ವಿಶ್ವವಾಣಿ

3ಡಿ ಪ್ರಿಂಟರ್ ವಿಶ್ವದ ಮೊತ್ತ ಮೊದಲ

-ಶಶಿಧರ ಹಾಲಾಡಿ

ವಿಶ್ವದ ಮೊತ್ತ ಮೊದಲ ‘ಮುದ್ರಣ ಗೊಂಡ’ ಮನೆ ಮೊನ್ನೆ ತಾನೆ ಫ್ರಾನ್‌ಸ್ ನಲ್ಲಿ ಗೃಹಪ್ರವೇಶ ಆಯಿತು. ತಮ್ಮ ಮೂರು ಮಕ್ಕಳೊಂದಿಗೆ ನೋರ್ಡೇನ್ ಮತ್ತು ನೌರಿಯಾ ರಾಮ್‌ದಾನಿ ಕುಟುಂಬವು ಈ ಮನೆಯಲ್ಲಿ ವಾಸಿಸಲು ಆರಂಭಿಸಿದ್ದಾರೆ. ಆ ಮೂಲಕ, ಮಾನವನು ತನ್ನ ನಾಗರಿಕತೆಯ ವಿಕಾಸದಲ್ಲಿ ಮತ್ತು ತಂತ್ರಜ್ಞಾನದ ಉಪಯೋಗದಲ್ಲಿ ಮತ್ತೊಂದು ಮಜಲನ್ನು ಪ್ರವೇಶಿದ್ದಾನೆ!

3ಡಿ ಪ್ರಿಂಟರ್ ಮೂಲಕ ಮುದ್ರಣ ಮಾಡಿರುವ ಈ ಮನೆಯನ್ನು ನಿರ್ಮಿಸಲು ಸುಮಾರು  ಗಂಟೆಗಳ ಸಮಯ ಸಾಕಾಯಿತು. ಜತೆಗೆ, ಮನೆಯೊಳಗಿನ ಪರಿಕರ, ಪೀಠೋಪಕರಣ, ವಿನ್ಯಾಸ ಗಳನ್ನು ಹೊಂದಿ ಸಲು ನಾಲ್ಕು ತಿಂಗಳು ಸಾಕಾಯಿತು. ಈ ಮನೆಯನ್ನು ನಿರ್ಮಿಸುವಲ್ಲಿ ಮುಖ್ಯ ವಿನ್ಯಾಸಕಾರ ಅಥವಾ ತಂತ್ರಜ್ಞರಾಗಿ ಕೆಲಸ ಮಾಡಿದ ಬೆನೋಯ್‌ಟ್ ಫುರೆಟ್ ಅವರ ಪ್ರಕಾರ, 3ಡಿ ತಂತ್ರಜ್ಞಾನ ಉಪಯೋಗಿಸಿ ಮುದ್ರಿಸುವ ಮನೆಗಳ ವಿಶೇಷತೆ ಎಂದರೆ, ಹಣದ  ಮತ್ತು ಸಮಯದ ಉಳಿತಾಯ. ಸುಮಾರು 2,34,000 ಪೌಂಡುಗಳ ವೆಚ್ಚದಲ್ಲಿ ನಿರ್ಮಿಸಿದ ಈ ಮನೆಯು ಇದೇ ವಿಸ್ತೀರ್ಣದದಾಯಿಕ ಮನೆಗಿಂತ ಶೇ.20% ಕಡಿಮೆ ಖರ್ಚಿನಲ್ಲಿ ನಿರ್ಮಿಸಲಾಗಿದೆ ಎಂಬುದು ಅವರ ಅಂಬೋಣ. ಜತೆಗೆ, 3ಡಿ ಪ್ರಿಂಟರ್‌ಗಳನ್ನು ಉಪಯೋಗಿಸಿ, ಏನೆಲ್ಲಾ ತಯಾರಿಸ ಬಹುದು ಎಂಬುದಕ್ಕೆ ಇದೊಂದು ಅಪ್ರತಿಮ ಉದಾ ಹರಣೆ ಎಂದು ಸಹ ಅವರು ಹೇಳುತ್ತಾರೆ.

ಏಕೆಂದರೆ, 3 ಡಿ ತಂತ್ರ ಜ್ಞಾನದ ಪ್ರಿಂಟರ್‌ಗಳು ಕಳೆದ ಶತಮಾನದಲ್ಲಿ ಹೊರಬಂದಾಗ, ಅವು ಗಳನ್ನು ಕೇವಲ ವೈಜ್ಞಾನಿಕ ಪ್ರಯೋಗಗಳಿಗೆ ಮಾತ್ರ ಉಪಯೋ ಗಿಸಬಹುದು ಎಂದು ತಜ್ಞರು ಹೇಳಿದ್ದರು. ಕ್ರಮೇಣ, ಸಣ್ಣ ಪುಟ್ಟ  ಆ ಪ್ರಿಂಟರ್‌ಗಳಿಂದ ಮುದ್ರಿಸಲು ಆರಂಭಗೊಂಡಾಗ, 3ಡಿ ಪ್ರಿಂಟರುಗಳ ಅಗಾಧ ಸಾಧ್ಯತೆಯ ಕುರಿತು ವಿಜ್ಞಾನಿಗಳು ಗಮನ ಹರಿಸತೊಡಗಿದರು.

ವಿವಿಧ ಯಂತ್ರಗಳ ಸಣ್ಣ ಪುಟ್ಟ ಬಿಡಿಭಾಗಗಳ ಲಭ್ಯತೆ ಇಲ್ಲದಾಗ, ಅಥವಾ ನಾಲ್ಕಾರು ತಿಂಗಳುಗಳ ಕಾಲಾವಕಾಶ ಅವಶ್ಯ ಎನಿಸಿದಾಗ, 3ಡಿ ತಂತ್ರಜ್ಞಾನ ಉಪ ಯೋಗಿಸಿ ಅಂತಹ ಬಿಡಿಭಾಗಗಳನ್ನು ತಯಾರಿಸುವ ಪದ್ಧತಿ ಈಗ ಎಲ್ಲೆಡೆ ಚಾಲ್ತಿಯಲ್ಲಿದೆ. ಅಲ್ಲದೆ, ದೂರದ ವಿಶ್ವವಿದ್ಯಾಲಯದಲ್ಲೋ, ಪ್ರಯೋಗ ಶಾಲೆಯಲ್ಲೋ ಹೊಸದಾಗಿ ರೂಪಿಸಿದ ಸಣ್ಣ ಪುಟ್ಟ ಯಂತ್ರ,  ಭಾಗಗಳು, ಸರ್ಕ್ಯೂಟ್‌ಗಳು ಮೊದಲಾ ದವುಗಳನ್ನು ಇನ್ನೆಲ್ಲೋ ಸ್ಥಾಪಿಸಲಾಗಿರುವ 3ಡಿ ಪ್ರಿಂಟರ್ ಉಪಯೋಗಿಸಿ ಮುದ್ರಿಸುವ ಪರಿ ಪಾಠವೂ ಬಳಕೆಯಲ್ಲಿದೆ.

ದೂರದ ಊರಿನಿಂದ ಅಂತಹ ವಸ್ತುಗಳನ್ನು ರವಾನಿಸಲು ಅಗತ್ಯವಿರುವ ಸಮಯದ ಉಳಿತಾಯ ಮತ್ತು ಸಂಭಾವ್ಯ ರಿಸ್ಕ್ ತಪ್ಪಿಸಲು ಸಾಧ್ಯ.

3ಡಿ ಮನೆಯ ವಿಶ್ವದಾಖಲೆ

ಮನೆಯನ್ನು ಸಹ 3ಡಿ ತಂತ್ರಜ್ಞಾನದ ಮೂಲಕ ತಯಾರಿಸಲು ಸಾಧ್ಯ ಮತ್ತು ಅಂತಹ ಮನೆಯಲ್ಲಿ ವಾಸಿಸಲು ಸಾಧ್ಯ ಎಂಬುದನ್ನು ಫ್ರಾನ್ಸ್ ನ ದಂಪತಿ ಗಳು ವಿಶ್ವಕ್ಕೇ ತೋರಿಸಿಕೊಟ್ಟು, ಹೊಸ ದಾಖಲೆ  ಮಾಡಿದ್ದಾರೆ. ಮುಂದಿನ ದಶಕಗಳಲ್ಲಿ, ಶತಮಾನಗಳಲ್ಲಿ, ‘3ಡಿ ತಂತ್ರಜ್ಞಾನದಿಂದ ತಯಾ ರಿಸಿದ ಮೊದಲ ಮನೆಯಲ್ಲಿ ವಾಸಿಸಿದವರು’ ಎಂಬ ವಿಶೇಷಣವು ಈ ದಂಪತಿಗಳ ಹೆಸರಿಗೆ ಅಂಟಿಕೊಂಡಿರುತ್ತದೆ ಎಂಬು ದಂತೂ ಸತ್ಯ. ಹಾಗೆ ನೋಡಹೋದರೆ, ಯಾವುದೇ ವಸ್ತುವನ್ನು ಸಹ 3ಡಿ ಪ್ರಿಂಟರ್‌ಗಳನ್ನು ಉಪಯೋಗಿಸಿ ತಯಾರಿ ಸಲು ಸಾಧ್ಯ. ಇಲ್ಲಿರುವ ತೊಡಕು ಎಂದರೆ, ಅಂತಹ ಪ್ರಿಂಟರ್‌ಗಳ ಅಸಾಧ್ಯ ದುಬಾರಿ ಬೆಲೆ, ಮುದ್ರಿಸಲು ಅಗತ್ಯವಿರುವ ವಿನ್ಯಾಸ, ಪರಿಕರ ಮತ್ತು ಸಾಮಗ್ರಿಗಳ  ಬೆಲೆ ಇವುಗಳಿಂದಾಗಿ, 3ಡಿ ತಂತ್ರಜ್ಞಾನದಿಂದ  ವಸ್ತುಗಳು ದುಬಾರಿಯಾಗಿದ್ದು, ಸಾರ್ವತ್ರಿಕವಾಗಿ ಬಳಕೆಗೆ ತರಲು ಕಷ್ಟ. ಉದಾಹರಣೆಗೆ, ಮನೆಯ ಗೋಡೆಗಳನ್ನು ಮುದ್ರಿಸುವ ಅಥವಾ ಎರಕ ಹೊಯ್ಯುವ 3ಡಿ ಪ್ರಿಂಟರ್, ಆ ಗೋಡೆಯ ಎತ್ತರವನ್ನು ಎಟಕಬಲ್ಲಷ್ಟು ದೊಡ್ಡದಾಗಿರ ಬೇಕಾಗಿರುತ್ತದೆ!

ಭವಿಷ್ಯದ ಮನೆಗಳು ಇವು

ಫ್ರಾನ್ಸ್ ನಲ್ಲಿ ರಾಮ್‌ದಾನ್ ದಂಪತಿಗಳಿಗೆ ಈ ಮನೆಯನ್ನು ನಿರ್ಮಿಸಿಕೊಟ್ಟಿರುವ ಬೆನೋಯ್‌ಟ್ ಫುರೆಟ್ ಅವರ ವಿಶ್ಲೇಷಣೆಯಂತೆ, ಮುಂದಿನ  ದಿನಗಳಲ್ಲಿ ಇಂತಹ ಮನೆಗಳನ್ನು ಇನ್ನಷ್ಟು ಕಡಿಮೆ ವೆಚ್ಚ ದಲ್ಲಿ ನಿರ್ಮಿಸಲು ಸಾಧ್ಯ.