About Us Advertise with us Be a Reporter E-Paper

Breaking Newsದೇಶಪ್ರಚಲಿತ

ದೇಶದಲ್ಲಿವೆ 277 ನಕಲಿ ಇಂಜೀನಿಯರಿಂಗ್ ಕಾಲೇಜುಗಳು!

ದೆಹಲಿ: ದೇಶಾದ್ಯಂತ ನಕಲಿ ಕಾಲೇಜುಗಳ ಹಾವಳಿ ಹೆಚ್ಚಾಗುತ್ತಿದ್ದು, ಒಟ್ಟು 277  ನಕಲಿ ಇಂಜಿನಿಯರಿಂಗ್‌ ಹಾಗೂ ತಾಂತ್ರಿಕ ಕಾಲೇಜುಗಳು ಇದೆ ಎಂದು ಕೇಂದ್ರ ಸರಕಾರ ಇಂದು ಲೋಕಸಭೆಯಲ್ಲಿ ತಿಳಿಸಿದೆ.

66 ನಕಲಿ ಇಂಜಿನಿಯರಿಂಗ್ ಕಾಲೇಜುಗಳಿರುವ ರಾಜಧಾನಿ ದೆಹಲಿ ಮೊದಲನೇ ಸ್ಥಾನದಲ್ಲಿದ್ದ, ಎರಡನೇ ಸ್ಥಾನದಲ್ಲಿರುವ ತೆಲಂಗಾಣಲ್ಲಿ  35  ನಕಲಿ ಕಾಲೇಜಿಗಳು ಕಾರ್ಯನಿರ್ವಹಿಸುತ್ತಿವೆ. 27 ನಕಲಿ ಕಾಲೇಜುಗಳು ಇರುವ ಮೂಲಕ ಪಶ್ಚಿಮ ಬಂಗಾಳ ಮೂರನೇ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದಲ್ಲಿ 23 ನಕಲಿ ಕಾಲೇಜುಗಳಿದ್ದು, ಉತ್ತರ ಪ್ರದೇಶದಲ್ಲಿ 22 ನಕಲಿ ಕಾಲೇಜುಗಳಿಗವೆ.

ಇಂದು ಬಿಜೆಪಿಯ ರಾಮ ದೇವಿ ಹಾಗೂ ಅನ್ನಾ ದ್ರಾವಿಡ ಮುನ್ನೇತ್ರ ಕಾಳಗಂ (ಎಐಎಡಿಎಂಕೆ) ಯ ಲಕ್ಷ್ಮಣ್ ಗಿಲುವ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಮಾನವ ಸಂಪನ್ಮೂಲ ಸಚಿವ ಸತ್ಯಪಾಲ್‌ ಸಿಂಗ್‌ ಈ ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟು ನಕಲಿ ಕಾಲೇಜುಗಳಿವೆ?

ಕ್ರಮ ಸಂ. ರಾಜ್ಯ/ ಕೇಂದ್ರಾಡಳಿತ ಪ್ರದೇಶ ನಕಲಿ ಕಾಲೇಜುಗಳ ಸಂಖ್ಯೆ
1 Andaman and Nicobar Islands 0
2 Andhra Pradesh 7
3 Arunachal Pradesh 0
4 Assam 0
5 Bihar 17
6 Chandigarh 7
7 Chhattisgarh 0
8 Dadra and Nagar Haveli 0
9 Daman and Diu 0
10 Delhi 66
11 Goa 2
12 Gujarat 8
13 Haryana 18
14 Himachal Pradesh 1
15 Jammu and Kashmir 0
16 Jharkhand 4
17 Karnataka 23
18 Kerala 2
19 Lakshadweep 0
20 Madhya Pradesh 0
21 Maharashtra 16
22 Manipur 0
23 Meghalaya 0
24 Mizoram 0
25 Nagaland 0
26 Odisha 1
27 Puducherry 0
28 Punjab 5
29 Rajasthan 3
30 Sikkim 0
31 Tamil Nadu 11
32 Telangana 35
33 Tripura 0
34 Uttarakhand 3
35 Uttar Pradesh 22
36 West Bengal 27
Total 277

ನಕಲಿ ಕಾಲೇಜುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಆಯಾ ರಾಜ್ಯಗಳಿಗೆ ಸೂಚನೆ ನೀಡಲಾಗಿದ್ದು ಅವುಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ ಎಂದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close