About Us Advertise with us Be a Reporter E-Paper

Breaking Newsಪ್ರಚಲಿತಲೈಫ್ ಸ್ಟೈಲ್ವಿದೇಶ
Trending

ಫ್ಯಾಷನ್ ಲೋಕಕ್ಕೆ ಎಂಟ್ರಿಯಾಯ್ತು ಡೈಮಂಡ್ ಲಿಪ್ ಆರ್ಟ್..!

ಫ್ಯಾಷನ್ ಲೋಕದಲ್ಲಿ ದಿನಕ್ಕೊಂದು ಕಲೆಗಳು ಅನಾವರಣಗೊಳ್ಳುತ್ತಿವೆ. ವಿವಿಧ ವೆರೈಟಿ ಡಿಸೈನ್ಸ್, ನೈಲ್ ಆರ್ಟ್, ಹೇರ್‌ ಆರ್ಟ್, ಐ ಆರ್ಟ್ ಮುಂತಾದವುಗಳಿಗೆ ಹೆಂಗಳೆಯರು ಮನಸೋತಿದ್ದಾರೆ. ಮಹಾನಗರಗಳಲ್ಲಿ ಮಾತ್ರವಲ್ಲ ಚಿಕ್ಕ-ಪುಟ್ಟ ನಗರಗಳಿಗೂ ಈ ಫ್ಯಾಷನ್ ಲೋಕ ಕಾಲಿಟ್ಟಿದೆ.

ಇದೀಗ ಆಸ್ಟ್ರೇಲಿಯಾದ ಜ್ಯುವೆಲ್ಲರಿ ಕಂಪನಿಯೊಂದು ಬರೋಬ್ಬರಿ 3.78 ಕೋಟಿ ರೂ. ಮೌಲ್ಯದ ವಜ್ರಗಳನ್ನು ಬಳಸಿ ವಿಶ್ವದ ಅತ್ಯಂತ ದುಬಾರಿ ಲಿಪ್ ಆರ್ಟ್ ಡಿಸೈನ್ ಮಾಡುವ ಮೂಲಕ ಗಿನ್ನಿಸ್ ಬುಕ್‍ನಲ್ಲಿ ರೆಕಾರ್ಡ್ ಮಾಡಿದೆ. ಆಸ್ಟ್ರೇಲಿಯಾದ ರೋಸೆನ್‍ಡ್ರಾಫ್ ಎಂಬ ಜ್ಯುವೆಲ್ಲರಿ ಕಂಪನಿ ಈ ಆರ್ಟ್ ತಯಾರಿಸುವ ಮೂಲಕ ಮೋಸ್ಟ್ ವ್ಯಾಲುವೆಬಲ್ ಲಿಪ್ ಆರ್ಟ್ ಎಂಬ ದಾಖಲೆ ಬರೆದಿದೆ.

ಮಾಡೆಲ್ ಒಬ್ಬರ ತುಟಿ ಮೇಲೆ ಸುಮಾರು 3.78 ಕೋಟಿ ರೂ. ಮೌಲ್ಯದ ಓಟ್ಟು 126 ಡೈಮಂಡ್‍ನಿಂದ ಅಲಂಕಾರ ಮಾಡಿದೆ. ಮೊದಲು ತುಟಿಗಳ ಮೇಲೆ ಬ್ಲ್ಯಾಕ್‌ ಲೇಯರ್ ಲಿಪ್‌ಸ್ಟಿಕ್ ಹಾಕಿ, ಬಳಿಕ ಡೈಮಂಡ್‌ ಅಂಟಿಸಿದ್ದಾರೆ. ಇದನ್ನು ಅಲಂಕರಿಸಲು ಸುಮಾರು ಎರಡೂವರೆ ಗಂಟೆಗಳ ಕಾಲ ತೆಗೆದುಕೊಳ್ಳಲಾಗಿದೆ. 22.92 ಕ್ಯಾರೆಟ್‌ನ 126 ಡೈಮಂಡ್‌ಗಳಿಂದ ಈ ಲಿಪ್‌ ಆರ್ಟ್‌ ಅಲಂಕೃತಗೊಂಡಿದೆ. ಕಂಪನಿಯ 50ನೇ ವರ್ಷದ ವಾರ್ಷಿಕೋತ್ಸವಕ್ಕಾಗಿ ಈ ದುಬಾರಿ ಲಿಪ್ ಆರ್ಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

Tags

Related Articles

Leave a Reply

Your email address will not be published. Required fields are marked *

Language
Close