About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

25 ಲಕ್ಷ ರೂ. ಮೌಲ್ಯದ ಚಿನ್ನ, ನಗದು ಕದ್ದು ಕಳ್ಳ ಎಸ್ಕೇಪ್

ಮೈಸೂರು: ಮದುವೆಗೆಂದು ಮನೆಯಲ್ಲಿ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.

ಇಲಿಯಾಸ್ ಕಾವೇರಿ ಎಂಪೋರಿಯಮ್ ಮಾಲೀಕರಾದ ಇಲಿಯಾಸ್ ಬೇಗ್ ಮನೆಯಲ್ಲಿ ಖದೀಮ ಕೈಚಳಕ ತೋರಿಸಿದ್ದಾನೆ. ಮಗಳ ಮದುವೆಗೆಂದು ಇಲಿಯಾಸ್ ಬೇಗ್ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದನ್ನು ಖರೀದಿಸಿ ಇಟ್ಟಿದ್ದರು. ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಹೊರಗೆ ಹೋಗಿದ್ದಾಗ ಮನೆಯ ನಕಲಿ ಕೀ ಬಳಸಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 2.50 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾನೆ.

ಕಳ್ಳ ಬಂದು ಮನೆಗೆ ಎಂಟ್ರಿ ಕೊಟ್ಟ ದೃಶ್ಯ ಹಾಗೂ ಪರಾರಿಯಾಗುತ್ತಿರುವ ದೃಶ್ಯ ಮನೆಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close