆ ತಾಕತ್ತಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅದನ್ನು ಬಿಟ್ಟು ಈ ರೀತಿ ಮಾತನಾಡಬಾರದು” ಎಂದು ಕಿಡಿಕಾರಿದ್ದಾರೆ.

“ಸಚಿವ ಸಂಪುಟ ವಿಸ್ತರಣೆಯ ಬಳಿಕ ಖಾತೆಗಳ ಹಂಚಿಕೆ ಬಗ್ಗೆ ಒಳ್ಳೆಯ ಮಾತುಕತೆ ಆಗಿದೆ. ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ನಡುವೆ ಯಾವುದೇ ಮಾತಿನ ಚಕಮಕಿ ನಡೆದಿಲ್ಲ. ಅದೆಲ್ಲವೂ ಸತ್ಯಕ್ಕೆ ದೂರವಾಗಿದ್ದು” ಎಂದು ಸ್ಪಷ್ಟಪಡಿಸಿದ್ದಾರೆ.

“ನನ್ನ ಸಂಪರ್ಕದಲ್ಲಿ 15ಕ್ಕೂ ಹೆಚ್ಚು ಆಡಳಿತ ಪಕ್ಷದ ಶಾಸಕರಿದ್ದಾರೆ. ಆದರೆ ಅವರ ಹೆಸರನ್ನು ನಾನು ಬಹಿರಂಗಗೊಳಿಸುವುದಿಲ್ಲ. ಮಾಜಿ ಸಚಿವ, ಗೋಕಾಕ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಸೇರಿದಂತೆ ಇತರರು ನಮ್ಮ ಪಕ್ಷಕ್ಕೆ ಬಂದರು ಸ್ವಾಗತವಿದೆ ಎಂದರು. ಅಲ್ಲದೆ 24 ಗಂಟೆಯಲ್ಲಿ ದೋಸ್ತಿ ಸರ್ಕಾರ ಪತನವಾಗಲಿದೆ” ಎಂದು ಉಮೇಶ ಕತ್ತಿ ಭವಿಷ್ಯ ನುಡಿದಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close