ವರ್ಷದ ಎರಡನೇ ಗ್ರಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದ ನಡಾಲ್

Posted In : ಕ್ರೀಡೆ

ನ್ಯೂಯಾರ್ಕ್: ರಫೆಲ್ ನಡಾಲ್, ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಕೆವಿನ್ ಆಂಡರ್ಸನ್ ಅವರ ಸವಾಲನ್ನು ನೇರ ಸೆಟ್‌ಗಳಿಂದ ಸೋಲಿಸಿ ಮೂರನೇ ಬಾರಿಗೆ ಯುಎಸ್ ಓಪನ್ ಪ್ರಶಸ್ತಿಗೆ ಭಾಜನರಾದರು.

ನಡಾಲ್ ಅವರು ಮೊದಲ ಬಾರಿಯ ಫೈನಲ್ಟ್‌ ಆಂಡರ್ಸನ್‌ರನ್ನು 3-6, 3-6, 4-6 ಅಂತರದಿಂದ ಸೋಲಿಸಿದರು. ಈ ಮೂಲಕ ನಡಾಲ್ ವರ್ಷದ ಎರಡನೇ ಗ್ರಾಂಡ್ ಸ್ಲ್ಯಾಂ ಗೆದ್ದುಕೊಂಡರು. ನಡಾಲ್ ಅವರಿಗೆ 16ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಪುರುಷರ ವಿಭಾಗದಲ್ಲಿ ರೋಜರ್ ಫೆಡರರ್ 19 ಗ್ರಾಂಡ್ ಸ್ಲ್ಯಾಂ ಗೆದ್ದಿದ್ದಾರೆ.

ನಡಾಲ್ 2010 ಹಾಗೂ 2013ರಲ್ಲಿ ಯುಎಸ್ ಓಪನ್ ಗೆದ್ದಿದ್ದರು. 23 ಫೈನಲ್ ತಲುಪಿ 16 ಪ್ರಶಸ್ತಿಗಳನ್ನು ಗೆದ್ದುಕೊಂಡಂತಾಗಿದೆ. ವಿಶ್ವ ಕ್ರಮಾಂಕದಲ್ಲಿ 32ನೆ ರ್ಯಾಂಕ್ ಹೊಂದಿರುವ ಆಂಡರ್ಸನ್ ಯುಎಸ್ ಓಪನ್ ಫೈನಲ್ ತಲುಪಿದ ಅತ್ಯಂತ ಕಡಿಮೆ ರ್ಯಾಂಕಿಂಗ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

Leave a Reply

Your email address will not be published. Required fields are marked *

thirteen + 4 =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top